ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ -2 :- ದಿನಾಂಕ 29/10/2022 ರಂದು ನಾನು ನನ್ನ ಕೆಲಸದ ಕುರಿತು ಬಸವೇಶ್ವರ ಆಸ್ಪತ್ರೆ ಹತ್ತೀರ ಬಂದು ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಹೋಗುವ ಕುರಿತು ರೋಡಿನ ಬದಿಯಿಂದ ಹೋಗುತ್ತಿರುವಾಗ ರಾತ್ರಿ 10:45 ಗಂಟೆ ಆಗಿರಬಹುದು ಬಸವೇಶ್ವರ ಆಸ್ಪತ್ರೆ ಕಡೆಯಿಂದ ಒಂದು ಡಿಯೊ ಮೋಟರ ಸೈಕಲ ನಂ. ಕೆಎ 32 ಇ.ಜೆ 2875 ನೇದ್ದರ ಮೇಲೆ ಇಬ್ಬರು ಇದ್ದು, ಅದರ ಸವಾರನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಬಲಗಾಲಿಗೆ ಡಿಕ್ಕಿ ಹೊಡೆದಿದ್ದರಿಂದ ಬಲಗಾಲ ಮೊಳಕಾಲದಿಂದ ಕೆಳಭಾಗದ ವರೆಗೆ ಕಾಲು ಮುರಿದು ಹೋಗಿದ್ದು, ಅಲ್ಲಿಂದಲೆ ಹೋಗುತ್ತಿರುವ ಅಬುಬಕರ ತಂದೆ ಅಬ್ದುಲ ಸಲಾಂ ಇವರು ನೋಡಿದ್ದು, ಮತ್ತು ಅಪಘಾತ ಪಡಿಸಿದ ಮೋಟರ ಸೈಕಲದ ಮೇಲೆ ಇರುವರು ನನಗೆ ರೋಡಿನ ಬದಿಗೆ ಕೂಡಿಸಿದ್ದು, ಮೋಟರ ಸೈಕಲ ನಡೆಸಿದವನ ಹೆಸರು ಜ್ಞಾನೇಶ್ವರ ತಂದೆ ದೇವಿಂದ್ರ ಸಲಗಾರ ಮುಕ್ಕಾಃ ಬಡೆಪೂರ ಕಾಲೋನಿ ಮತ್ತು ಹಿಂದೆ ಕುಳಿತವನ ಹೆಸರು ವಿಕಾಶ ತಂದೆ ಗಣಪತರಾವ ಸೂರ್ಯವಂಶಿ ಅಂತಾ ಇದ್ದು, ಇವರೆಲ್ಲರೂ ಕೂಡಿ ಎ.ಎಸ್.ಎಮ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಮರುದಿವಸ ಪೊಲೀಸರು ಬಂದಾಗ ಕೇಸು ಮಾಡುವ ಬಗ್ಗೆ ನನಗೆ ಗೊತ್ತಾಗಲಿಲ್ಲಾ. ಈಗ ಕಾಲಿನ ಆಪರೇಷನ ಮಾಡಿದ ನಂತರ ಮನೆಗೆ ಹೋಗಿದ್ದು, ಮನೆಯಲ್ಲಿ ವಿಚಾರಣೆ ಮಾಡಿಕೊಂಡು ತಡಮಾಡಿ ಇಂದು ಫಿರ್ಯಾದಿಯನ್ನು ತೆಗೆದುಕೊಂಡು ಬಂದಿರುತ್ತೆನೆ. ಅಪಘಾತ ಪಡಿಸಿದ ಜ್ಞಾನೇಶ್ವರ ಸಲಗರ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾಧಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ ಪೊಲೀಸ್‌ ಠಾಣೆ :- ದಿನಾಂಕಃ 01-12-2022 ರಂದು ಸರಕಾರಿ    ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನೆಂದರೆ ದಿನಾಂಕಃ-೦೧/೧೨/೨೦೨೨ ರಂದು ಸದರಿಯವರು ಏರಿಯಾದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ  ರಾಮನಗರದ ಆಟೋ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸದರಿ ಆರೋಪಿತನು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಂಚರ ಸಮಕ್ಷಮ  ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಜಪ್ತಿ ಪಂಚನಾಮೆ ಮೂಲಕ ನಗದು ಹಣ 1450/- ರೂ ,ಒಂದು ಮಟಕಾ ಚೀಟಿ ,ಒಂದು ಬಾಲ್ ಪೆನ್ ಜಪ್ತಿ ಪಡಿಸಿಕೊಂಡು,ಸದರಿ ಆರೋಪಿ,ಹಾಗೂ ಮುದ್ದೆಮಾಲನ್ನು  ಠಾಣೆಗೆ ಹಾಜರುಪಡಿಸಿ ವರದಿ ನೀಡಿದ್ದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ:01.12.2022 ರಂದು 08:00 ಪಿ.