ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ್‌ ಠಾಣೆ :- ದಿನಾಂಕ:02/01/2023 ರಂದು 07:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ  ಆಸಿಮ್ ಫಹದ ತಂದೆ ರಫತ್ ಸಲೀಂ ವಯ:26 ವರ್ಷ ಜಾತಿ:ಮುಸ್ಲಿಂ ಉ: ಎಮ್.ಟೆಕ್. ವಿದ್ಯಾರ್ಥಿ ಸಾ|| ವಿದ್ಯಾನಗರ, ಕಲಬುರಗಿ ಇವರು ಹಲ್ಲೆಗೊಳಗಾಗಿ ಕುರಾಳ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ಫಿರ್ಯಾದಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದಿದ್ದು ಸದರಿ ಫಿರ್ಯಾದಿ ಹೇಳಿಕೆ ಸಾರಾಂಶವೆನೆಂದರೆ, ನಮ್ಮ ತಂದೆ ತಾಯಿಗೆ ನಾವು ಎರಡು ಜನ ಹೆಣ್ಣುಮಕ್ಕಳು ಹಾಗೂ ಎರಡು ಜನ ಗಂಡುಮಕ್ಕಳು ಇರುತ್ತೇವೆ. ನಮ್ಮ ತಂದೆ ನಿವೃತ್ತ ಸರಕಾರಿ ನೌಕರನಾಗಿರುತ್ತಾರೆ ಹಾಗೂ ನಮ್ಮ ತಾಯಿ ದುರ್ದಾನ ಫಾತಿಮಾ ಇವರು ಮನೆ ಕೆಲಸ ಮಾಡಿಕೊಂಡಿರುತ್ತಾರೆ. ವಿದ್ಯಾನಗರದಲ್ಲಿ ನಮ್ಮ ತಂದೆ ಇನ್ನೋಂದು ಮನೆ ಕಟ್ಟಿದ್ದು ನಾವೆಲ್ಲರೂ ಅಲ್ಲಿಯೇ ಇರುತ್ತೇವೆ. ಸಿ.ಟಿ. ಕಾರ ವಾಶ ಹತ್ತಿರ ಇದ್ದದ್ದು ನಮ್ಮ ತಂದೆಯ ಪಿತ್ರಾರ್ಜಿತ ಮನೆ ಇರುತ್ತದೆ. ಸದರಿ ಮನೆಯಲ್ಲಿ ನಮ್ಮ ತಂದೆ ಮತ್ತು ಇನ್ನೂಳಿದ ಅವಳಿ ತಮ್ಮಂದಿರಾದ ಆಜಮ್ ಅಹ್ಮದ್ ಮತ್ತು ಮುಕ್ರಮ ಅಹ್ಮದ ಇವರಿಗೂ ಸಹ ಪಾಲು ಇರುತ್ತದೆ. ಆಜಮ್ ಅಹ್ಮದ್ ನಮ್ಮ ಚಿಕ್ಕಪ್ಪ ಇವರು ತಮ್ಮ ಪಾಲಿನ ಮನೆಯನ್ನು ಬಳಸುವುದಕ್ಕಾಗಿ ಮಹಾನಗರ ಪಾಲಿಕೆಯಿಂದ ಪರವಾನಿಗೆ ಪಡೆದುಕೊಂಡಿರುತ್ತಾರೆ. ಸದರಿ ಮನೆಯಲ್ಲಿ ಅವರ ಪಾಲಿನ ಮನೆಯನ್ನು ಬಳಸಿದರೇ ಅವರ ಮನೆಯ ಮೇಲೆ ಇರುವ ನಮ್ಮ ಮನೆಯು ಸಹ ನೆಲಸಮವಾಗುತ್ತದೆ ಅಂತ ನಮ್ಮ ಇನ್ನೊಬ್ಬ ಚಿಕ್ಕಪ್ಪ ಮುಕ್ರಮ ಅಹ್ಮದ ಇವರು ಮಾನ್ಯ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡಿದ್ದು ಇರುತ್ತದೆ. ಇದರಿಂದ ಅವರ ಮತ್ತು ನಮ್ಮ ಮಧ್ಯೆ ವೈಮನಸ್ಸು ಉಂಟಾಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ:02/01/2023 