Feedback / Suggestions

ಸಿ.ಇ.ಎನ್‌ ಪೊಲೀಸ್‌ ಠಾಣೆ :- ದಿನಾಂಕ: 31/10/2023 ರಂದು ರಾತ್ರಿ 09:30 ಗಂಟೆಗೆ ಪಿರ್ಯಾದಿದಾರರಾದ ಡಾ: ತಿಲಕ ಗಸ್ತಿ ತಂದೆ ಕುಮಾರ ಗಸ್ತಿ ವಯ: 29 ವರ್ಷ ಉ: ಅಸಿಸ್ಟಂಟ್ ಪ್ರೋಫೆಸರ್ ಸಾ: ಗುಂಡವಾಡ ಗ್ರಾಮ ತಾ: ರಾಯಭಾಗ ಜಿಲ್ಲೆ: ಬೆಳಗಾವಿ ಸದ್ಯ ಗಣೇಶ ನಗರ, ಸೇಡಂ ರಸ್ತೆ, ಓಂ ನಗರ ಹತ್ತಿರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಲಿಖಿತ ದೂರು ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ನಾನು ದಿನಾಂಕ 21/11/2022 ರಿಂದ ಕೆ.ಬಿ.ಎನ್. ವಿಶ್ವವಿಧ್ಯಾಲಯದಲ್ಲಿ ಕೆಮೆಸ್ಟ್ರಿ ವಿಭಾಗದಲ್ಲಿ ಅಸಿಸ್ಟಂಟ್ ಪ್ರೋಫೆಸರ್ ಅಂತಾ ಕೆಲಸ ಮಾಡಿಕೊಂಡು ನನ್ನ ಹೆಂಡತಿಯೊಂದಿಗೆ ಉಪಜೀವನ ನಡೆಸುತ್ತಿದ್ದೆನೆ. ನಾನು ದಿನಾಂಕ 27/10/2023 ರಂದು ಬೆಳಿಗ್ಗೆ 11:30 ಗಂಟೆ ಸುಮಾರಿಗೆ ಸ್ಟಾಫ್ ರೂಮಿನಲ್ಲಿ ಕುಳಿತ್ತಿದ್ದಾಗ ನಮ್ಮ ವಿಶ್ವವಿಧ್ಯಾಲಯದ ರೆಜಿಸ್ಟರರ್ ಡಾ: ರುಕ್ಸಾರ್ ಫಾತಿಮಾ ಇವರು ಈ ಮೇಲ್ ಮೂಲಕ ನನಗೆ ಶೋಕಾಸ್ ನೋಟಿಸ್ ನೀಡಿದ್ದು ಅದರಲ್ಲಿದ್ದ ಅಂಶಗಳನ್ನು ಕಂಡು ನಾನು ಕೂಡಲೇ ಅವರ ಹತ್ತಿರ ಹೋಗಿ ನೋಟಿಸ್ ಬಗ್ಗೆ ಕೇಳಲಾಗಿ ಅವರು ತಮ್ಮ ಮೋಬೈಲನಲ್ಲಿ ನನ್ನ ಹೆಸರಿನಲ್ಲಿ ತೆರೆದ ನಕಲಿ ವಾಟ್ಸಅಪ್ ಡಿಪಿ ಫೋಟೊವನ್ನು ತೋರಿಸಿ ಈ ವಾಟ್ಸಅಪ್ ಡಿಪಿ ನಿಮ್ಮದೆ ಏನು ಎಂದು ಕೇಳಿದಾಗ ನನ್ನದಿರುವುದಿಲ್ಲಾ ಅಂತಾ ಹೇಳಿ ಸದರಿ ನೋಟಿಸಿಗೆ ಉತ್ತರಿಸಿರುತ್ತೇನೆ. ನಂತರ ದಿನಾಂಕ 30/10/2023 ರಂದು ಸಂಜೆ 6:30 ಗಂಟೆ ಸುಮಾರಿಗೆ ನನ್ನ ಸಹದ್ಯೋಗಿಗಳಾದ ಶ್ರೀಮತಿ ಮಿಲನ್ ಗಂಡ ಅರವಿಂದ ಬಿಶ್ನೋಯಿ ಮತ್ತು ಶ್ರೀಮತಿ ಮನಿಶಾ ಪಾಟೀಲ್ ಗಂಡ ಬಸಯ್ಯ ಸ್ವಾಮಿ ಇವರು ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ, Dr. Tilak Gasti ಅಂತಾ ನಿಮ್ಮ ಹೆಸರಿನ ನಕಲಿ ವಾಟ್ಸಅಪ್ ಪ್ರೋಫೈಲನ್ನು ತೆರೆದು ಅದಕ್ಕೆ ನಿಮ್ಮ ಮತ್ತು ನಿಮ್ಮ ಹೆಂಡತಿ ಜೊತೆಯಲ್ಲಿರುವ ಭಾವಚಿತ್ರವಿರುವನ್ನು ಡಿಪಿಯಲ್ಲಿ ಇಟ್ಟು ಅದರ ಸ್ಕ್ರೀನ್ ಶಾಟ್ ತೆಗೆದು ವಿವಿಧ ಇನ್ಸ್ಟಾಗ್ರಾಂ ಐಡಿಯಲ್ಲಿ ಧಾರ್ಮಿಕ ಭಾವನೆಗೆ ದಕ್ಕೆ ಬರುವ ರೀತಿಯಲ್ಲಿ ಬರಹಗಳನ್ನು ಹಾಕುತ್ತಿರುತ್ತಾರೆ ಅವುಗಳನ್ನು ನಿಮ್ಮ ವಾಟ್ಸಅಪ್ ಗೆ ಕಳುಹಿಸಿರುತ್ತೇನೆ ನೋಡು ಅಂತಾ ಹೇಳಿದಾಗ ನಾನು ಸದರಿ ಸ್ಕ್ರೀನ್ ಶಾಟಗಳನ್ನು ನನ್ನ ಮೋಬೈಲನಲ್ಲಿ ನೋಡಿ ಗಾಬರಿಗೊಂಡು ಇನಸ್ಟಾಗ್ರಾಮ ಪ್ರೋಫೈಲ್ ಗಳಾದ (1) memes_ka_bazar_gulbarga (2)  khalid_bin_walid.army (3) that.memer.girl11  (4) lifeofgulbarga ಇನಸ್ಟಾಗ್ರಾಮ ಪೇಜಗಳಲ್ಲಿ “Gulbarga kbn college ka sir islam ko terrorists muslim atankwadi bolra mkl kbn college ka hai ine ye suvar ke upper action Lena chahiye”  ಹಾಗೂ  “KILL ALL SMALL CHILDREN IN GAZA! DEMOLISH AL AQSA MOSUE! DESTROY ALL HOSPITAL IN GAZA!” ಅಂತಾ ಬರಹದ ಕೆಳಗೆ ನನ್ನ ಭಾವಚಿತ್ರವನ್ನು ಇಟ್ಟು ಪೋಸ್ಟ್ ಮಾಡಿರುತ್ತಾರೆ. ಮತ್ತು Dr. Tilak Gasti Sir ಎಂಬ ನಕಲಿ ವಾಟ್ಸಅಪ್ ಸ್ಟೇಟಸ್ ನಲ್ಲಿ “India with you Isreal demolish al aqsa mosque as earliest as possible build third temple” ಅಂತಾ ಬರಹಗಳನ್ನು ಹಾಕಿ ಸ್ಟೇಟಸ್ ಇಟ್ಟು ಅದರ ಸ್ಕ್ರೀನ್ ಶಾಟನ್ನು ತೆಗೆದು ಮೇಲಿನ ಇನಸ್ಟಾಗ್ರಾಮ ಪೇಜ್ನಲ್ಲಿ ಹಾಕಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮತ್ತು ದಾರ್ಮಿಕ ದಕ್ಕೆ ತರುವ ಸಂದೇಶಗಳನ್ನು ಪೋಸ್ಟ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದಾ ಠಾಣಾ ಗುನ್ನೆ ನಂ. 44/2023 ಕಲಂ 66 ಐ.ಟಿ ಆಕ್ಟ್ ಮತ್ತು ಕಲಂ 153(ಎ), 295 ಐಪಿಸಿ ರಿತ್ಯ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ – 01 :- ದಿನಾಂಕ 31-10-2023 ರಂದು 6:00 ಪಿ.