ಅಭಿಪ್ರಾಯ / ಸಲಹೆಗಳು

ಮಹಿಳಾ ಪೊಲೀಸ ಠಾಣೆ :-  ಇಂದು ದಿನಾಂಕ ೦೧.೧೧.೨೦೨೧ ರಂದು ಸಾಯಂಕಾಲ ೬ ಗಂಟೆಗೆ ಫರ‍್ಯಾದಿ ಶ್ರೀಮತಿ ಸ್ನೇಹಾ ಗಂಡ ಸಾಗರ ಪಾಟೀಲ ವಯಸ್ಸು: ೨೭ ವರ್ಷಗಳು ಜಾತಿ ಲಿಂಗಾಯತ ಉದ್ಯೋಗ: ಗೃಹಿಣಿ ಸಾ: ಘಾಬ್ರೆಲೇಔಟ ಸಿದ್ದೇಶ್ವರ ಕಲ್ಯಾಣ ಮಂಟಪ ಹತ್ತಿರ, ಹಳೆ ಜೇವರ್ಗಿ ರಸ್ತೆ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ನನಗೆ ಸಾಗರ ಪಾಟೀಲ ಇವರಿಗೆ ದಿನಾಂಕ:೧೬/೧೨/೨೦೧೨ ರಲ್ಲಿ ಸಂಪ್ರಾದಾಯ ಪ್ರಕಾರ ನನ್ನ ತಂದೆ-ತಾಯಿ ಯವರು ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ೨-೩ ತಿಂಗಳ ನಂತರ ದಿನನಿತ್ಯ ನನ್ನ ಗಂಡನಾದ ಸಾಗರ, ಮಾವನಾದ ಪರಮೇಶ್ವರ, ಅತ್ತೆಯಾದ ನಿರ್ಮಲಾರವರು ದಿನನಿತ್ಯ ತವರು ಮನೆಯಿಂದ ಇನ್ನು ಹೆಚ್ಚಿನ ವರದಕ್ಷಿಣೆ ತಗೆದುಕೊಂಡು ಬರುವಂತೆ ಹೊಡೆಬಡೆ ಮಾಡಿ ದೈಹಿಕ ಮಾನಸಿಕ ಹಿಂಸೆಕೊಡುತ್ತಿದ್ದರು. ದಿನಾಂಕ ೧೪.೧೧.೨೦೨೦ ರಂದು ಸಾಯಂಕಾಲ ೭ ಗಂಟೆಗೆ ನನಗೆ ನನ್ನ ಗಂಡನ ನನ್ನ ತವರು ಮನೆಗೆ ತಂದು ಬಿಟ್ಟಿರುತ್ತಾನೆ. ದಿನಾಂಕ:೧೧/೦೨/೨೦೧೫ ರಂದು ನನಗೆ ಹೆಣ್ಣು ಮಗು ಜನಿಸಿರುತ್ತದೆ ನನ್ನ ಗಂಡ ಮತ್ತು ಅತ್ತೆ ಮಾವ ನೀನು ಹೆಣ್ಣು ಮಗು ಹಡೆದಿರುತ್ತಿ ೫ ಲಕ್ಷ ರೂಪಾಯಿ ಮತ್ತು ೧೦ ತೊಲೆ ಬಂಗಾರ ತೆಗೆದುಕೊಂಡು ಬರುವುದಿದರೆ ಬಾ ಇಲ್ಲದಿದ್ದಾರೆ ಬರಬೇಡ ಅಂತಾ ಹೇಳಿರುತ್ತಾರೆ.ನನ್ನ ತವರು ಮನೆಯ ಹಿಂದಿನ ಮನೆಯಲ್ಲಿ ಇರುವ ಅಭಿಲಾಷ ಈತನು ನಮ್ಮ ಮನೆಯ ಹತ್ತಿರ ಬಂದು ನನಗೆ ಚುಡಾಯಿಸುವುದು ಮಾಡುತ್ತಿದ್ದರು. ದಿನಾಂಕ:೨೮/೦೫/೨೦೨೦ ರಂದು ಮಧ್ಯಾಹ್ನ ೨:೦೦ ಪಿಎಂ ಗಂಟೆಗೆ ನಾನು ಮನೆಯಲ್ಲಿದ್ದಾಗ ಅಭಿಲಾಷ ನನ್ನ ಮನೆಗೆ ಬಂದು ತನ್ನೊಂದಿಗೆ ಮದುವೆ ಮಾಡಿಕೊಳ್ಳಲು ಬಾ ಅಂತಾ ಬೆದರಿಸಿ ನನಗೆ ತನ್ನ ಆಟೋದಲ್ಲಿ ಒತ್ತಾಯ ಪೂರ್ವಕವಾಗಿ ಕೂಡಿಸಿಕೊಂಡು ಅವನ ಚಿಕ್ಕಪ್ಪನಾದ ಪ್ರಕಾಶ ಈತನ ಮನೆಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿ ನನಗೆ ಒತ್ತಾಯ ಪೂರ್ವಕವಾಗಿ ಜಬರಿ ಸಂಭೋಗ ಮಾಡಿರುತ್ತಾನೆ. ನಂತರ ಬಹಳಷ್ಟು ಸಲ ನನಗೆ ಬೆದರಿಸಿ ತನ್ನ ಮೋಟಾರ ಸೈಕಲ್ ಮೇಲೆ ಕೊಡಿಸಿಕೊಂಡು