ಎಂ.ಕ್ಕೆ ಶ್ರೀ ಎ. ವಾಜೀದ ಪಟೇಲ್ ಪಿ.ಐ. ಸಿ.ಸಿ.ಬಿ. ಘಟಕ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ವರದಿ, ಜಪ್ತಿ ಪಂಚನಾಮೆ ಹಾಗೂ ಒಬ್ಬ ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರ ಪಡಿಸಿ ಆರೋಪಿತನ ವಿರುದ್ಧ ಕ್ರಮ ಕೈಕೊಳ್ಳುವಂತೆ ಸಲ್ಲಿಸಿರುವ ವರದಿಯನ್ನು ಸ್ವೀಕರಿಸಿಕೊಂಡಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ನಾನು ಎ. ವಾಜೀದ ಪಟೇಲ, ಪಿ.ಐ., ಸಿ.ಸಿ.ಬಿ. ಘಟಕ, ಕಲಬುರಗಿ ನಗರ ಸರ್ಕಾರಿ ತರ್ಫೆ ದೂರು ಸಲ್ಲಿಸುವುದೇನೆಂದರೆ, ಇಂದು ದಿನಾಂಕ:01-12-2022 ರಂದು ಸಾಯಂಕಾಲ 4-30 ಗಂಟೆಗೆ ನಾನು ಸಿ.ಸಿ.ಬಿ. ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ವರದಾನಗರ ಸಂಗಮೇಶ್ವರ ಕಿರಾಣಾ ಅಂಗಡಿ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ತಮ್ಮ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಯನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಇಬ್ಬರೂ ಪಂಚರಾದ 1) ಶ್ರೀ ಅರುಣ ತಂದೆ ರುಕ್ಮಣಪ್ಪ ಗಾಜರೆ, ವ:49 ವರ್ಷ, ಜಾತಿ:ಎಸ್.ಸಿ., ಉ:ಕಿರಾಣಿ ಅಂಗಡಿ, ಸಾ:ಸುಂದರ ನಗರ ಕಲಬುರಗಿ. ಮೊ. ನಂ. 8722789624, 2) ಶ್ರೀ ಸಂಜೀವಕುಮಾರ ತಂದೆ ಅಬ್ರಾಹಂ ಹಳಿಮನಿ, ವ:38 ವರ್ಷ, ಜಾತಿ:ಕ್ರಿಶ್ಚಿಯನ, ಉ:ಖಾಸಗಿ ಕೆಲಸ, ಸಾ:ಸುಂದರ ನಗರ ಕಲಬುರಗಿ ಮೊ. ನಂ. 7349235327,  ಇವರನ್ನು ಸಿ.ಸಿ.ಬಿ. ಘಟಕಕ್ಕೆ ಸಾಯಂಕಾಲ 5-00 ಗಂಟೆಗೆ ಬರಮಾಡಿಕೊಂಡು ಸದರಿ ಪಂಚರಿಗೆ ವಿಷಯ ತಿಳಿ ಹೇಳಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು, ಮತ್ತು ಸಿ.ಸಿ.ಬಿ ಘಟಕ ಸಿಬ್ಬಂದಿಯವರಾದ 1) ರವೀಂದ್ರಕುಮಾರ ಹೆಚ್.ಸಿ-48, 2) ಮಲ್ಲಿಕಾರ್ಜುನ ಹೆಚ್.ಸಿ-79, 3) ವೇದರತ್ನಂ ಹೆಚ್.ಸಿ-51, 4) ಸುನೀಲಕುಮಾರ ಹೆಚ್ಸಿ-167, 5) ಶ್ರೀಶೈಲ ಸಿಪಿಸಿ-692 ಎಲ್ಲರೂ ಕೂಡಿ ಸರ್ಕಾರಿ ಜೀಪ ನಂ.ಕೆಎ-32-ಜಿ-1249 ನೇದ್ದರಲ್ಲಿ ಹಾಗೂ ಕೆಲವು ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಸಾಯಂಕಾಲ 5-15 ಗಂಟೆಗೆ ಸಿ.ಸಿ.ಬಿ. ಕಛೇರಿಯಿಂದ ಹೊರಟು ಬಾತ್ಮಿ ಬಂದ ಸ್ಥಳವಾದ ಕಲಬುರಗಿ ನಗರದ ವರದಾನಗರ ಸಂಗಮೇಶ್ವರ ಕಿರಾಣಾ ಅಂಗಡಿ ಹತ್ತಿರ ಸಾಯಂಕಾಲ 5-45 ಗಂಟೆಗೆ ತಲುಪಿ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ವಾಹನದಿಂದ ಇಳಿದು ಅಲ್ಲಿಯೇ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲ್ಲಿ ಹೋಗಿ ಬರುವ ಸಾರ್ವಜನಿಕರಿಂದ 1 ರೂ.ಗೆ 80 ರೂ. ಕೊಡುವುದಾಗಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿ ಬರೆದುಕೊಳ್ಳುವುದನ್ನು ನಾನು ಮತ್ತು ಪಂಚರು ನೋಡಿ ಖಚಿತಪಡಿಸಿಕೊಂಡು, ಪಂಚರ ಸಮಕ್ಷಮ ಸಾಯಂಕಾಲ 6-00 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ಒಮ್ಮಲ್ಲೇ ಎಲ್ಲರೂ ಕೂಡಿ ಸದರಿ ವ್ಯಕ್ತಿಗೆ ಹಿಡಿದಿದ್ದು, ನಂತರ ಸದರಿಯವನ ಆತನ ಹೆಸರು ವಿಳಾಸ ವಿಚಾರಿಸಲು ಯಮನಪ್ಪ ತಂದೆ ಬಸಣ್ಣ ಮಡಿವಾಳ, ವಯ:53 ವರ್ಷ, ಉ:ಇಸ್ತ್ರೀ ಅಂಗಡಿ, ಜಾತಿ:ಮಡಿವಾಳ, ಸಾ:ವರದಾನಗರ, ಕಲಬುರಗಿ ಅಂತಾ ತಿಳಿಸಿದನು. ನಂತರ ಸದರಿ ಆರೋಪಿಯ ಅಂಗ ಶೋಧನೆ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ರೂ.7,320/- ನಗದು ಹಣ, ಮತ್ತು ಮಟಕಾ ಚೀಟಿ ಅ.ಕಿ.ರೂ.00/-, ಒಂದು ಬಾಲ ಪೆನ್ ಅ.ಕಿ.ರೂ.00/-, ನೇದ್ದವುಗಳನ್ನು ಜಪ್ತು ಮಾಡಿಕೊಂಡಿದ್ದು ಇರುತ್ತದೆ.  ಸದರಿ ಜಪ್ತುಪಡಿಸಿಕೊಂಡ ಮುದ್ದೇಮಾಲುಗಳಿಗೆ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಒಂದು ಕವರನಲ್ಲಿ ಹಾಕಲಾಯಿತು. ಸದರಿ ಜಪ್ತಿ ಪಂಚನಾಮೆಯನ್ನು ಸಾಯಂಕಾಲ 6-00 ಗಂಟೆಯಿಂದ 7-00 ಗಂಟೆಯವರೆಗೆ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮದಲ್ಲಿ ಲೈಟಿನ ಬೆಳಕಿನಲ್ಲಿ ಲ್ಯಾಪಟ್ಯಾಪನಲ್ಲಿ ಟೈಪ ಮಾಡಿ ಮುಗಿಸಿದ್ದು, ಸದರಿಯವನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ 28-11-2022 ರಂದು ೭.೦೦ ಪಿ.ಎಮ್ ಸುಮಾರಿಗೆ ಸದರಿ ಫಿರ್ಯಾದಿಯು ಪಾನಿ ಪುರಿ ಬಂಡಿ ಇಟ್ಟುಕೊಂಡು ಮಾರುತ್ತಿದ್ದು ಸದರಿ ಆರೋಪಿಯು ಪಾನಿ ಪುರಿ ತಿಂದು ಹಣ ಕೇಳಿದರೆ ಕೊಡುವುದಿಲ್ಲಾ ಅಂತಾ ಅಂದು ಅವಾಚ್ಯವಾಗಿ ಬೈದು ಹೊಟೇಲನಲ್ಲಿ ಸುಮಾರು 10000/- ರೂ ಕಿಮ್ಮತ್ತಿನ ವಸ್ತುಗಳನು ಹಾಳು ಮಾಡಿ ಜೀವದ ಬೇದರಿಕೆ ಹಾಕಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-12-2022 03:47 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080