ಎಂ ಕ್ಕೆ ಶ್ರೀ ಧನರಾಜ ತಂದೆ ದಶರಥ ವಾಕೋಡೆ ಇವರು ಠಾಣೆಗೆ ಹಾಜರಾಗಿ ಶ್ರೀಮತಿ, ಹೀನಾ ಗಂಡ ನಹೀಮ್ ವಯ: 29 ವರ್ಷ ಸಾ: ಪಂಚಶೀಲ ನಗರ, ಕಲಬುರಗಿ ರವರ ಕನ್ನಡದಲ್ಲಿ ಟೈಪ್ ಮಾಡಿಸಿ ಸಹಿ ಮಾಡಿದ ಫಿರ್ಯಾದಿ ಅರ್ಜಿ ಹಾಜರುಪಡಿಸಿದ್ದು ಫಿರ್ಯಾದಿ ಅರ್ಜಿ ಸಾರಾಂಶವೇನೆಂದರೆ ಫಿರ್ಯಾದುದಾರರು ದಿನಾಂಕ 30-10-2023 ರಂದು ರಾತ್ರಿ 8:30 ಗಂಟೆಗೆ ಸುಪರ್ ಮಾರ್ಕೆಟ್ ನಲ್ಲಿ ತರಕಾರಿ ಹಾಗೂ ಮನೆ ಸಾಮಾಗ್ರಿಗಳನ್ನು ತರಲು ನಡೆದುಕೊಂಡು ಹೋಗುವಾಗ ಸುಪರ್ ಮಾರ್ಕೆಟ್ ಆಟೋ ಸ್ಟ್ಯಾಂಡ್ ಹತ್ತಿರ  ಮೋಟಾರ್ ಸೈಕಲ್ ನಂ ಕೆ.ಎ-32/ಇ.ವಿ-5196 ನೇದ್ದರ ಸವಾರನು ಅತಿವೇಗದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರಿಗೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದ್ದು ಸದರ ಅಪಘಾತದಿಂದ ಫಿರ್ಯಾದುದಾರರ ಬಲಗಾಲಿಗೆ ಹಾಗೂ ಕೈ ಕಾಲುಗಳಿಗೆ ಗಾಯಗಳಾಗಿದ್ದು ಇರುತ್ತದೆ. ಕಾರಣ ಮೋಟಾರ್ ಸೈಕಲ್ ನಂ ಕೆ.ಎ-32/ಇ.ವಿ-5196 ನೇದ್ದರ ಸವಾರನ ಮೇಲೆ ಕಾನೂನು ಕ್ರಮಕ್ಕಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 110/2023 ಕಲಂ 279, 337 ಐ.ಪಿ.ಸಿ ಸಂ 187 ಐ.ಎಂ.ವಿ ಆಕ್ಟ್ ನೇದ್ದರಡಿ ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ – 01 :- ದಿನಾಂಕ 31-10-2023 ರಂದು 7:00 ಪಿ.ಎಂ ಕ್ಕೆ ಶ್ರೀ ತಿಮ್ಮಯ್ಯ ತಂದೆ ತಾಯಪ್ಪ  ಇವರು ಠಾಣೆಗೆ ಹಾಜರಾಗಿ ತಮ್ಮ ತಂದೆಯಾದ ತಾಯಪ್ಪ ತಂದೆ ತಿಮ್ಮಯ್ಯ ವಯ: 60 ವರ್ಷ ಉ: ಕೂಲಿಕೆಲಸ ಸಾ: ಫರಹತಾಬಾದ್ ತಾ:ಜಿ: ಕಲಬುರಗಿ ರವರ ಕನ್ನಡದಲ್ಲಿ ಟೈಪ್ ಮಾಡಿಸಿ ಸಹಿ ಮಾಡಿದ ಫಿರ್ಯಾದಿ ಅರ್ಜಿ ಹಾಜರುಪಡಿಸಿದ್ದು ಫಿರ್ಯಾದಿ ಅರ್ಜಿ ಸಾರಾಂಶವೇನೆಂದರೆ ನಾನು ದಿನಾಂಕ 19-10-2023 ರಂದು ಸಾಯಂಕಾಲ ಅಂಬಾಭವಾನಿ ದೇವಸ್ಥಾನಕ್ಕೆ ಹೋಗಿ ಬರುವ ಕುರಿತು ಮನೆಯಿಂದ ನಡೆದುಕೊಂಡು ಹೋಗುವಾಗ ಸಾಯಂಕಾಲ 4:30 ಗಂಟೆ ಸುಮಾರಿಗೆ ಫರಹತಾಬಾದ್ ಊರಿನ ಹಳೆಯ ಪೊಲೀಸ್ ಠಾಣೆ ಎದುರಿಗೆ ಇಂಡಿಯನ್ ಗ್ಯಾಸ್ ಮಿನಿ ಗೂಡ್ಸ್ ವಾಹನ ಸಂಖ್ಯೆ ಕೆ.ಎ-32/ಎಎ-1742 ನೇದ್ದರ ಚಾಲಕನು ಫರಹತಾಬಾದ್ ಮುಖ್ಯ ರಸ್ತೆಯಿಂದ ಫರಹತಾಬಾದ್ ಊರಿನೊಳಗಡೆ ಹೋಗುವ ಕುರಿತು ತನ್ನ ವಾಹನವನ್ನು ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಹಿಂದುಗಡೆಯಿಂದ ಡಿಕ್ಕಿಪಡಿಸಿದನು ಸದರ ಅಪಘಾತದಿಂದ ನಾನು ರಸ್ತೆಯ ಮೇಲೆ ಬಿದ್ದಿದ್ದು ಅಲ್ಲಿಯೇ ಹೋರಟಿದ್ದ ನಮ್ಮ ಊರಿನ ಬಸವರಾಜ ತಂದೆ ಗುರಣ್ಣ ಹಡಪದ ಮತ್ತು ಮಹಾಂತೇಶ ತಂದೆ ಚಂದ್ರಶಾ ರವರು ನನಗೆ ಎಬ್ಬಿಸಿ ರಸ್ತೆ ಬದಿಗೆ ಕೂಡಿಸಿ ನೋಡಲು ನನಗೆ ಬಲಗಾಲಿಗೆ ಭಾರಿ ರಕ್ತಗಾಯ ಮತ್ತು ಭಾರಿ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಸದರಿ ಮಿನಿ ಗೂಡ್ಸ್ ವಾಹನ ಚಾಲಕ ಯಲ್ಲಪ್ಪ ಸಾವಳಗಿ ಇತನು ನನಗೆ ಚಿಕಿತ್ಸೆ ಕುರಿತು ಕಲಬುರಗಿ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಆತನು ಚಿಕಿತ್ಸೆ ಖರ್ಚು ಭರಿಸುವುದಾಗಿ ತಿಳಿಸಿ ಈಗ ಚಿಕಿತ್ಸೆ ಕೋಡಿಸಲು ನೀರಾಕರಿಸುತ್ತಿದ್ದಾರೆ ಕಾರಣ ನನಗೆ ದೂರು ನೀಡಲು ತಡವಾಗಿರುತ್ತದೆ. ಫರಹತಾಬಾದ್ ಮುಖ್ಯ ರಸ್ತೆಯಿಂದ ಫರಹತಾಬಾದ್ ಊರಿನೊಳಗೆ ಹೋಗುವ ಕುರಿತು ತನ್ನ ಮಿನಿ ಗೂಡ್ಸ್ ವಾಹನ ಸಂಖ್ಯೆ ಕೆ.ಎ-32/ಎಎ-1742 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದು ಕಾರಣ ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 111/2023 ಕಲಂ 279, 338 ಐ.ಪಿ.ಸಿ ಪ್ರಕಾರ ಕೇಸು ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ – 01 :- ದಿನಾಂಕ 31-10-2023 ರಂದು 8:05 ಪಿ.