ಅಭಿಪ್ರಾಯ / ಸಲಹೆಗಳು

ರಾಘವೇಂದ್ರ ನಗರ ಪೊಲೀಸ್‌ ಠಾಣೆ :-  ದಿನಾಂಕ:01.09.2022 ರಂದು ಮದ್ಯಾಹ್ನ 1-30 ಗಂಟೆಗೆ ಶ್ರಿಪರಶುರಾಮ ಪಿ.ಎಸ.ಐ ರವರು ಠಾಣೆಗೆಹಾಜರಾಗಿ ಒಬ್ಬಆರೋಪಿತ, ಮುದ್ದೆಮಾಲು ಹಾಗೂಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಜ್ಞಾಪನಾಪತ್ರ ನೀಡಿದ್ದ ಸಾರಾಂಶವೆನೆಂದರೆ ಇಂದು ದಿನಾಂಕ:01.09.2022 ರಂದು ಬೆಳಿಗ್ಗೆ 11.00 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಖಚಿತಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಗಂಗಾನಗರದ ಹನುಮಾನಗುಡಿ ಹತ್ತಿರ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದಮಾರಾಟ ಮಾಡುತ್ತಿದ್ದಾನೆ ಅಂತಖಚಿತಬಾತ್ಮಿ ಬಂದ ಮೇರೆಗೆ ಸದರಿ ವ್ಯಕ್ತಿ ಮೇಲೆ ದಾಳಿ ಮಾಡಿ ಕ್ರಮಕೈಕೊಳ್ಳುವ ಕುರಿತು ಇಬ್ಬರು ಪಂಚರ ಮತ್ತು ಠಾಣೆಯ, ಶ್ರೀ ಸಿಕ್ರೇಶ್ವರ ಹೆಚ್ಸಿ-134 ಶ್ರೀ ಆತ್ಮಕುಮಾರಪಿಸಿ-499 ಶ್ರೀ ಶರಣಬಸವಪಿಸಿ-511, ಶ್ರೀ ರಮೇಶಪಿಸಿ-447 ರವರನ್ನು ಸಂಗಡ ಕರೆದುಕೊಂಡು ಬಾತ್ಮಿಯಂತೆ ಸ್ಥಳಕ್ಕೆ ಬೆಳಿಗ್ಗೆ  11.30 ಗಂಟೆಗೆ ಹೋಗಿ ನೋಡಲು ಗಂಗಾನಗರದಲ್ಲಿರುವ ಹನುಮಾನಗುಡಿಯ ಹತ್ತಿರ ಇರುವ ಸಾರ್ವಜನಿ ರಸ್ತೆಯ ಬದಿಯಲ್ಲಿ ಒಬ್ಬವ್ಯಕ್ತಿ ಒಂದು ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಟೇಟ್ರಾಪಾಕೇಟಗಳು ಇಟ್ಟುಕೊಂಡು ಮಧ್ಯಮಾರಾಟ ಮಾಡುತ್ತಿರುವದನ್ನು ಖಚಿತಪಡಿಸಿಕೊಂಡು ಸಿಬ್ಬಂದಿಯವರು ಸಹಾಯದಿಂದ ಪಂಚರಸಮಕ್ಷಮ ಬೆಳಿಗ್ಗೆ 11.45 ಗಂಟೆಗೆ ದಾಳಿಮಾಡಿ ಮಧ್ಯಮಾರಾಟ ಮಾಡುತ್ತಿದ್ದವನಿಗೆ ಹಿಡಿದುವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ರಾಮು ತಂದೆ ಶಾಂತಪ್ಪಾ ಕಲ್ಲೂರ ವಯ-55 ವರ್ಷ ಜಾ||ಕಬ್ಬಲಿಗ ಉ||ಹಾಲಿನವ್ಯಾಪಾರ ಸಾ||ಗಂಗಾನಗರ ಕಲಬುರಗಿ ಅಂತ ತಿಳಿಸಿದ್ದು, ಸದರಿಯವರ ಅಂಗಶೋಧನೆ ಮಾಡಲು ಸದರಿಯವರ ಹತ್ತಿರ ನಗದು ಹಣ 100/- ರೂನ ಗದು ಹಣ ಹಾಗೂ ದೊರೆತಿದ್ದು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ 90 ಎಮ್.