ರಂದು ಮಧ್ಯಾನ್ಹ 03:00 ಗಂಟೆ ಸುಮಾರಿಗೆ ನಮ್ಮ ಚಿಕ್ಕಪ್ಪ ಆಜಮ್ ಅಹ್ಮದ ಇವರು  ಮೆಲ್ಮಹಡಿಯಲ್ಲಿ ಇರುವ ನಮ್ಮ ಮನೆಯನ್ನು ಬಿಳುಸಿತ್ತಿದ್ದಾಗ ನಾನು ಮತ್ತು ನಮ್ಮ ಸಂಬಂಧಿಕ ಮಹ್ಮದ ರಹಿಮ್ ಇಬ್ಬರೂ ಕೂಡಿ ಹೋಗಿ ನ್ಯಾಯಾಲಯದ ತಡೆಯಾಜ್ಞೆ ಇರುತ್ತದೆ, ಏಕೆ ಮನೆಯನ್ನು ಒಡೆಯುತ್ತಿದ್ದಿರಿ ಅಂತ ಕೇಳಿದಾಗ ನಮ್ಮ ಚಿಕ್ಕಪ್ಪ ಆಜಮ್ ಇತನು ನನಗೆ ಅವಾಚ್ಯವಾಗಿ ಬೈಯುತ್ತಾ “ಏ ರಾಂಡ ಕೆ ಇದರ ಆ ಕೆ ಮೇರೆ ಕೋ ಪೂಚನೇವಾಲೆ ತು ಕೊನ ಹೈ ಸಾಲೆ” ಅಂತ ಬೈದು ಕೈಯಿಂದ ನನ್ನ ಎಡಗಡೆ ಕಪಾಳದ ಮೇಲೆ ಹೊಡೆದಿದ್ದು ಅಲ್ಲದೇ ಗೋಡೆ ಕೆಡವಲು ಉಪಯೋಗಿಸುವ ಸುತ್ತಿಗೆಯಿಂದ ನನ್ನ ಬಲಗಾಲ ಮೊಣಕಾಲ ಮೇಲೆ ಹೊಡೆದಿದ್ದು ಅಲ್ಲದೇ ಅಲ್ಲಿಂದ ಹೋಗುವಾಗ “ ಇವತ್ತು ನಿನಗೆ ಜೀವಂತ ಬಿಟ್ಟಿದ್ದೆನೆ ಇನ್ನೋಮ್ಮೆ ನನ್ನ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ವಗೈರೆಯಾಗಿ  ಇದ್ದ  ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 30/12/2022 ರಂದು ಸುಮಾರು 13:30 ಫಿರ್ಯಾದಿಯಾದ ಸೈಯದ್ ಮಂಜೂರ ಉಲ್ ಇವರ ಪ್ಯಾಕ್ಟ್ ಇಂಡಿಯಾ ಚನಲ್ ಆಫಿಸ್ ಗೆ ಎಕ್ಬಾಲ್ ಎಂಬಾತನು ಬಂದು ಹಣ ಕೋಡುವ ವಿಚಾರಕ್ಕೆ ಫಿರ್ಯಾದಿಗೆ ಅವಾಶ್ಚ ಶಬ್ದಗಳಿಂದ ಬೈದು  ಹಾಗೂ ಪ್ಲಾಸ್ಟಿಕ್ ಖುರ್ಚಿಯಿಂದ ಹೋಡೆದು ಗುಪ್ತಗಾಯ ಪಡಿಸಿದ್ದು, ಹಾಗು ನನ್ನ ಕಛೆರಿಯ ಖುರ್ಚಿಯನ್ನು ಮುರಿದು ಹಾನಿ ಮಾಡಿದ್ದು ಹಾಗೂ ನನಗೆ ಜೀವ ಬೇದರಿಕೆ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕ: 02/01/2023 ರಂದು 3.00 ಪಿ.ಎಮ್‌ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ MLC ವಸೂಲಾಗಿದ್ದ ಪ್ರಯುಕ್ತ MLC ತರಲು ಹೊರಟು ಗಾಯಾಳು ಸಾಗರ ತಂದೆ ಶರಣಪ್ಪಾ ಜೋಕೆ ವಯ-18 ವರ್ಷ ಜಾ||ಕಬ್ಬಲಿಗ ||ವಿದ್ಯಾರ್ಥಿ ಸಾ||ಜೈಭವಾನಿ ಚೌಕ ಹತ್ತಿರ ಲಾಲಗಿರಿ ಕ್ರಾಸ ಕಲಬುರಗಿರವರ ಹೇಳಿಕೆ ತೆಗೆದುಕೊಂಡು ಮರಳಿ 4:30 ಪಿ.