ಎಂ ಕ್ಕೆ ಯುನೈಟೇಡ್ ಆಸ್ಪತ್ರೆ ಕಲಬುರಗಿಯಿಂದ ಶ್ರೀ. ಅಬ್ದುಲ್ ರಶೀದ್ ತಂದೆ ಮೆಹಬೂಬ್ ಸಾಬ್ ಹಾಗೂ ಯುನುಸ್ ತಂದೆ ಅಬ್ದುಲ್ ರಹೀಂ ಶೇಖ್ ಇವರ RTA ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಯುನೈಟೇಡ್ ಆಸ್ಪತ್ರೆಗೆ ಭೇಟಿ ನೀಡಿ ಎಂ.ಎಲ್.ಸಿ ಪತ್ರ ವಸೂಲು ಮಾಡಿಕೊಂಡು ಗಾಯಾಳುಗಳನ್ನು ನೋಡಿ ವಿಚಾರಿಸಿ ಗಾಯಾಳು ಅಬ್ದುಲ್ ರಶೀದ್ ಇವರು ನೀಡಿದ ಫಿರ್ಯಾದಿ ಹೇಳಿಕೆ ಸಾರಾಂಶವೇನೆಂದರೆ  ಇಂದು ದಿನಾಂಕ 31-10-2023 ರಂದು ಫಿರ್ಯಾದುದಾರರು ಬೆಳಿಗ್ಗೆ 9:45 ಗಂಟೆ ಸುಮಾರಿಗೆ ತನ್ನ ಅಳಿಯನಾದ ಯುನುಸ್ ಇತನ ಜೋತೆಗೆ ತಮ್ಮ ಮೋಟಾರ್ ಸೈಕಲ್ ನಂ ಕೆ.ಎ-32/ಇ.ಯು-5763 ನೇದ್ದರ ಮೇಲೆ ಹಿಂದುಗಡೆ ಕುಳಿತುಕೊಂಡು ರಸ್ತೆಯ ಬದಿಯಿಂದ ಹೋಗುವಾಗ ಕಲಬುರಗಿ-ಜೇವರ್ಗಿ ರಸ್ತೆಯಲ್ಲಿ ಬರುವ ಸರಡಗಿ ಕ್ರಾಸ್ ಹತ್ತಿರ ಕಾರ್ ನಂಬರ ಕೆ.ಎ-48/ಎಂ-3426 ನೇದ್ದರ ಚಾಲಕನು ಜೇವರ್ಗಿ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾವುದೋ ಒಂದು ವಾಹನಕ್ಕೆ ಓವರ್ ಟೇಕ್ ಮಾಡಲು ಹೋಗಿ ರಸ್ತೆ ಬದಿಯಿಂದ ಹೋಗುತ್ತಿದ್ದ ಫಿರ್ಯಾದಿರವರ ರಸ್ತೆ ಬದಿಗೆ ಬಂದು ಮೋಟಾರ್ ಸೈಕಲ್ ಗೆ ಎದುರಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಫಿರ್ಯಾದಿ ಹಾಗೂ ಅವರ ಅಳಿಯ ಯುನುಸ್ ಇತನಿಗೆ ಭಾರಿಗಾಯ ಹಾಗೂ ಅವರ ಅಳಿಯನಿಗೆ ಸಾದಾಗಾಯಗೊಳಿಸಿ ತನ್ನ ಕಾರನ್ನು ಸ್ಥಳದಲ್ಲಿ ಬಿಟ್ಟು ಓಡಿಹೋಗಿದ್ದು ಕಾರಣ ಸದರಿ ಕಾರ್ ನಂ ಕೆ.ಎ-48/ಎಂ-3426 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮಕ್ಕಾಗಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 112/2023 ಕಲಂ 279, 337, 338 ಸಂ 187 ಐ.ಎಂ.ವಿ ಆಕ್ಟ್ ನೇದ್ದರಡಿ ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಆರ್.ಜಿ ನಗರ ಪೊಲೀಸ್‌ ಠಾಣೆ :- ದಿನಾಂಕ:31.10.2023 ರಂದು ಮದ್ಯಾಹ್ನ 1-30 ಗಂಟೆಗೆ ಶ್ರೀ ಮಲ್ಲಿಕಾಜರ್ುನ ಜಾನೆ ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ಏಳು ಜನ ಆರೋಫಿತರೊಂದಿಗೆ ಮುದ್ದೆಮಾಲ್, ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನಾ ಪತ್ರ ನೀಡಿದ್ದರ ಸಾರಾಂಶವೆನೆಂದರೆ ದಿನಾಂಕ:31.10.2023 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ನಾನು ಠಾಣೆಯಲ್ಲಿರುವಾಗ ನನಗೆ ಖಚಿತವಾದ ಬಾತ್ಮಿ ಬಂದಿದ್ದೇನೆಂದರೆ ಠಾಣಾ ವ್ಯಾಪ್ತಿಯ ವಿವೇಕಾನಂದ ನಗರದಲ್ಲಿ ಇರುವ ಓಂಕಾರೇಶ್ಚರ ಗುಡಿ ಹತ್ತಿರ ಖುಲ್ಲಾ ಜಾಗದಲ್ಲಿ ಕೆಲವು ಜನರು  ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದಿದ್ದರಿಂದ ನಮ್ಮ ಠಾಣೆಯ ಸಿಬ್ಬಂದಿಯವರಾದ 1) ಶ್ರೀ ಸಿಕ್ರೇಶ್ವರ ಹೆಚ್ಸಿ-128  2) ಶ್ರೀ ಮಲ್ಲಣ್ಣಗೌಡ ಹೆಚ್.ಸಿ-159 3) ಶ್ರೀ ಮುಜಾಹಿದ ಸಿಪಿಸಿ-154, 4) ಶ್ರೀ ಆರೇಶ ಸಿಪಿಸಿ-238 5) ಶ್ರೀ ಶರಣಬಸಪ್ಪಾ ಸಿಪಿಸಿ-237 6) ಶ್ರೀ ಉಮೇಶ ಸಿಪಿಸಿ-105 ರವರಿಗೆ ಠಾಣೆಗೆ ಬರಲು ತಿಳಿಸಿದ್ದು ನಂತರ ಶ್ರೀ ಮಲ್ಲಣ್ಣಗೌಡ ಹೆಚ್.ಸಿ-159 ರವರ ಮುಖಾಂತರ ಇಬ್ಬರು ಪಂಚರನ್ನು ಬರಮಾಡಿಕೊಂಡು ಸದರಿ ಜೂಜಾಟ ನಿರತರ ಮೇಲೆ ದಾಳಿ ಮಾಡಿ ಕಾನೂನು ಕ್ರಮ ಕೈಕೊಳ್ಳಬೇಕಾಗಿದ್ದು ದಾಳಿ ಕಾಲಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿ ಕೂಡಲು ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡ ನಂತರ ಸದರಿ ವಿಷಯವನ್ನು ಮಾನ್ಯ ಮೇಲಾಧಿಕಾರಿಯವರಿಗೆ ತಿಳಿಸಿ ಮಾನ್ಯ ಮೇಲಾಧಿಕಾರಿಯವರ ಮಾರ್ಗದರ್ಶನದಂತೆ ಬೆಳಿಗ್ಗೆ 11-30 ಗಂಟೆಗೆ ಸಿಬ್ಬಂದಿಯವರನ್ನು ಕರೆದುಕೊಂಡು ಠಾಣೆಗೆ ಒದಗಿಸಿದ ಜೀಪ ನಂ: ಕೆಎ-32 ಜಿ-1148 ನೇದ್ದರಲ್ಲಿ ಕರೆದುಕೊಂಡು ಖಚೀತ ಬಾತ್ಮೀ ಬಂದ ಸ್ಥಳಕ್ಕೆ ಹೊರಟು ಬೆಳಿಗ್ಗೆ 11-45 ಕ್ಕೆ ಹೋಗಿ ದೂರ ಇರುವಂತೆ ನಮ್ಮ ಜೀಪು ನಿಲ್ಲಿಸಿ ನಾವು ಎಲ್ಲರೂ ಇಳಿದು ನಡೆದುಕೊಂಡು ಹೋಗಿ ಓಂಕಾರೇಶ್ವರ ಗುಡಿ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಓಂಕಾರೇಶ್ವರ ಗುಡಿ ಪಕ್ಕದಲ್ಲಿ ಸಾರ್ವಜನಿಕ ಖುಲ್ಲಾ ಜಾಗದಲ್ಲಿ  6-7 ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದು ಅವರಲ್ಲಿ ಒಬ್ಬನು ಎಲೆಗಳನ್ನು ಹಾಕಿದ್ದು, ಒಬ್ಬನು ಅಂದರಕ್ಕೆ 100 ರೂಪಾಯಿ ಮತ್ತು ಇನ್ನೂಬ್ಬನು ಬಾಹರಕ್ಕೆ 100 ರೂಪಾಯಿ ಅಂತ ಅನ್ನುತ್ತಾ ಕಣದಲ್ಲಿ ಹಣ ಹಾಕುತ್ತಿದ್ದು ಸದರಿಯವರು ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯವರು ಹಾಗೂ ಪಂಚರ ಸಮಕ್ಷಮ ಜೂಜಾಟ ನಿರತರ ಮೇಲೆ 11-45 ಎ.ಎಂ ಕ್ಕೆ ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು ಮೊದಲನೆಯವನು ತನ್ನ ಹೆಸರು 1) ವಿಜಯಕುಮಾರ ತಂದೆ ಗುರುಶರಣ ಖೇಡ ವಯ-38 ವರ್ಷ ಉ||ಖಾಸಗಿ ಕೆಲಸ ಸಾ||ಶಹಾಬಜಾರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 2600/- ರೂ ನಗದು ಹಣ ಮತ್ತು ಕೈಯಲ್ಲಿ 23 ಎಲೆಗಳು ದೊರೆತಿದ್ದು. ಕೆಳಗೆ ಹೊರಗೆ 9 ಎಲೆ, ಒಳಗೆ 8 ಎಲೆಗಳು ಬಿದ್ದಿದ್ದು, 12 ಎಲೆ ಪಕ್ಕದಲ್ಲಿ ಇಟ್ಟಿದ್ದು ಇರುತ್ತದೆ. ಮತ್ತು ಅವನ ಪಕ್ಕದಲ್ಲಿವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 2) ಕುಪೇಂದ್ರ ತಂದೆ ಕರಬಸಪ್ಪಾ ಡೋಣಿ ವಯ-73 ವರ್ಷ ಉ||ನಿವೃತ್ತ ನೌಕರ ಸಾ||ಶಹಾಬಜಾರ ಕಲಬುರಗಿ  ಇವನ ಹತ್ತಿರ 1800/-ರೂ ದೊರತ್ತಿದ್ದು ಇರುತ್ತದೆ. 3) ಶಾಂತಪ್ಪಾ ತಂದೆ ಮಹಾಂತಪ್ಪಾ ಸಾವಳಗಿ ವಯ-68 ವರ್ಷ ಉ||ನಿವೃತ್ತ ನೌಕರ ಸಾ||ಶಹಾಬಜಾರ ಕಲಬುರಗಿ ಇವನ ಹತ್ತಿರ 2100/--ರೂ ದೊರತ್ತಿದ್ದು 4) ಅಮೃತ ತಂದೆ ಭೀಮಶ್ಯಾ ಮುದ್ದಡಗಿ ವಯ-65 ವರ್ಷ ಉ||ನಿವೃತ್ತ ಕೆಎಸಾರಟಿ ನೌಕರ ಸಾ||ಸಂತೋಷ ಕಾಲೋನಿ ಕಲಬುರಗಿ ಇವನ ಹತ್ತಿರ 2500/-ರೂ ದೊರತ್ತಿದ್ದು, 5) ಶಾಂತಪ್ಪಾ ತಂದೆ ಭೀಮಾಶಂಕರ ಕಾರಾಂಜಾ ವಯ-52 ವರ್ಷ ಉ|| ಖಾಸಗಿ ಕೆಲಸ ಸಾ|| ಶಹಾಬಜಾರ ಕಲಬುರಗಿ ಇವನ ಹತ್ತಿರ 2300-ರೂ ದೊರೆತ್ತಿದ್ದ 6) ಗಿರೀಶ ತಂದೆ ಯಶ್ವಂತರಾವ ಕಲಶೆಟ್ಟಿ ವಯ-47 ವರ್ಷ ಉ|| ಫೈನಾನ್ಸ ಸಾ|| ಆಳಂದ ರೋಡ ಸಂತೋಷ ಕಾಲೋನಿ ಕಲಬುರಗಿ ಇವನ ಹತ್ತಿರ 1500/-ರೂ 7) ಶಿವಪುತ್ರ ತಂದೆ ಸೋಮಣ್ಣಾ ಪಸಾರ ವಯ-68 ವರ್ಷ ಉ||ನಿವೃತ್ತ ಕೆಎಸಆರಟಿಸಿ ನೌಕರ ಸಾ|| ವಿದ್ಯಾ ನಗರ ಕಲಬುರಗಿ ಇವನ ಹತ್ತಿರ 1400/-ರೂ ಕಣದಲ್ಲಿ 1384/-ರೂ ಇದ್ದು  ಹಣ ಹೀಗೆ ಒಟ್ಟು 15,584/- ರೂ ಮತ್ತು 52 ಇಸ್ಪೇಟ ಎಲೆಗಳು ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಮದ್ಯಾಹ್ನ 12-00 ಗಂಟೆಯಿಂದ ಮದ್ಯಾಹ್ನ 1-00 ಗಂಟೆಯವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಸದರಿ ಜಪ್ತಿಮಾಡಿದ ಮುದ್ದೆ ಮಾಲು ಹಾಗೂ ಜಪ್ತಿ ಪಂಚನಾಮೆ ಹಾಗೂ ಆರೋಪಿತರೊಂದಿಗೆ ಮರಳಿ ಠಾಣೆಗೆ ಮದ್ಯಾಹ್ನ 1-30 ಗಂಟೆಗೆ ಬಂದು ಸದರಿ ಆರೋಪಿತರ ವಿರುದ್ಧ ಕ್ರಮ ಜರಗಿಸುವಂತೆ ಜ್ಞಾಪನಾ ಪತ್ರ ನೀಡಿದ್ದರ ಮೇಲಿಂದ ಸದರಿ ಆರೋಪಿತರ ವಿರುಧ್ದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲ್ ಮಾನ್ಯ ನ್ಯಾಯಾಲ್ಯಕ್ಕೆ ಪರವಾನಗೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲ್ಯ ಸಾಯಂಕಾಲ್ 4-30 ಗಂಟೆಗೆ ಪರವಾನಗೆ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ನಂ:166/2023 ಕಲಂ:87 ಕೆಪಿ ಎಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್-‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ.31-10-2023 ರಂದು ನನಗೆ ಶ್ರೀ ಸಂತೋಷ ತಟ್ಟೆಪಳ್ಳೆ ಪಿಐ ಸಬ್ ಅರ್ಬನ್ ಪೊಲೀಸ ಠಾಣೆ ರವರು ತಿಳಿಸಿದೆನೆಂದರೆ ನಿನ್ನೆ ರಾತ್ರಿ ಪೆಟ್ರೊಲಿಂಗ ಕರ್ತವ್ಯದಲ್ಲಿ ಇದ್ದ ಎಸಿಪಿ ಸಾಹೇಬರು ಸಬ್ ಅರ್ಬನ್ ಉಪವಿಭಾಗ ರವರು, ನಾನು ಮತ್ತು ಸಿಬ್ಬಂದಿಯವರಾದ ಹುಸೇನಭಾಷಾ ಎಎಸ್ಐ, ರಾಜಕುಮಾರ ಗಂದೆ ಹೆಚ್ಸಿ, ಹಾಜಿ ಮಲಂಗ್ ಹೆಚ್ಸಿ, ಪ್ರಕಾಶ ಪಿಸಿ ರವರು ಪೆಟ್ರೊಲಿಂಗದಲ್ಲಿ ಇದ್ದಾಗ ರಾತ್ರಿ ದಿನಾಂಕ 31/10/2023 ರಂದು 12:30 ಎಎಮ್ ಕ್ಕೆ ಆಳಂದ ಚೆಕ್ಕಪೊಷ್ಟ ಹತ್ತಿರದಿಂದ ಆಳಂದ ಕಡೆಗೆ ಒಂದು ಅಶೋಕ ಲೈಲ್ಯಾಂಡ ಲಾರಿದಲ್ಲಿ ಸರಕಾರಿ ಇತರೆ ಯೋಜನೆಯಡಿ ಬಿಡುಗಡೆಯಾದ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ಧೇಶದಿಂದ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ ನಾವು ಆಳಂದ ಚೆಕ್ಕಪೊಷ್ಟ ಹತ್ತಿರ ನಿಂತಿದ್ದಾಗ ನಮ್ಮ ಮುಂದುಗಡೆಯಿಂದ ಲಾರಿ ಹೋದಾಗ ನಾವು ಆ ಲಾರಿಯನ್ನು ಆಕಾಶ ಧಾಬಾದ ಮುಂದುಗಡೆ ಹಿಡಿದು ಅದನ್ನು ಯು ಟರ್ನಮಾಡಿ ನಿಲ್ಲಿಸಿ ಅದರಲ್ಲಿ ಇದ್ದ ಇಬ್ಬರು ವ್ಯಕ್ತಿಯನ್ನು ಹಿಡಿದು ಅವರ ಹೆಸರು ವಿಚಾರಿಸಲು ಚಾಲಕ ತನ್ನ ಹೆಸರು ಸೈಫಾಲಿಕ ತಂದೆ ಮೃತುಜಾ ಮುಲ್ಲಾ ಅಂತಾ ಹೇಳಿದ್ದು ಮತ್ತು ಇನ್ನೊಬ್ಬನ ಹೆಸರು ವಿಚಾರಿಸಲು ಶಿವಕುಮಾರ @ ನಾತು ತಂದೆ ಶಂಕರ ರಾಠೋಡ ಅಂತಾ ಹೇಳಿದ್ದು ಲಾರಿಯಲ್ಲಿ ಇರುವ ಅಕ್ಕಿ ಬಗ್ಗೆ  ದಾಖಲಾತಿ ಕೇಳಲು ಇರುದಿಲ್ಲಾ ಅಂತಾ ಹೇಳಿದ್ದು ಇರುತ್ತದೆ. ನಂತರ ನಾವು ಸುರಕ್ಷತೆ ದೃಷ್ಟಿಯಿಂದ ರಾತ್ರಿ ಆಗಿರುವುದರಿಂದ ಅಕ್ಕಿ ತುಂಬಿದ ಲಾರಿಯನ್ನು ಹಾಗು ಇಬ್ಬರು ವ್ಯಕ್ತಿಯನ್ನು ಠಾಣೆಗೆ ತಂದಿರುತ್ತೇವೆ ಅಂತಾ ತಿಳಿಸಿದಾಗ ನಾನು ಇಂದು ದಿನಾಂಕ 31/10/2023 ರಂದು 1:00 ಪಿಎಮ್ ಕ್ಕೆ ನಾನು ಮತ್ತು ಡಿ.ಬಿ ಪಾಟೀಲ ಸಹಾಯಕ ನಿದರ್ೆಶಕರು ಅನೌಪಚಾರಿಕ ಪಡಿತರ ಪ್ರದೇಶ ಕಲಬುರಗಿ ರವರು ಠಾಣೆಗೆ ಬಂದು ಪಂಚರಾದ 1) ಶ್ರೀ ಮೂಷಾ ಪಟೇಲ ತಂದೆ ಮಹ್ಮದ ಪಟೇಲ ವಯಾ: 30 ವರ್ಷ ಉ: ಖಾಸಗಿ ಕೆಲಸ ಸಾ:  ಖಾದ್ರಿ ಚೌಕ ಕಲಬುರಗಿ 2) ಭೀಮರಾವ ತಂದೆ ಶ್ರೀಮಂತ ಜಮಖಂಡಿ ವಯಾ:32 ವರ್ಷ ಉ: ಖಾಸಗಿ ಕೆಲಸ ಸಾ:  ಶಹಾಬಜಾರ ಕಲಬುರಗಿ ಇಬ್ಬರು ಪಂಚರನ್ನು ನೋಟಿಸ್ ಕೊಟ್ಟು ಬರಮಾಡಿಕೊಂಡು ಠಾಣೆಯ ಮುಂದುಗಡೆ ಇರುವ ಅಶೋಕ ಲೈಲ್ಯಾಂಡ ಲಾರಿ ನಂಬರ ನೋಡಲಾಗಿ ಕೆಎ 08 7744 ಇದ್ದು ಅದರ ಒಳಗಡೆ ನೋಡಲಾಗಿ ಪಡಿತರ ಅಕ್ಕಿ ಹಾಗು ಸರಕಾರದ ವಿವಿಧ ಯೋಜನೆಯಡಿ ಬಿಡುಗಡೆಯಾದ ಅಕ್ಕಿಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದು ಇದ್ದು ಪರಿಶೀಲನೆ ಮಾಡಲಾಗಿ ಅಂದಾಜು 50 ಕೆಜಿ ತೂಕವುಳ್ಳ 411 ಬ್ಯಾಗಗಳಿದ್ದು ಅದರ ಚಾಲಕ ಹೆಸರು ವಿಚಾರಿಸಲು ಸೈಪಾಲಿಕ ತಂದೆ ಮೃತುಜಾ ಮುಲ್ಲಾ ವಯಾ: 25 ವರ್ಷ ಉ: ಚಾಲಕ ಸಾ: ಆಳಂದ ಚೆಕ್ಕಪೊಷ್ಟ ಹತ್ತಿರ ಕಲಬುರಗಿ ಅಂತಾ ಹೇಳಿದ್ದು ನಂತರ ಇನ್ನೊಬ್ಬನ ಹೆಸರು ವಿಚಾರಿಸಲು ಶಿವಕುಮಾರ @ ನಾತು ತಂದೆ ಶಂಕರ ರಾಠೋಡ ವಯಾ: 34 ವರ್ಷ ಉ: ವ್ಯಾಪಾರ ಸಾ: ಶಾಹಾಬಜಾರ ತಾಂಡಾ ಕಲಬುರಗಿ ಅಂತಾ ಹೇಳಿದ್ದು .ಇವನನ್ನು ವಿಚಾರಿಸಲು ನಾನು ಅಕ್ಕಿ ವ್ಯಾಪಾರ ಮಾಡಿಕೊಂಡಿದ್ದು ನನ್ನದೊಂದು ಶಿವಶಕ್ತಿ ನಗರದಲ್ಲಿ ಇರುವ ಭಗತ ಸಿಂಗ್ ಚೌಕ ಹತ್ತಿರ ಒಂದು  ಅಕ್ಕಿ ತುಂಬುವ ಶೇಟರ ಇದ್ದು ಆ ಲೋಡ ಮಾಡಿ ಉಳಿದ ಅಂದಾಜು ಉಳಿದ 65 ಅಕ್ಕಿ ತುಂಬಿದ ಪಾಕೇಟಗಳು ಇರುತ್ತವೆ. ನಾನು ಬೇರೆ ಬೇರೆ ಕಡೆಯಿಂದ ಸರಕಾರದಿಂದ ಬಿಡುಗಡೆಯಾಧ ಅಕ್ಕಿ ಖರೀದಿ ಮಾಡಿ ಒಂದು ಪ್ಲಾಷ್ಟಿಕ ಚೀಲದಲ್ಲಿ ಹಾಕಿ ಶೇಖರಣೆ ಮಾಡಿಕೊಂಡು ಅದನ್ನು ಲಾರಿದಲ್ಲಿ ಲೋಡ ಮಾಡಿ ಉಮಗರ್ಾಕ್ಕೆ ನಾನು ಮತ್ತು ನಮ್ಮ ಚಾಲಕ ಸೈಪಾಲಿಕ ಕೂಡಿಕೊಂಡು ಅಲ್ಲಿಗೆ ಹೋಗಿ ರಾಜು ರಾಠೋಡ ರವರು ಎಲ್ಲಿ ಇಳಿಸಲು ಹೇಳುತ್ತಾರೆ ಅಲ್ಲಿ ಇಳಿಸಿ ಬರುತ್ತೇವೆ.ಅಂತಾ ಹೇಳಿರುತ್ತಾನೆ. ಸದರಿ ಜಪ್ತಿ ಮಾಡಿರುವ ಪಡಿತರ ಅಕ್ಕಿಯನ್ನು ಸುರಕ್ಷತೆ ದೃಷ್ಟಿಯಿಂದ ಕಲಬುರಗಿ ಪಡಿತರ ಪ್ರದೇಶ ಕಲಬುರಗಿಯ ಕೆ.ಎಫ.ಸಿ.ಎಸ್.ಸಿ. ಸಗಟು ಮಳಿಗೆಯಲ್ಲಿ ಅನಲೋಡ ಮಾಡಲಾಗಿರುತ್ತದೆ. ಜಪ್ತಿ ಪಡಿಸಿಕೊಂಡ ಆಹಾರ ದಾನ್ಯಗಳು ಅಂದಾಜು 238 ಕ್ವಿಂಟಲ 51 ಕೆಜಿ ತೂಕವುಳ್ಳುದ್ದು ಕಿಮ್ಮತ್ತು ರೂ.8,10,934/- ಹಾಗು ಲಾರಿ ನಂಬರ ಕೆಎ 08 7744 ಇದರ ಅ:ಕಿ: 3,00,000/- ರೂ ಹೀಗೆ ಒಟ್ಟು 1,110,934/- ಗಳಾಗಿರುತ್ತದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಹಾಗೂ ಸರಕಾರದ ಇತರೆ ಯೋಜನೆಗಳಿಗೆ ಬಿಡುಗಡೆಯಾದ ಅಕ್ಕಿಯನ್ನು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತಿದ್ದಾಗ ಖಚಿತ ಬಾತ್ಮಿಯಂತೆ ದಾಳಿ ಮಾಡಿ ಹಿಡಿದು ಜಪ್ತ ಮಾಡಿದ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955 ರ ಕಲಂ. 3 &7 ಅಡಿಯಲ್ಲಿ ಸದರಿ ಲಾರಿ ನಂಬರ ಕೆಎ 08 7744 ನೇದ್ದರ ಚಾಲಕನಾದ ಸೈಪಾಲಿಕ ತಂದೆ ಮೃತುಜಾ ಮುಲ್ಲಾ  ಹಾಗು ಅಕ್ಕಿಯ ಮಾಲಿಕರಾದ ಶಿವಕುಮಾರ @ ನಾತು ತಂದೆ ಶಂಕರ ರಾಠೋಡ ಮತ್ತು ರಾಜು ರಾಠೋಡ  ರವರ ವಿರುದ್ದ ಪ್ರಕರಣ ದಾಖಲಿಸಲು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 325/2023 ಕಲಂ ESSENTIAL COMMODITIES ACT, 1955 (U/s-7,3) ಪ್ರಕಾರ ಕೇಸು ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ನಾನು ಶ್ರೀಮತಿ ಕಾವೇರಿ ಗಂಡ ಜಗನ್ನಾಥ ಯಾದಗಿರಿ ವಯ;26ವರ್ಷ ಉ;ಮನೆಕೆಲಸ ವಿಳಾಸ;ಇಟಗಾ ಅಹಮದಾಬಾದ ತಾ;ಜಿ;ಕಲಬುರಗಿ, ಈಮೂಲಕ ತಮ್ಮಲ್ಲಿ ವಿನಂತಿಸಿ ಕೊಳ್ಳುವದೇನೆಂದರೆ, ಕಳೆದ 7 ವರ್ಷಗಳ ಹಿಂದೆ ನನ್ನ ಮದುವೆಯು ಇಟಗಾ ಅಹಮದಾಬಾದನ ಜಗನ್ನಾಥ ತಂದೆ ಶರಣಪ್ಪಾ ಯಾದಗಿರಿ ಇವರೊಂದಿಗೆ ಮದುವೆಯಾಗಿದ್ದು, ನನ್ನ ಗಂಡ ಜಗನ್ನಾಥ ಯಾದಗಿರಿ ಇವರು ನಮ್ಮ ಗ್ರಾಮದ ಪುಂಡಲಿಕ ಪೂಜಾರಿ ಇವರ ಹತ್ತಿರ ಒಕ್ಕಲುತನ ಕೆಲಸಕ್ಕಾಗಿ ದುಡಿಯುವದಕ್ಕೆ ಇದ್ದಾನೆ , ನಾನು ಕೂಲಿಕೆಲಸ ಮಾಡಿಕೊಂಡಿದ್ದು ನಮಗೆ ಇಬ್ಬರು ಮಕ್ಕಳಿದ್ದು 1] ಕಾತರ್ಿಕ ವಯ;6ವರ್ಷ, 2] ಭೀಮಣ್ಣಾ ವಯ;4 ವರ್ಷದವರಿರುತ್ತಾರೆ. ಹೀಗಿದ್ದು ಇಂದು ದಿನಾಂಕ.31-10-2023 ರಂದು ಮುಂಜಾನೆ ಹೊಲದಲ್ಲಿ ತೋಗರಿಗೆ ನೀರು ಬಿಡುವದಿದೆ ಅಂತಾ ಹೇಳಿ ಹೊಲಕ್ಕೆ ಹೋಗಿದ್ದನು , ನಾನು ನಮ್ಮೂರಿನ ಗುತ್ತೇದಾರ ಇವರ ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದೆ ಮದ್ಯಾನ 4-30 ಗಂಟೆಯ ಸುಮಾರಿಗೆ ನಮ್ಮ ಗ್ರಾಮದ ಶರಣಪ್ಪಾ ತಂದೆ ದೇವಿಂದ್ರಪ್ಪಾ ನಾಯಿಕೋಡಿ ಇತನು ಮೋಟಾರ ಸೈಕಲ ಮೇಲೆ ನಾವು ಕೆಲಸ ಮಾಡುವ ಹೊಲಕ್ಕೆ ಬಂದು ತಿಳಿಸಿದ್ದು ಏನೆಂದರೆ ನನ್ನ ಗಂಡ ಜಗನ್ನಾಥ ಇವರಿಗೆ ಮದ್ಯಾನ 4-00 ಗಂಟೆಯ ಸುಮಾರಿಗೆ ಹೊಲದಲ್ಲಿ ತೊಗರಿಗೆ ನೀರು ಬಿಡುವಾಗ  ಬಲಗಾಲು ಪಾದದ ಮೇಲೆ ಹಾವು ಕಚ್ಚಿರುತ್ತದೆ ಬಾ ಅಂತಾ ಹೇಳಿದರು ಆಗ ನಾನು ಆತನ ಮೋಟಾರ ಸೈಕಲ್ ಮೇಲೆ ಬಂದಾಗ ನಮ್ಮೂರಿನ ಬಸ್ಸ ಸ್ಟಾಪ ಹತ್ತಿರ ಬಂದಾಗ  ನನ್ನ ಗಂಡ ಜಗನ್ನಾಥನಿಗೆ ಉಪಚಾರ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ವಾಹನದಲ್ಲಿ ಹಾಕಿದರು ನನ್ನ ಗಂಡ ಬೇಹೋಸದಲ್ಲಿದ್ದನು, ಅವನ ಬಲಬಾಗಲು ಪಾದದ ಮೇಲೆ ಹಾವು ಕಚ್ಚಿದ ಗಾಯವಿದ್ದು ರಕ್ತಗಾಯವಾಗಿತ್ತು , ಅವರ ಹತ್ತಿರ ಹೊಲದ ಮಾಲಿಕ ಪುಂಡಲಿಕ ಪೂಜಾರಿ , ದೇವಿಂದ್ರಪ್ಪಾ ಜಮದಾರ ಹಾಗೂ ತಯ್ಯಾಬ ಪಟೇಲ್ ಇವರೆಲ್ಲರೂ ಇದ್ದರು ಅಷ್ಟರಲ್ಲಿ ನಮ್ಮ ಮಾವ  ಶರಣಪ್ಪಾ ಯಾದಗೀರ ,ಅತ್ತೆ ಮಲ್ಲಮ್ಮಾ ಇವರು ಕೂಡಾ ಅಲ್ಲಿಗೆ ಬಂದಿದ್ದರು  ಆಗ ಎಲ್ಲರೂ ಕೂಡಿಕೊಂಡು ನನ್ನ ಗಂಡ ಜಗನ್ನಾಥನಿಗೆ ಉಪಚಾರ ಕುರಿತು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ವೈದ್ಯಾದಿಕಾರಿಗಳಿಗೆ ತೋರಿಸಲಾಗಿ ಅಂದಾಜು ಸಮಯ 6-15 ಗಂಟೆಯ ಸುಮಾರಿಗೆ ವೈದ್ಯರು ನನ್ನ ಗಂಡ ಮೃತ ಪಟ್ಟಿರುತ್ತಾನೆ. ಅಂತಾ ತಿಳಿಸಿರುತ್ತಾರೆ. ಆದುದರಿಂದ ನನ್ನ ಗಂಡ ಜಗನ್ನಾಥ ತಂದೆ ಶರಣಪ್ಪಾ ಯಾದಗಿರಿ ವಯ;32 ವರ್ಷ ಉ; ಒಕ್ಕಲುತನ ಕೃಷಿ ಕಾಮರ್ಿಕ  ಸಾ;ಇಟಗಾ ಅಹಮದಾಬಾದ  ಇವರು ಹೊಲದಲ್ಲಿ ತೊಗರಿಗೆ ನೀರು ಬಿಡುವಾಗ ಆಕಸ್ಮಿಕವಾಗಿ ಹಾವು ಕಚ್ಚಿದರಿಂದ ನನ್ನ ಗಂಡನ ಸಾವು ಸಂಭವಿಸಿದ್ದು ಇರುತ್ತದೆ. ಈ ಘಟನೆಯ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಮತ್ತು ದೂರು ಇರುವದಿಲ್ಲಾ , ಕಾರಣ ಮುಂದಿನ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ತಮ್ಮಲ್ಲಿ ವಿನಂತಿ. ಇಂದು ದಿನಾಂಕ. 31-10-2023 ರಂದು7-15 ಪಿ.ಎಂ.ಕ್ಕೆ. ಫಿರ್ಯಾದಿದಾರರ ದೂರನ್ನು ಠಾಣೆಯಲ್ಲಿ ಸ್ವೀಕರಿಸಿಕೊಂಡೇನು. ಸದರಿ ದೂರಿನ ಸಾರಂಶದ ಮೇಲಿಂದ ನಮ್ಮ ಠಾಣೆಯ ಯು.ಡಿ.ಆರ್. ನಂ. 28/2023 ಕಲಂ. 174 ಸಿ.ಆರ್.ಪಿ.ಸಿ.ನೆದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ್‌ ಠಾಣೆ :- ದಿನಾಂಕ:01.11.2023 ರಂದು 11:30 ಎ.ಎಮ್.ಕ್ಕೆ ಕುಮಾರಿ ಪರಿಮಳಾ ತಂದೆ ಷಣ್ಮುಕಪ್ಪ ಕರನಾಳ ವಯ: 25 ವರ್ಷ ಉ: ಮನೆಗೆಲಸ ಸಾ|| ಪ್ಲಾಟ ನಂ.92, ಹರಿಕೃಷ್ಣ ನಗರ, ಸಂತೋಷ ಕಾಲೋನಿ, ಉದನೂರು ರಸ್ತೆ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ, ನಾನು ಇಂಜನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ಸದ್ಯ ಸರಕಾರಿ ನೌಕರಿಯ ಸಲುವಾಗಿ ಅಭ್ಯಾಸ ಮಾಡಿಕೊಂಡು ಮನೆಯಲ್ಲಿ ಇರುತ್ತೇನೆ. ನಮ್ಮ ತಂದೆ ಷಣ್ಮುಕಪ್ಪ ಇವರು ನಿವೃತ್ತ ನೌಕರರಿದ್ದು, ನಮ್ಮ ತಾಯಿ ಚಂದ್ರಕಲಾ ಇವರು ಸುಮಾರು 2 ವರ್ಷಗಳ ಹಿಂದೆ ಮೃತಪಟ್ಟಿದ್ದು ಇರುತ್ತದೆ. ನಮ್ಮ ತಂದೆ-ತಾಯಿಗೆ ನಾವು ಒಟ್ಟು 6 ಜನ ಮಕ್ಕಳಿದ್ದು, ಇಬ್ಬರು ಗಂಡುಮಕ್ಕಳಿದ್ದು ಗಂಡುಮಕ್ಕಳ ಪೈಕಿ ವೆಂಕಟೇಶ ಅಂತ ಇದ್ದು ಇವನಿಗೆ 2012ನೇ ಸಾಲಿನಲ್ಲಿ ಪುಷ್ಪಾ ಎನ್ನುವವರೊಂದಿಗೆ ಮದುವೆಯಾಗಿದ್ದು ನಮ್ಮನ್ನು ಬಿಟ್ಟು ತಾನು ಬೇರೆಯಾಗಿರುತ್ತಾನೆ. ಎರಡನೇಯವನು ರಾಘವೇಂದ್ರ ಅಂತ ಇದ್ದು ಬೆಂಗಳೂರಿನಲ್ಲಿ ಡಿಪ್ಲೋಮೋ ವಿದ್ಯಾಭ್ಯಾಸ ಮಾಡಿಕೊಂಡು ಇರುತ್ತಾನೆ. ಹಾಗೂ ನಾಲ್ಕು ಜನ ಹೆಣ್ಣುಮಕ್ಕಳ ಪೈಕಿ ವೀರಸಿದ್ದಮ್ಮ ಮೊದಲನೇಯವಳು ಇವಳಿಗೆ ವಿವಾಹವಾಗಿದ್ದು ತನ್ನ ಗಂಡನ ಮನೆಯಲ್ಲಿ ಇರುತ್ತಾಳೆ. ಎರಡನೇಯವಳು ಪ್ರಭಾವತಿ ಅಂತ ಇದ್ದು ಶಿಕ್ಷಕಿ ಅಂತ ಕೆಲಸ ಮಾಡಿಕೊಂಡು ಇದ್ದು, ಮೂರನೇಯವಳು ವಿಜಯಲಕ್ಷ್ಮಿ ಅಂತ ಇದ್ದು ವಿವಾಹವಾಗಿದ್ದು ತನ್ನ ಗಂಡನೊಂದಿಗೆ ಇರುತ್ತಾಳೆ ಹಾಗೂ ಕೊನೆಯವಳು ನಾನು ಇರುತ್ತೇನೆ. ನಮಗೆ ಮತ್ತು ನಮ್ಮ ಅಣ್ಣ ವೆಂಕಟೇಶ ಇತನಿಗೆ ಆಗಾಗ ಆಸ್ತಿಯ ವಿಚಾರಕ್ಕಾಗಿ ತಂಟೆ-ತಕರಾರು ಆಗುತ್ತಾ ಬಂದಿದ್ದು ಇದೇ ವಿಷಯವಾಗಿ ನಮ್ಮ ಅಣ್ಣ ಮಾನ್ಯ ನ್ಯಾಯಾಲಯದಲ್ಲಿ ದಾವೆ ಹಾಕಿದ್ದು ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುತ್ತದೆ, ಆದರೂ ಕೂಡ ಆಗಾಗ ನಮ್ಮ ಅಣ್ಣ ಆಸ್ತಿಯ ವಿಚಾರವಾಗಿ ನಮ್ಮ ಮನೆಗೆ ಬಂದು ಜಗಳ ಮಾಡುತ್ತಾ ಬಂದಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ:31.10.2023 ರಂದು 04:30 ಪಿ.ಎಮ್. ಸುಮಾರಿಗೆ ನಾನು ಮತ್ತು ನಮ್ಮ ತಂದೆ ಇಬ್ಬರೂ ಮನೆಯಲ್ಲಿದ್ದಾಗ ನಮ್ಮ ಅಣ್ಣ ವೆಂಕಟೇಶ ಹಾಗೂ ನಮ್ಮ ಅತ್ತಿಗೆ ಪುಷ್ಪಾ ಇವರಿಬ್ಬರೂ ಮನೆಗೆ ಕೂಡಿ ಬಂದವರೇ, ನಮ್ಮ ಅಣ್ಣ ವೆಂಕಟೇಶ ಇತನು ಬಂದವನೇ ನಮ್ಮ ತಂದೆಯವರಿಗೆ ತಡೆದು ಕೋರ್ಟದಲ್ಲಿ ಮನೆ ನನ್ನ ಹೆಸರಿಗೆ ಆಗಿರುತ್ತದೆ, ನನಗೆ ಮನೆ ಕೊಡು ಅಂತ ಅನ್ನುತ್ತಾ ನಮ್ಮ ತಂದೆಯವರಿಗೆ ಎದೆಯ ಮೇಲಿನ ಅಂಗಿ ಹಿಡಿದುಕೊಂಡು ಎರಡು ಕಪಾಳದ ಮೇಲೆ ಹೊಡೆದನು ಅಷ್ಟರಲ್ಲಿ ಆಗ ನಾನು ಜಗಳ ಬಿಡಿಸಲು ಹೋದಾಗ ನಮ್ಮ ಅತ್ತಿಗೆ ಪುಷ್ಪಾ ಇವಳು ಮಧ್ಯದಲ್ಲಿ ಬಂದು ಏ ರಂಡಿ ನೀನು ಏಕೆ ಮಧ್ಯದಲ್ಲಿ ಬರುತ್ತಿಯಾ, ನಾಲ್ಕು ಜನ ಹೆಣ್ಣುಮಕ್ಕಳು ಆಸ್ತಿಯ ಸಲುವಾಗಿ ಮೂಲ ಆಗಿದ್ದಿರಿ ಅಂತ ಅನ್ನುತ್ತಾ ನನ್ನ ಕೂದಲು ಹಿಡಿದುಕೊಂಡು ನನ್ನ ಬಲಗಡೆ ಕಪಾಳದ ಮೇಲೆ ಹೊಡೆದಳು, ಆಗ ನಾನು ಮತ್ತು ನಮ್ಮ ತಂದೆ ಇಬ್ಬರೂ ಕೂಡಿ ಮನೆಯಿಂದ ಹೊರಗೆ ಬಂದು ಇ.ಆರ್.ಎಸ್.ಎಸ್.-112 ನೇದ್ದಕ್ಕೆ ಕರೆ ಮಾಡಿ ಮನೆಯ ಹೊರಗಡೆ ಕುಳಿತಿದ್ದಾಗ ನಮ್ಮ ಅಣ್ಣ ಮತ್ತು ಅತ್ತಿಗೆ ಇಬ್ಬರೂ ಅಲ್ಲಿಂದ ಹೋಗುವಾಗ ನಮ್ಮ ಅಣ್ಣ ಇತನು ಮನೆ ನಮ್ಮದು ಅಂತ ಏನಾದರೂ ಇನ್ನೊಂದು ಸಾರಿ ಅಂದರೇ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿ, ನಮ್ಮ ಮನೆಯ ಕೀಲಿಯನ್ನು ಹಾಕಿ ಮನೆಯಿಂದ ಹೋಗುವಷ್ಟರಲ್ಲಿ ಇ.ಆರ್.ಎಸ್.ಎಸ್.-112 ಪೊಲೀಸರು ಬಂದು ಸದರಿ ಆಸ್ತಿಯು ನಿಮಗೆ ಇನ್ನೂ ಆಗಿರುವುದಿಲ್ಲ ಅಂತ ತಿಳಿ ಹೇಳಿದಾಗ ನಮ್ಮ ಅಣ್ಣ ವೆಂಕಟೇಶ ಹಾಗೂ ಅವನ ಹೆಂಡತಿ ಪುಷ್ಪಾ ಇಬ್ಬರೂ ಕೂಡಿ ಮನೆಯಿಂದ ಹೊರಗೆ ಹೋಗಿದ್ದು ಇರುತ್ತದೆ. ನನಗೆ ಮತ್ತು ನಮ್ಮ ತಂದೆ ಇಬ್ಬರಿಗೂ ಒಳಪೆಟ್ಟು ಆಗಿದ್ದರಿಂದ ನಾವು ಉಪಚಾರ ಕುರಿತು ಯಾವುದೇ ಆಸ್ಪತ್ರೆಗೆ ಹೋಗಿರುವುದಿಲ್ಲ. ನಾನು ಮತ್ತು ನಮ್ಮ ತಂದೆ ಇಬ್ಬರೂ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಅರ್ಜಿ ಕೊಡುತ್ತಿದ್ದು ಇರುತ್ತದೆ. ಕಾರಣ ನಮ್ಮ ಅಣ್ಣ ವೆಂಕಟೇಶ ಹಾಗೂ ಅತ್ತಿಗೆ ಪುಷ್ಪಾ ಇಬ್ಬರೂ ಕೂಡಿ ಮನೆಗೆ ಬಂದು ನಮ್ಮ ತಂದೆಗೆ ತಡೆದು ಹೊಡೆ-ಬಡೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ ಸದರಿಯವರ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವಿನಂತಿ ಅಂತ ಇತ್ಯಾದಿಯಾಗಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 165/2023 ಕಲಂ 341, 323, 504, 506 ಸಂಗಡ 34 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್-‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 01/11/2023 ರಂದು ಮದ್ಯಾಹ್ನ 12.15 ಪಿಎಮ್ ಪಿರ್ಯಾದಿ ಜಮೀಲ ಅಹ್ಮದ್ ತಂದೆ ಸಾಹೇಬ್ ಪಟೇಲ್  ಸಾಃ ಮದೀನಾ ಕಾಲೋನಿ ಕಲಬುರಗಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ದೂರು ಸಲ್ಲಿಸಿದರ  ಸಾರಾಂಶವೇನೆಂದರೆ ನಮ್ಮ ಸಹೋದರಿ ಮಗ ಮಹ್ಮದ ಮುಖಿಯಾರ ತಂದೆ ಮೀರಾಸಾಬ ವಯಾಃ 30 ವರ್ಷ ಉದ್ಯೋಗಃ ಚಾಲಕ, ನಾ ಮದಿನಾ ಕಾಲೋನಿ ಕಲಬುರಗಿ ಹಾವ: ಪುಣೆ ಮಹಾರಾಷ್ಟ್ರ.  ಇತನು ಪುಣೆಯಲ್ಲಿ ಟಂ ಟಂ ಚಾಲನೆ ಮಾಡಿಕೊಂಡಿರುತ್ತಾನೆ.  ಇತನು 2012 ನೇ ಸಾಲಿನಲ್ಲಿ ಜಾಫರಬಾದ ಸರ್ವೇ ನಂ 44/3 ಪ್ಲಾಟ ನಂ 01, 30*40 ಅಳತೆಯ ಫ್ಲಾಟನ್ನು ಮಹ್ಮದ ಸಾಜೀದ ತಂದ ಮಹ್ಮದ ದಸ್ತಗೀರ ಇವರಿಂದ 2.08.000/- ರೂ ಕೊಟ್ಟು ಖರೀದಿ ಮಾಡಿ ಆ ಜಾಗದಲ್ಲಿ ಕವೌಂಡ ಮತ್ತು ಒಂದು ಅಂಗಡಿ ಒಂದು ರೂಮ್ ಕಟ್ಟಿ ಮೇಲೆ ಪತ್ರ ಹಾಕಿರುತ್ತೇವೆ. ಹೀಗಿರುವಾಗ ಒಂದು ವರ್ಷದ ಹಿಂದೆ ನಮ್ಮ ಜಾಗದ ಪಕ್ಕದ ಫ್ಲಾಟನ ಮಾಲೀಕ ಗಾಬೀಜ ಕಾಲೋನಿಯ ರಪೀಕ ಇತನು ಬಂದು ಪ್ಲಾಟ ನನಗೆ ಮಾರಾಟ ಮಾಡಿ ನನಗೆ ಬೇಕು ಕೊಡದೇ ಇದ್ದರೇ ನೋಡಿ ಏನು ಮಾಡುತ್ತೇನೆ ಅಂತಾ ನಮಗೆ ಹೆದರಿಸುತ್ತಾನೆ.  ಆದರೇ ನಾವು ಅವನಿಗೆ ನಮ್ಮ ಪ್ಲಾಟ ಕೊಡುವದಿಲ್ಲ ಅಂತಾ ಹೆಳಿರುತ್ತೇವೆ  ಆದರೇ ದಿನಾಂಕ 01.11 2023 ರಂದು 01:30 ಎ ಎಮ್ ದಿಂದ 03:00 ಎಎಮ್ ಅವಧಿಯಲ್ಲಿ ರಪೀಕ ಇತನು ಜೆ.ಸಿ.ಪಿ.  ತೆಗೆದುಕೊಂಡು ಬಂದು ನಮ್ಮ ಅಳಿಯನ ಮನೆ ಕೆಡವಿರುತ್ತಾನೆ, ಪಕ್ಕದ ಮನೆಯವರಾದ ಮಹಿಬೂಬ ಇವರು ನಮಗೆ ಪೋನ್ ಮಾಡಿ ಯಾರೋ ನಿಮ್ಮ ಮನೆ ಜೆಸಿಪಿಯಿಂದ ಕೆಡವಿದ್ದಾರೆ ಅಂತಾ ಹೇಳಿದಾಗ, ನಾನು ನಮ್ಮ ಅಣ್ಣ ನಜೀರ ಅಹ್ಮದ ಸಯ್ಯದ ಜೀಲಾನಿ ಮತ್ತು ಅಬ್ದುಲ್ ಮುತಾಲಿಕ ಸ್ಥಳಕ್ಕೆ ಹೋಗಿ ನೋಡಿದಾಗ ರಪೀಕ ಇತನು ನಮ್ಮ ಮನೆ ಸಂಪರ್ಣನ ನೆಲಸಮ ಮಾಡಿರುತ್ತಾನೆ.  ಅಂದಾಜು 7,00000 ಲಕ್ಷ ರೂ ಲುಕ್ಸಾನು ಮಾಡುತ್ತಾನೆ. ಕಾರಣ ನಮ್ಮ ಅಳಿಯನ ಪ್ಲಾಟದಲ್ಲಿ ಅತಿಕ್ರಮ ಪ್ರವೇಶ ಮಾಡಿ ಸರ್ವೇ ನಂ 44/3 ಫ್ಲಾಟ ನಂ 01 ನೇದ್ದರಲ್ಲಿ ಕಟ್ಟಿದ ಕಟ್ಟಡವನ್ನು ನೆಲಸಮ ಮಾಡಿ 7.00000/- ರೂ ಲಕ್ಷಾನು ಮಾಡಿದ ರಪೀಕ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪುಣೆಯಲ್ಲಿ ಇರುವ ನಮ್ಮ ಅಳಿಯನೋಂದಿಗೆ, ವಿಚಾರಿಸಿ ದೂರೂ ನೀಡಿರುತ್ತಾರೆ. ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 326/2023 ಕಲಂ 427 447 506  ಐ.ಪಿ.ಸಿ ಪ್ರಕಾರ ಕೇಸು ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 02-12-2023 07:00 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080