ಎಲ್.ದ 30 ಓರಿಝನಲ್ಚೋಯಿಸ್ಟೇಟ್ರಾ ಪಾಕೇಟಗಳಿದ್ದುಒಂದುಓರಿಝನಲ್ಚೋಯಿಸ್ಟೇಟ್ರಾ ಪಾಕೇಟ ಬೇಲೆ 35.ರೂ 13 ಪೈಸೆ. ಇದ್ದು ಒಟ್ಟು 30 ಓರಿಝನಲ್ಚೋಯಿಸ್ಟೇಟ್ರಾ ಪಾಕೇಟಗಳ ಬೆಲೆ 1053.9 ನಂತರ ಸದರಿಯವನಿಗೆ ಮಧ್ಯ ಎಲ್ಲಿಂದ ಯಾವಾಗ ತಂದು ಮಾರಾಟ ಮಾಡುತ್ತಿರುವಿರಿ ಮಾರಾಟ ಮಾಡುವದಕ್ಕೆ ನಿಮ್ಮ ಹತ್ತಿರ ಲೈಸನ್ಸ್ ಇದೆಹೇಗೆ ಅಂತವಿಚಾರಿಸಿದಾಗಇ ಲ್ಲನಮ್ಮಹತ್ತಿರ ಯಾವುದೇರೀತಿ ಲೈಸನ್ಸ್ಇರುವದಿಲ್ಲ. ನಾವು ಮಾರಾಟ ಮಾಡುವ ಸಂಬಂದನೆ ಬೇರೆ ಬೇರೆ ಕಡೆಯಿಂದ ತೆಗೆದುಕೊಂಡು ಬಂದು ಸಂಗ್ರಹಿಸಿ ಇಟ್ಟಿರುತ್ತೇನೆ. ಅದರಲ್ಲಿ ಕೆಲವು ಪಾಕೇಟಗಳು ಮಾರಾಟ ಮಾಡಿದರಿಂದ 100 ನಗದು ಹಣಬಂದಿರುತ್ತವೆ ಅವು ಈಗಾಗಲ್ಲೆ ತಾವುಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ತಿಳಿಸಿರುತ್ತಾರೆ ಸ್ಥಳದಲ್ಲಿ ದೊರೆತ ಸ ರಾಯಿ ಓರಿಝನಲ್ಚೋಯಿ ಸ್ಟೇಟ್ರಾ ಪಾಕೇಟಗಳಲ್ಲಿ ಒಂದು ಟೇಟ್ರಾ ಪಾಕೇಟಕ್ಕೆ ಬಿಳಿಯ ಬಟ್ಟೆಯ ಚೀಲದಲ್ಲಿ ಹಾಕಿಹೊಲೆದು ಆರ್ಅಂತ ಅರಗಿನ ಶೀಲಮಾಡಿ ಎಪ್.ಎಸ್.ಎಲ್ಪ ರಿಕ್ಷೇಕುರಿತು ಪ್ರತ್ಯೇಕವಾಗಿ ತೆಗೆದು ಉಳಿದ ಮಧ್ಯಟೇಟ್ರಾ ಪಾಕೇಟಗಳು ಒಂದುಚೀಲದಲ್ಲಿ ಹಾಕಿ ಪಂಚರು ಸಹಿಮಾಡಿದ ಚೀಟಿ ಅಂಟಿಸಿ ಪ್ರಕರಣ ದಮುಂದಿನ ಪುರಾವೆಗಾಗಿನನ್ನತಾಬಾಕ್ಕೆತೆಗೆದುಕೊಂಡುಜಪ್ತಿಪಂಚನಾಮೆಯನ್ನುಕೈಕೊಂಡಿದ್ದುಇರುತ್ತದೆ. ಸದರಿಜಪ್ತಿ ಮಾಡಿದ ಮುದ್ದೆಮಾಲು, ಕೈಕೊಂಡ ಜಪ್ತಿಪಂಚನಾಮೆ ಮತ್ತು ಆರೋಪಿತನೊಂದಿಗೆ ಠಾಣೆಗೆ ಹಾಜರಾಗಿದ್ದು ಸದರಿ ಆರೋಪಿತರವಿರುಧ್ದಕಲಂ 32,34 ಕೆ.ಇ.