ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: ೧೨-೦೯-೨೦೨೨ ರಂದು ಬೆಳಿಗ್ಗೆ ೧೧:೦೦ ಗಂಟೆಯಿಂದ ಸಾಯಾಂಕಾಲ ೫:೦೦ ಗಂಟೆಯ ಮದ್ಯದ ಅವದಿಯಲ್ಲಿ ಪರ‍್ಯಾದಿಯು ರಾಮ ಮಂದಿರ ಸರ್ಕಲ ಹತ್ತಿರ ಶ್ರೀಗುರು ಕಾಲೇಜಿನ ಕಡೆಗೆ ಹೋಗುವ ಬೈಪಾಸ ರೋಡಿನ ಪಕ್ಕದ ಗಿಡದ ಹತ್ತಿರ ನಿಲ್ಲಿಸಿದ ಮೊ.ಸೈ ನಂ. ಕೆಎ-೩೨/ಇಪಿ೩೪೦೪ ಅ.ಕಿ ೪೫೦೦೦/- ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ ಠಾಣೆ :- ದಿನಾಂಕ:01.10.2022 ರಂದು 01:00 ಪಿ.ಎಂ.ಕ್ಕೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಮರಳಿ ಠಾಣೆಗೆ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಿರ್ಯಾದಿ ಶ್ರೀ ಅಬ್ಬಾಸ ಖಾನ ತಂದೆ ನಾಸೀರ ಖಾನ ವಯ: 23 ವರ್ಷ ಜಾ: ಮುಸ್ಲಿಂ ಉ: ಪಿ.ಓ.ಪಿ. ಕೆಲಸ ಸಾ|| ಮರಗಮ್ಮ ಗುಡಿ ಹತ್ತಿರ ಅಶೋಕ ನಗರ ಕಲಬುರಗಿ ಮೊ.ನಂ. 9741441145 ಇವರ ಹೇಳಿಕೆ ಪಡೆದುಕೊಂಡಿದ್ದು ಸದರಿ ಹೇಳಿಕೆಯ ಸಾರಾಂಶವೆನೆಂದರೆ, ನಾನು ಪಿ.ಓ.ಪಿ. ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನಮ್ಮ ತಂದೆ ಗೌಂಡಿ ಕೆಲಸ ಮಾಡುತ್ತಿದ್ದು, ತಾಯಿ ಮುಮತಾಜ ಬೇಗಂ ಇವರು ಮನೆ ಕೆಲಸ ಮಾಡಿಕೊಂಡು ಇರುತ್ತಾರೆ. ನಮ್ಮ ತಂದೆ ತಾಯಿ ಒಟ್ಟು 3 ಜನ ಹೆಣ್ಣು ಮಕ್ಕಳು ಮತ್ತು ಒಬ್ಬಳೆ ಹೆಣ್ಣು ಮಗಳು ಇರುತ್ತಾಳೆ. ನಮ್ಮ ಅಣ್ಣ 1) ಹಸನ್ ಖಾನ ಇತನು ಪಿ.ಓ.ಪಿ. ಗುತ್ತೇದಾರ ಕೆಲಸ ಮಾಡುತ್ತಿದ್ದು, 2) ಶಬ್ಬೀರ ಖಾನ ಇತನು ಸಹ ನನ್ನಂತೆ ಪಿ.ಓ.ಪಿ ಕೆಲಸ ಮಾಡಿಕೊಂಡು ಇರುತ್ತಾನೆ. ನನಗೆ ನಮ್ಮ ಬಡಾವಣೆಯ ಪಕ್ಕದಲ್ಲಿರುವ ವಿಜಯ ನಗರ ಬಡಾವಣೆಯ ಪ್ರಶಾಂತ @ ಬುಡ್ಡ ಪ್ರಶಾಂತ ಇತನ ಪರಿಚಯ ಇರುತ್ತದೆ. ಇತನು ಆಗಾಗ ನನಗೆ ತಡೆದು ಅವನ ಖರ್ಚಿನ ಸಲುವಾಗಿ ಹಣ ಕೇಳುತ್ತಿದ್ದನು, ನಾನು ಒಂದೆರಡು ಸಲ ಹಣವನ್ನು ನೀಡಿರುತ್ತೇನೆ.  ಹೀಗಿದ್ದು ನಿನ್ನೆ ದಿನಾಂಕ:30.09.2022 ರಂದು ರಂದು 08:00 ಪಿ.ಎಂ.ಕ್ಕೆ ನಾನು ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಕಪಿಲಾ ಬಾರಗೆ ಮದ್ಯ ಸೇವನೆಗಾಗಿ ಹೋಗುತ್ತಿದ್ದಂತೆ ಬಾರ  ಒಳಗಡೆಯಿಂದ ನನ್ನ ಪರಿಚಯದವನಾದ ಪ್ರಾಶಾಂತ @ ಬುಡ್ಡ ಪ್ರಶಾಂತ ಮತ್ತು ಅವನ ಸ್ನೇಹಿತನಾದ ಪ್ರೇಮ @ ಪಪ್ಪು ಇಬ್ಬರೂ ಬರುತ್ತಿದ್ದರು, ಆಗ ಪ್ರಶಾಂತ ಇತನು ನನಗೆ ತಡೆದು ನೀನು ಇತ್ತಿತ್ತಲಾಗಿ  ನಾನು ಖರ್ಚಿಗೆ ಹಣ ಕೇಳಿದರೆ ನನಗೆ ಹಣ ಕೊಡುತ್ತಿಲ್ಲ ಅಲ್ಲದೆ ನನ್ನ ಬಗ್ಗೆ ಬೇರೆ ಬೇರೆ ಆಪಾದನೆಗಳನ್ನು ಮಾಡುತ್ತಿರುವೆ ಅಂತ ಅನ್ನುತ್ತಾ ನನ್ನ ಎಡಗಡೆ ಕಪಾಳಕ್ಕೆ ಹೊಡೆದು ನಾನು ನಿನಗೇಕೆ ಹಣ ಕೊಡಬೇಕು ಅಲ್ಲದೆ ನಾನು ನಿನ್ನ ಬಗ್ಗೆ ಏಕೆ ಮಾತಾಡಲಿ ಅಂತ ಅನ್ನುತ್ತಾ ಅಲ್ಲಿಂದ ಬಸ್ ಸ್ಟ್ಯಾಂಡ ಕಡೆಗೆ ಓಡುತ್ತಿದ್ದಾಗ ಪ್ರಶಾಂತ ಇತನೊಂದಿಗೆ ಇದ್ದ ಪ್ರೇಮ ಇತನು ತನ್ನ ಇತರೆ ಸ್ನೇಹಿತರಿಗೆ  ಫೋನಮಾಡಿ ಕರೆಯಿಸಿದ್ದು ಪ್ರೇಮ ಇತನ ತಮ್ಮನಾದ ಅಕ್ಷಯ ಮತ್ತು ಇನ್ನೂ ಇಬ್ಬರೂ  2 ದ್ವಿ-ಚಕ್ರ  ವಾಹಗಳ ಮೇಲೆ ಬಂದು ನನಗೆ ಜಬರದಸ್ತಿಯಿಂದ ಕೊಟನೂರ ಮಠದ ಹತ್ತಿರ ಕರೆದೊಯ್ದು ಅಲ್ಲಿ ಬೆಲ್ಟಿನಿಂದ ಹಾಗೂ ಪ್ಲಾಸ್ಟಿದ್ ಪೈಪಿನಿಂದ ನನ್ನ ಬೆನ್ನಿಗೆ, ತೊಡೆಗೆ ಹೊಟ್ಟೆಗೆ ಪ್ರಶಾಂತ ಮತ್ತು ಪ್ರೇಮ ಇಬ್ಬರೂ ಹೊಡೆದಿರುತ್ತಾರೆ. ನಾನು ಚಿರಾಡುವುದನ್ನು ಕೇಳಿ ಪ್ರೇಮ ಇತನ ತಮ್ಮನಾದ ಅಕ್ಷಯ ಇತನು ಕೈಯಿಂದ ನನ್ನ ಮುಖಕ್ಕೆ ಹೊಟ್ಟೆಗೆ ಹೊಡೆದಿದ್ದು ಅವರೊಂದಿಗೆ ಇದ್ದ ಇನ್ನೂ ಇಬ್ಬರೂ ಅವರಿಗೆ ಪ್ರಚೋದನೆ ನೀಡುತ್ತಾ ಇನ್ನೂ ಚೆನ್ನಾಗಿ ಹೊಡೆಯಿರಿ ಅಂತ ಪ್ರಚೋದನೆ ನೀಡುತ್ತಾ ಇನ್ನೂ ಚೆನ್ನಾಗಿ ಹೊಡೆಯಿರಿ ಅಂತ ಹೇಳುತ್ತಿದ್ದರು. ನಂತರ ಈ ವಿಷಯ ನನ್ನ ಅಣ್ಣನಾದ ಹಸನ್ ಇತನಿಗೆ ತಿಳಿದು ಕೋಟನೂರ ಮಠದ ಹತ್ತಿರ ಬಂದು ಜಗಳ ಬಿಡಿಸಿರುತ್ತಾನೆ. ಅವರೆಲ್ಲರೂ ಅಲ್ಲಿಂದ ಹೋಗುವಾಗ ಇವತ್ತು ನಿನಗೆ ಜೀವ ಸಹಿತ ಬಿಟ್ಟಿದ್ದೇವೆ ಇನ್ನೊಮ್ಮೆ ಹಣ ಕೇಳಿದರೆ ಕೊಡದೆ ಹೋದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಭಯ ಹಾಕಿರುತ್ತಾರೆ. ನಂತರ ನಾವಿಬ್ಬರು ಅಣ್ಣತಮ್ಮಂದಿರರು ಮನೆಗೆ ಬಂದಿದ್ದು, ಇಂದು ನನಗೆ ಬೇನೆ ತಾಳಲಾರದೆ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಆಗಿರುತ್ತೇನೆ. ನನಗೆ ಹಣದ ವಿಷಯದಲ್ಲಿ ವಿನಾಕಾರಣ ತಡೆದು ನಿಲ್ಲಿಸಿ ಹೊಡೆಬಡೆಮಾಡಿ ಅಲ್ಲಿಂದ ಬೇರೆಕಡೆ ಜಬರದಸ್ತಿಯಿಂದ ಕರೆದೊಯ್ದು ಅಲ್ಲಿ ಸಹ ಹೊಡೆಬಡೆಮಾಡಿ ಜೀವ ಬೇದರಿಕೆ ಹಾಕಿದ ಪ್ರಶಾಂತ, ಪ್ರೇಮ, ಅಕ್ಷಯ ಹಾಗೂ ಇಬ್ಬರು ಸ್ನೇಹಿತರು ಹೆಸರು ವಿಳಾಸ ಗೊತ್ತಿಲ್ಲ ನೋಡಿದರೆ ಗುರ್ತಿಸುತ್ತೇನೆ ಇವರುಗಳ ವಿರುದ್ಧ ಕ್ರಮ ಜರುಗಿಸಬೇಕು ಅಂತ ಇತ್ಯಾದಿಯಾಗಿ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಇತ್ತೀಚಿನ ನವೀಕರಣ​ : 31-10-2022 06:32 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080