ಪ್ರಕಾಶ ಇವರ ಮನೆಗೆ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗಿ ಜಬರಿ ಸಂಬೋಗ ಮಾಡಿರುತ್ತಾನೆ. ದಿನಾಂಕ:೨೮/೦೭/೨೦೨೦ ರಂದು ನನಗೆ ಜೀವ ಬೆದರಿಕೆ ಹಾಕಿ ಅಭಿಲಾಷ ಈತನು ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ತಂದೆಯಾದ ಸಂಜಯಕುಮಾg, ತಾಯಿ ರೇಣುಕಾ, ತಮ್ಮ ನಿಂಗರಾಜ, ತಂಗಿ ಶೃತಿ ರವರಿಗೆ ಭೇಟಿ ಮಾಡಿಸಿ ತಾನು ನನಗೆ ಇಟ್ಟುಕೊಳ್ಳುವುದಾಗಿ ಹೇಳಿರುತ್ತಾನೆ. ನಾನು ಅವರ ಮನೆಯಿಂದ ಹೊರಗೆ ಹೋದರೆ ನನಗೆ ಮತ್ತು ನನ್ನ ಕುಟುಂಬದವರಿಗೆ ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕುತ್ತಾರೆ. ಅಲ್ಲಿಂದ ದಿನಾಂಕ:೨೬/೦೭/೨೦೨೧ ರ ರವರೆಗೆ ನನಗೆ ನಿರಂತರ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಮಾಡಿರುತ್ತಾರೆ.ದಿನಾಂಕ:೨೬/೦೭/೨೦೨೧ ರಂದು ೭:೦೦ ಪಿಎಂ ಗಂಟೆಗೆ ಗಂಡನಾದ ಸಾಗರ ಪಾಟೀಲ, ಮಾವÀ ಪರಮೇಶ್ವರ, ಅತ್ತೆ ನಿರ್ಮಲಾ ಮತ್ತು ವೈಶಾಲಿ ರವರು ನನಗೆ ಮಾತಾಡುವುದಿದೆ ಬಾ ಎಂದು ನನ್ನ ಸೋದರತ್ತೆ ಮನೆಗೆ ಕರೆದುಕೊಂಡು ಹೋಗಿ ನನ್ನ ಗಂಡ ಸಾಗರ ಈತನು ವಿವಾಹ ವಿಚ್ಚೇದನೆ ಕೊಡಬೇಕು ಅಂತಾ ಹೇಳಿ ನನಗೆ ಕೈಯಿಂದ ಕಪಾಳಕ್ಕೆ ಹೊಡೆದ, ನನ್ನ ಮಾವ ನನಗೆ ಬೆನ್ನಿನಲ್ಲಿ ಕೈಯಿಂದ ಹೊಡೆದನು, ನನ್ನ ಅತ್ತೆ ನನ್ನ ಕೂದಲು ಹಿಡಿದು ಜಗ್ಗಿ ಕಪಾಳಕ್ಕೆ ಹೊಡೆದರು ವೈಶಾಲಿ ಇವಳು ನನಗೆ ರಂಡಿ-ಬೋಸಡಿ ಸಾಗರ ಈತನಿಗೆ ವಿವಾಹ ವಿಚ್ಛೇಧನ ಕೊಡದಿದ್ದರೆ ನನಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೋಗಿರುತ್ತಾರೆ. ನಂತರ ದಿನಾಂಕ:೩೧/೧೦/೨೦೨೧ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ನನ್ನ ಮನೆಯ ಕಡೆಗೆ ಬಂದು ಮತ್ತೆ ಇನ್ನೊಂದು ಸಾರಿ ಬಂದು ನನಗೆ ಏಳೆದುಕೊಂಡು ಹೋಗುತ್ತೇನೆ ಅಂತಾ ಬೆದರಿಸಿ ಹೋಗಿರುತ್ತಾನೆ. ಕಾರಣ ನನಗೆ ಅನ್ಯಾಯ ಮಾಡಿರುವ ಮೇಲಿನವರೆಲ್ಲರ ಮೇಲೆ ಕೇಸ್ ದಾಖಲಿಸಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 02-11-2021 12:53 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080