ಎಮ್ ಕ್ಕೆ ಠಾಣೆಗೆ ಬಂದಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ನಾನು ಈ ಮೇಲ್ಕಾಣಿಸಿದ ಹೆಸರು ವಿಳಾಸದ ನಿವಾಸಿತನಿದ್ದು ವಿದ್ಯಾಭ್ಯಾಸ ಮಾಡಿಕೊಂಡು ತಂದೆ ತಾಯಿಯೊಂದಿಗೆ ವಾಸವಾಗಿರುತ್ತೇನೆ. ನಮ್ಮ ತಂದೆ ತಾಯಿಗೆ ನಾವು ನಾಲ್ಕು ಜನ ಮಕ್ಕಳಿದ್ದು ನಾನು ಮೂರನೆಯವನಾಗಿರುತ್ತೇನೆ. ನಾನು ಮತ್ತು ನನ್ನ ಗೆಳೆಯರು ಪ್ರತಿದಿನ ಗಂಗಾನಗರದ ಶಿವಾಜಿ ಪಾರ್ಕ ಹತ್ತಿರ ಕುಳಿತುಕೊಂಡಿರುತ್ತೇವೆ. ಈ ಸಮಯದಲ್ಲಿ ನಮ್ಮ ಪಕ್ಕದ ಬಡಾವಣೆಯ ನಿವಾಸಿಗಳಾದ ಸಿದ್ದು ಪವಾರ ಹಾಗೂ ಇತರರು ಬಂದು ವಿನಾಕಾರಣ ಜಗಳ ಮಾಡುತ್ತಾ ಬಂದಿರುತ್ತಾರೆ. ಆದರೂ ಕೂಡಾ ನಾವು ಸುಮ್ಮನೆ ಇದ್ದಿರುತ್ತೇವೆ. ಹೀಗೆ ಇರುವಾಗ ದಿನಾಂಕ:31.12.2022 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ನಾನು ನನ್ನ ಗೆಳೆಯರಾದ ಸಾಗರ ಹಾಗೂ ಶ್ರೀಶೈಲ್ ಆನಂದ ಕೂಡಿಕೊಂಡು ಶಿವಾಜಿ ಪಾರ್ಕ ಹತ್ತಿರ ಕುಳಿತುಕೊಂಡಿರುವಾಗ ಸಿದ್ದು ಪವಾರ, ನಿರಂಜನ, ಪಾಪು, ಡುಮ್ಮಾಸಚೀನ, ಶಿವು, ಮಹೇಶ ಹಾಗೂ ಇತರರು ಕೂಡಿಕೊಂಡು ಬಂದವರೆ ಏ ಭೋಸಡಿಮಗನೆ ಈ ಕಡೆ ಬಾ ಅಂತಾ ಕರೆದು ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ಯಾಕೆ ವಿನಾಃಕಾರಣ ಬೈಯುತ್ತಿದ್ದಿ ಅಂತಾ ಕೇಳಿದ್ದಕ್ಕೆ ಸಿದ್ದುಪವಾರ, ನಿರಂಜನ ಇವರು ನನ್ನ ಎಧೆಯ ಮೇಲಿನ ಅಂಗಿ ಹಿಡಿದಾಗ ಮಹೇಶ, ಶಿವು, ಇವರು ನನಗೆ ಕಾಲಿನಿಂದ ಮೊಳಕಾಲಿನ ಮೇಲೆ ಜಾಡಿಸಿ ಒದ್ದಾಗ ನಾನು ಕೆಳಗೆಬಿದ್ದಿರುತ್ತೇನೆ. ಅಷ್ಟರಲ್ಲೆ ನನ್ನ ಗೆಳೆಯರಾದ ಸಾಗರ, ವಿಠ್ಠಲ ರೆಡ್ಡಿ ಇವರು ಜಗಳ ಬಿಡಿಸಲು ಬಂದಾಗ ಅವರಿಗೂ ಸಹ ಡುಮ್ಮಾಸಚೀನ ಈತನು ಪೈಪನಿಂದ ಹೊಡೆದು ಕೆಳಗೆ ಬೀಳಿಸಿ ಹೊಡೆಯುತ್ತಿರವಾಗ ನಿರಂಜನ ಹಾಗೂ ಇತರರು ಕೂಡಿ ಏ ಈ ಭೋಸಡಿ ಮಕ್ಕಳಿಗೆ ಬಿಡಬ್ಯಾಡರಿ ಅಂತಾ ಎಲ್ಲರೂ ಸೇರಿ ಪೈಫನಿಂದ ಎಧೆಗೆ, ಬೆನ್ನಿಗೆ, ಕಾಲಿಗೆ ಹೊಡೆದು ಗುಪ್ತಗಾಯ ಪಡಿಸಿದ್ದು ಅಷ್ಟರಲ್ಲಿ ಮಹೇಶ ಈತನು ಅಲ್ಲೆ ಬಿದ್ದಿರುವ ಹಿಡಿಗಾತ್ರದ ಕಲ್ಲಿನಿಂದ ಹೊಡೆದು ಗುಪ್ತಗಾಯ ಮತ್ತು ರಕ್ತ ಗಾಯ ಪಡಿಸಿರುತ್ತಾರೆ. ನಂತರ ನನ್ನ ಗೆಳೆಯರು ಬಂದು ಜಗಳ ಬಿಡಿಸಿದ್ದು ಇರುತ್ತದೆ. ಒಂದು ವೇಳೆ ಜಗಳ ಬಿಡಿಸದೆ ಇದ್ದಲ್ಲಿ ನನ್ನನ್ನು ಹೊಡೆದು ಖಲಾಸ ಮಾಡುತ್ತಿದ್ದರು ಮತ್ತೆ ಇನ್ನೊಂದು ಸಾರಿ ಸಿಕ್ಕರೆ ನಿಮಗೆ ಖಲಾಸ ಮಾಡುತ್ತಿದ್ದರು ಮತ್ತೆ ಇನ್ನೊಂದು ಸಾರಿ ಸಿಕ್ಕರೆ ನಿಮಗೆ ಜೀವಂತವಾಗಿ ಬಿಡುವದಿಲ್ಲಾ ಅಂತಾ ಜೀವದ ಭಯಾ ಬೆದರಿಕೆ ಹಾಕಿರುತ್ತಾರೆ ನಮ್ಮೊಂದಿಗೆ ವಿನಾಃಕಾರಣ ಜಗಳ ತೆಗೆದು ಹೊಡೆದವರ ವಿರುಧ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್-ಅರ್ಬನ್ ಪೊಲೀಸ್‌ ಠಾಣೆ :- ದಿನಾಂಕ:27/10/2021 ಫಿರ್ಯಾದಿಯು ಮಾನ್ಯ ನ್ಯಾಯಾಲಯದ ಮೂಲಕ ಖಾಸಗಿ ದೂರು ಸಲ್ಲಿಸಿದ ಸಾರಾಂಶವೇನೆಂದರೆ ಫಿರ್ಯಾದಿಯ ಮಕ್ಕಳು ದಿನನಿತ್ಯದಂತೆ ಕೆಲಸಕ್ಕೆಂದು ಹೋಗುತ್ತಿದ್ದಾಗ ಸದರಿ ಆರೋಪಿತರು ತಡೆದು ನಿಲ್ಲಿಸಿ ಕೊಲೆ ಮಾಡುವ ಉದ್ದೇಶದಿಂದ ಜಂಬೆ ಮತ್ತು ರಾಡದಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದ ಬಗ್ಗೆ ದೂರು ಬಂದಿದ್ದು ಸದರಿ ಆರೋಪಿತರ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 02/01/2023 ರಂದು 1:00 ಎ.ಎಂ ಕ್ಕೆ  ಶ್ರೀ ಮಹೆಬೂಬಸಾಬ ಎ.ಎಸ್.ಐ ರವರು ಯುನೈಟೆಡ್ ಆಸ್ಪತ್ರೆಯಿಂದ ಗಾಯಾಳು ವಿರೇಶ ಈತನ ತಂದೆ ಬಸವರಾಜ ಇವರ ಹೇಳಿಕೆ ಮತ್ತು ವಿರೇಶ ಇತನ ಎಂ.ಎಲ್.ಸಿಯನ್ನು ತಂದು ಠಾಣೆಗೆ ಹಾಜರಪಡಿಸಿದ್ದು, ಸದರಿ ಹೇಳಿಕೆ ಸಾರಾಂಶವೆನೆಂದರೆ, ನನಗೆ ವಿರೇಶ ಅಂತಾ ಮಗ, ಭಾರತಿ, ಅಶ್ವಿನಿ ಅಂತಾ ಎರಡು ಜನ ಹೆಣ್ಣು ಮಕ್ಕಳು ಇರುತ್ತಾರೆ. ಮಗಳು ಭಾರತಿ ಇವಳ ಮದುವೆ ಆಗಿದ್ದು, ಗಂಡನ ಮನೆಯಲ್ಲಿ ವಾಸವಿರುತ್ತಾಳೆ. ನನ್ನ ಮಗ ವಿರೇಶ ಇತನು ಫೋಟೋ ಗ್ರಾಫರ್ ಕೆಲಸ ಮಾಡಿಕೊಂಡು ವಾಸವಿರುತ್ತಾನೆ. ಇಂದು ದಿನಾಂಕ: 01/01/2023 ರಂದು ಸಾಯಂಕಾಲ 7:30 ಗಂಟೆಯ ಸುಮಾರಿಗೆ ನಾನು ನನ್ನ ಹೆಂಡತಿ ವಿಜಯಲಕ್ಷ್ಮೀ ಸೊಸೆ ನಿಲಂಬಿಕಾ ಎಲ್ಲರೂ ಕೂಡಿಕೊಂಡು ಮನೆಯಲ್ಲಿದ್ದಾಗ ನನ್ನ ಮಗ ವಿರೇಶ ಇತನು ಗೋದಿ ಬಿಸಿಕೊಂಡು ಬರಲು ಗಿರಣಿಗೆ ಹೋಗುತ್ತೇನೆ ಅಂತಾ ಹೇಳಿ ಹೋದನು. ರಾತ್ರಿ ಅಂದಾಜು 09:15 ಗಂಟೆಯ ಸುಮಾರಿಗೆ ನನ್ನ ಸೊಸೆಯಾದ ನಿಲಾಂಬಿಕಾ ಇವಳ ಪೋನಿಗೆ ನನ್ನ ಮಗ ವಿರೇಶ ಇತನ ಪೋನಿನಿಂದ ಯಾರೋ ಪೋನ ಮಾಡಿ ಈ ಪೋನ ನಂಬರದವರು ತಮಗೆ ಏನು ಆಗುತ್ತಾರೆ ಅಂತಾ ಕೇಳಿದಾಗ ನನ್ನ ಸೊಸೆ ನಿಲಾಂಬಿಕಾ ಇವಳು ಅವರು ನನ್ನ ಗಂಡ ವಿರೇಶ ಇರುತ್ತಾರೆ ಅವರಿಗೆ ತಿಳಿಸಿದಾಗ ಅವರು ನನ್ನ ಸೊಸೆ ನಿಲಾಂಬಿಕಾ ಇವಳಿಗೆ ತಿಳಿಸಿದ್ದೇನೆಂದರೆ, ನಿನ್ನ ಗಂಡ ವಿರೇಶ ಇವರಿಗೆ ಯಾರೋ ಅಪರಿಚಿತರು ಯಾವುದೋ ಕಾರಣಕ್ಕೆ ಕಲಬುರಗಿ ನಗರದ ಸಿಟಿ ಬಸ್ಸ ಸ್ಟ್ಯಾಂಡ ಎದುರುಗಡೆ ಬಜಿ ಬಂಡಿ ಹತ್ತಿರ ತಕರಾರು ಮಾಡಿ ಜಗಳ ಮಾಡುತ್ತಾ ಬೈದಾಡುತ್ತಾ ಶೆಟ್ಟಿ ಎಲೆಕ್ಟಾçನಿಕ್ಸ್ ಅಂಗಡಿಯ ಮುಂದುಗಡೆ ವಿರೇಶ ಇತನ ತಲೆಯ ಎಡ ಭಾಗಕ್ಕೆ ಕಲ್ಲಿನಿಂದ ಹೊಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡುತ್ತಿದ್ದಾಗ ಅಲ್ಲೇ ಇದ್ದ ಯಾರೋ ಜನರು ಜಗಳ ಬಿಡಿಸಿದ್ದು, ಅವರಿಗೆ ಉಪಚಾರ ಕುರಿತು ಅಂಬುಲೆನ್ಸ್ದಲ್ಲಿ ಹಾಕಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸುತ್ತಿದ್ದೇವೆ. ನೀನು ನೇರವಾಗಿ ಆಸ್ಪತ್ರೆಗೆ ಬನ್ನಿರಿ ಅಂತಾ ತಿಳಿಸಿರುತ್ತಾರೆ. ಎಂದು ನಮ್ಮ ಸೊಸೆಯಿಂದ ಗೊತ್ತಾಗಿ ನಾನು ನನ್ನ ಹೆಂಡತಿ ಸೊಸೆ ನಿಲಾಂಬಿಕಾ ಕೂಡಿಕೊಂಡು ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಗ ವಿರೇಶ ಈತನಿಗೆ ನೋಡಲು ಅವನ ತಲೆಯ ಎಡಭಾಗಕ್ಕೆ ಭಾರಿ ರಕ್ತಗಾಯವಾಗಿ ಬೆಹೋಷ್ ಸ್ಥಿತಿಯಲ್ಲಿದ್ದನು. ಅವನು ಮಾತನಾಡುತ್ತಿರಲಿಲ್ಲ. ನಂತರ ನಾವು ಅಲ್ಲಿಂದ ನಮ್ಮ ಮಗ ವಿರೇಶನಿಗೆ ಹೆಚ್ಚಿನ ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ನನ್ನ ಮಗ ವಿರೇಶ ಈತನಿಗೆ ಯಾರೋ ಅಪರಿಚಿತರು ಯಾವುದೋ ಕಾರಣಕ್ಕೆ ದಿನಾಂಕ: 01/01/2023 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ಸಿಟಿ ಬಸ್ಸ್ ಸ್ಟ್ಯಾಂಡ್ ಎದುರುಗಡೆ ಇರುವ ಬಜಿ ಬಂಡಿ ಹತ್ತಿರ ಜಗಳ ತೆಗೆದು ತಕರಾರು ಮಾಡುತ್ತಾ , ಬೈಯ್ಯುತ್ತಾ ಪಟ್ಟಣ ಶೆಟ್ಟಿ ಎಲೆಕ್ಟಾçನಿಕ್ಸ್ ಅಂಗಡಿ ಎದುರುಗಡೆ ಕಲ್ಲಿನಿಂದ ಅವನ ತಲೆಯ ಎಡಭಾಗಕ್ಕೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ. ಕೊಲೆ ಮಾಡಲು ಪ್ರಯತ್ನಿಸಿದ ಯಾರೋ ಅಪರಿಚಿತ ಜನರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತಿಯಾದ ಕ್ರಮ ಜರುಗಿಸಲು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ್‌ ಠಾಣೆ :- ದಿನಾಂಕ: 02/01/2023 ರಂದು 06.15 ಪಿಎಂ ಕ್ಕೆ ಠಾಣೆಯಲ್ಲಿ ಸ್ವೀಕೃತವಾಗಿದ್ದು, ಸದರ ಫಿರ್ಯಾದಿ ದೂರು ಅರ್ಜಿ ಸಾರಾಂಶದ ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಾನು ಶ್ರೀಮತಿ ರಾಮಲಮ್ಮ ಗಂಡ ಲಿಂಗಯ್ಯ ದರ್ಶನಂ ವ: 50ವರ್ಷ ಉ:ಕೂಲಿ ಕೆಲಸ ಜಾತಿ:ಪ.ಜಾತಿ (ಮಾದಿಗ) ಸಾ:ಕೊಮ್ಮೆಪಲ್ಲೆ ಗ್ರಾಮ, ಪೋಸ್ಟ್ ತಿರುಚಪಲ್ಲೆ, ದೆವರಕುಂಡ ಮಂಡಲ ಜಿ:ನಲಗುಂಡ ರಾಜ್ಯ: ತೆಲಂಗಾಣ. ಇದ್ದು ಈ ಮೂಲಕ ತಮ್ಮಲ್ಲಿ ಫಿರ್ಯಾದಿ ದೂರು ಸಲ್ಲಿಸುವುದೆನೆಂದರೆ, ನಾನು ಕೂಲಿ ಕೆಲಸ ಮಾಡಿಕೊಂಡು ಮಗ ದರ್ಶನಂ ಶ್ರೀಶೈಲಂ ತಂದೆ ಲಿಂಗಯ್ಯ ವಯ:27 ವರ್ಷ ಮತ್ತು ಮಗಳು ಅಂಜಲಿ ಇವರೊಂದಿಗೆ ವಾಸವಾಗಿರುತ್ತೆನೆ, ನನ್ನ ಗಂಡ ಲಿಂಗಯ್ಯ ದರ್ಶನಂ ಇವರು ಸುಮಾರು 12 ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ, ನನ್ನ ಮಗ ದರ್ಶನಂ ಶ್ರೀಶೈಲಂ ಇತನು ನಮ್ಮ ಊರಿನ ಪಕ್ಕದ ಮಂಗಲೋನಿ ಬಾವಿ ಗ್ರಾಮದ ಎಟೆಲ್ಲಿ ತಿರುಪತಯ್ಯ ತಂದೆ ರಾಮಲಕ್ಷ್ಮಯ್ಯ ಇವರ  ಲಾರಿ ನಂಬರ್ TS-08 UD 2268 ನೇದ್ದರ ಮೇಲೆ ಈಗ ಸುಮಾರು 4 ತಿಂಗಳಿಂದ ಅವರ ಹತ್ತಿರ ಲಾರಿಯ ಮೇಲೆ ಕ್ಲಿನರ್ ಕೆಲಸ ಮಾಡಿಕೊಂಡಿರುತ್ತಾನೆ, ಹೀಗಿದ್ದು ದಿನಾಂಕ:26/12/2022 ರಂದು ಮಂಜಾನೆ 10.00 ಗಂಟೆಗೆ ನನ್ನ ಮಗ ದರ್ಶನಂ ಶ್ರೀಶೈಲಂ ಇತನು ನಾನು ಲಾರಿ ಮೇಲೆ ಕ್ಲಿನರ್ ಕೆಲಸಕ್ಕೆ ಹೊಗುತ್ತೆನೆ ಅಂತಾ ಮನೆಯಲ್ಲಿ ಹೇಳಿ ಬಂದಿರುತ್ತಾನೆ. ಆದರೆ ದಿನಾಂಕ:01.01.2023 ರಂದು ರಾತ್ರಿ 8.00 ಗಂಟೆಗೆ ನನ್ನ ಮಗ ನನಗೆ ಪೋನ್ ಮಾಡಿ ನಾವು ಸದರಿ ಲಾರಿಯು ತುಮುಕುಂಟಾದಲ್ಲಿ ಲೋಡ ಮಾಡಿಕೊಂಡು ಖಾಲಿ ಮಾಡಲು ಕಲಬುರಗಿಯ ಗಂಜನಲ್ಲಿರು ಶ್ರೀ ಅಯ್ಯನಾರ ದಾಲ್ ಮಿಲ್ಲ್ ನಾಡರ್ ಕಾಂಪ್ಲೆಕ್ಸ ಮೋಮಿನಪೂರದಲ್ಲಿ ನಿಲ್ಲಿಸಿರುತ್ತೆವೆ, ರಾತ್ರಿಯಾಗಿದ್ದರಿಂದ ಲೇಬರ್ ಇಲ್ಲದ ಕಾರಣ ಇನ್ನೂ ಖಾಲಿ ಮಾಡಿರುವುದಿಲ್ಲ, ಬೆಳಿಗ್ಗೆ ಖಾಲಿ ಮಾಡಿಕೊಂಡು ಬರುತ್ತೆವೆ ಅಂತಾ ಪೋನಿನಲ್ಲಿ ತಿಳಿಸಿರುತ್ತಾನೆ, ಹೀಗಿದ್ದು ಇಂದು ದಿನಾಂಕ:02/01/2023 ರಂದು ಬೆಳಿಗ್ಗೆ 07:00 ಗಂಟೆಗೆ ನಾನು ಮನೆಯಲ್ಲಿ ಇದ್ದಾಗ ನನ್ನ ಮಗ ದರ್ಶನಂ ಶ್ರೀಶೈಲಂ ಇತನು ಲಾರಿಯ ಮೇಲೆ ಲಾರು ಮಾಲಿಕ ಎಟೆಲ್ಲಿ ತಿರುಪತಯ್ಯ ತಂದೆ ರಾಮಲಕ್ಷ್ಮಯ್ಯ ಇವರು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದು ಎನೆಂದರೆ ನಿನ್ನೆ ದಿನಾಂಕ:01/01/2023 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ:02/01/2023 ರ ಬೆಳಿಗ್ಗೆ 06.30 ಗಂಟೆಯ ಅವಧಿ ಮದ್ಯದ ಅವದಿಯಲ್ಲಿ ನಿಮ್ಮ ಮಗ ದರ್ಶನಂ ಶ್ರೀಶೈಲಂ ಇತನು ಲಾರಿ ನಂಬರ್ TS-08 UD 2268 ನೇದ್ದರ ಕ್ಯಾಬಿನ್ ಮೇಲೆ ಮಲಗಿದ್ದ ವೇಳೆಯಲ್ಲಿ ಆಕಸ್ಮಿಕವಾಗಿ ಮೇಲಿಂದ ಕೆಳಗೆ ಬಿದ್ದು ತಲೆಗೆ ಮತ್ತು ಕಾಲಿಗೆ ಬಾರಿ ರಕ್ತ ಗಾಯಗಳಾಗಿ ಮೃತಪಟ್ಟಿರುತ್ತಾನೆ ಅಂತಾ ನನ್ನ ಲಾರಿಯ ಡ್ರೈವರ್ ಎಟೆಲ್ಲಿ ರಮೇಶ ತಂದೆ ಧಶರತ ಇತನು ನನಗೆ ಪೋನ್ ಮಾಡಿ ವಿಷಯ ತಿಳಿಸಿರುತ್ತಾನೆ, ಅದಕ್ಕಾಗಿ ನೀವು ಕೂಡಾ ನಮ್ಮ ಹತ್ತಿರ ಬನ್ನಿ ನಾನು ಮತ್ತು ನೀವು ಸೇರಿಕೊಂಡು ಕಲಬುರಗಿಗೆ ಹೋಗೊಣ ಅಂತಾ ತಿಸಿದ್ದರಿದ್ದ ನಾನು ಗಾಬರಿಯಾಗಿ ಈ ವಿಷಯವನ್ನು ನನ್ನ ಮಗಳು ಜನಪಾಲ ಶ್ರೀಲತಾ ಗಂಡ ಸೀನಯ್ಯ, ನಮ್ಮ ಸಂಬಂಧಿಕರಾದ ದರ್ಶನಂ ಸಾಲಯ್ಯ ತಂದೆ ಮುತ್ತಿಹಾಲು, ನಮ್ಮೂರಿನ ಹಿರಿಯರಿಗೆ ತಿಳಿಸಿ ಅವರೋಂದಿಗೆ ನನ್ನ ಮಗ ಕೆಲಸ ಮಾಡುವ ಲಾರಿಯ ಮಾಲಿಕ ಎಟೆಲ್ಲಿ ತಿರುಪತಯ್ಯ ತಂದೆ ರಾಮಲಕ್ಷ್ಮಯ್ಯ ಇತನ ಹತ್ತಿರ ಬಂದು 11:00 ಗಂಟೆಗೆ ಬಂದು ನಮ್ಮೂರಿನಿಂದ ಕಲಬುರಿಗಿಗೆ 05:00 ಗಂಟೆಗೆ ಬಂದು ಮೃತಪಟ್ಟ ನನ್ನ ಮಗ  ದರ್ಶನಂ ಶ್ರೀಶೈಲಂ ತಂದೆ ಲಿಂಗಯ್ಯ ಈತನ ಶವವನ್ನು ಕಲಬುರಗಿ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯ (ಜೀಮ್ಸ)ದ ಶವಗಾರ ಕೋಣೆಯಲ್ಲಿ ಇಟ್ಟ ನನ್ನ ಮಗನ ಶವವನ್ನು ನೋಡಿದ್ದು, ನನ್ನ ಮಗನು ತಲೆಯ ಮದ್ಯದಲ್ಲಿ, ಎರಡು ಕಡೆಗಳಲ್ಲಿ ಭಾರಿ ರಕ್ತವಾಗಿದ್ದು ಅಲ್ಲೆದೆ ಎಡಗಾಲದ ಮೋಳಕಾಲಿನ ಮೇಲೆ, ಕೆಳಗಡೆ ತೋಡೆಯ ಮೇಲೆ ರಕ್ತಗಾಯ ಅಲ್ಲದೆ ಬಲಗಾಲಿನ ಮೋಳಕಾಲ ಮೇಲೆ ಅಲ್ಲಿಲ್ಲಿ ಮುಂಗೈ ಮೇಲೆ ತೆರಚಿದ ಗಾಯ ಗಾಯಗಳಾಗಿದ್ದು ಕಂಡು ಬಂದಿರುತ್ತದೆ. ಕಾರಣ ದಿನಾಂಕ:01/01/2023 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ:02/01/2023 ರ ಬೆಳಿಗ್ಗೆ 06:30 ಗಂಟೆಯ ಅವಧಿ ಮದ್ಯದ ಅವದಿಯಲ್ಲಿ ನನ್ನ ಮಗ ದರ್ಶನಂ ಶ್ರೀಶೈಲಂ ಇತನು ಲಾರಿ ನಂಬರ್ TS-08 UD 2268 ನೇದ್ದರ ಕ್ಯಾಬಿನ್ ಮೇಲೆ ಮಲಗಿದ್ದ ವೇಳೆಯಲ್ಲಿ ಆಕಸ್ಮಿಕವಾಗಿ ಮೇಲಿಂದ ಅಂದಾಜು 12-13 ಫೀಟ್ ಕ್ಯಾಬಿನ್ ಮೇಲಿಂದ ಕೆಳಗೆ ಬಿದ್ದು ತಲೆಗೆ ಮತ್ತು ಕಾಲಿಗೆ ಬಾರಿ ರಕ್ತ ಗಾಯಗಳಾಗಿ ಮೃತಪಟ್ಟಿರುತ್ತಾನೆ, ಈ ವಿಷಯದಲ್ಲಿ ಯಾರ ಮೇಲೆಯು ದೂರು ಸಂಶಯ ಇರುವುದಿಲ್ಲ, ಮುಂದಿನ ಕಾನೂನು ಕ್ರಮ ಜರುಗಿಸಿ ನನ್ನ ಮಗನ ಶವ ಅಂತ್ಯ ಕ್ರೀಯೆಮಾಡಲು ನನಗೆ ನೀಡಲು ವಿನಂತಿ. ಅಂತಾ ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಇತ್ತೀಚಿನ ನವೀಕರಣ​ : 06-01-2023 01:22 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080