ಎಕ್ಟಪ್ರಕಾರಪ್ರಕರಣ ದಾಖಲ ಮಾಡಿಕೊಂಡು ತನಿಖೆಕೈ ಕೊಳ್ಳಲು ಸೂಚಿಸಲಾಗಿದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :-  ದಿನಾಂಕ: 01.09.2022 ರಂದು ಸಾಯಂಕಾಲ 5 ಗಂಟೆಗೆ ಸರ್ಕಾರಿ ತರ್ಫೆ ಫಿರ್ಯಾದಿ ಶ್ರೀ ವಂದನಾ ಪಿ,ಎಸ್,ಐ (ಕಾ & ಸು) ಸ್ಟೇಷನ್ ಬಜಾರ ಪೊಲೀಸ್ ಠಾಣೆ ಕಲಬುರಗಿ ಇವರು ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆಯೊಂದಿಗೆ ಜ್ಞಾಪನಾ ಪತ್ರ ಕೊಟ್ಟು ಕಾನೂನು ಕ್ರಮಕ್ಕಾಗಿ ಸೂಚಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ. 01.09.2022 ರಂದು 2.30 ಪಿ.ಎಂ ಸುಮಾರಿಗೆ ಠಾಣೆಯಲ್ಲಿ ಇದ್ದಾಗ ಖಚಿತ ಬಾತ್ಮೀ ಬಂದಿದ್ದೇನೆಂದರೆ, ಸ್ಟೇಷನ್ ಬಜಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯ ತಾರಫೈಲ್ ಬಡಾವಣೆಯ 13ನೇ ಕ್ರಾಸ್ ಹತ್ತಿರ ಯಾರೋ ಇಬ್ಬರು  ಅನಧೀಕೃತವಾಗಿ ಸಿಂಧಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮೀ ಬಂದ ಪ್ರಯುಕ್ತ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿರವರಾದ ಶಶಿಕುಮಾರ ಸಿಪಿಸಿ 513 ಸಂಗಣ್ಣಾ ಸಿಪಿಸಿ 257 ರವರೊಂದಿಗೆ ಮದ್ಯಾಹ್ನ 3.00 ಗಂಟೆಗೆ ಠಾಣೆಯಿಂದ ಹೊರಟು ಹೋಗಿ ತಾರಫೈಲ್ ಬಡಾವಣೆಯ 13ನೇ ಕ್ರಾಸ್ ಹತ್ತಿರದ ಶರಣಮ್ಮಾ ನೆಲೋಗಿ ಇವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಂದು ಬಕೇಟನಲ್ಲಿ ಸಿಂಧಿಯನ್ನು ಇಟ್ಟುಕೊಂಡು ಒಂದು ಪ್ಲಾಸ್ಟೀಕ್ ಮಗ್ಗಿನಿಂದ ಗೀಲಾಸನಲ್ಲಿ ಹಾಕಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 3.30 ಪಿ.ಎಂಕ್ಕೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು 1) ಶರಣಮ್ಮಾ ಗಂಡ ಸಾಗರ ನೆಲೋಗಿ ವಯ|| 50 ವರ್ಷ ಜಾ|| ಮಾದಿಗ ಉ|| ಕೂಲಿಕೆಲಸ ಸಾ|| 13ನೇ ಕ್ರಾಸ್ ತಾರಫೈಲ್ ಕಲಬುರಗಿ 2) ಅಜಯ ತಂದೆ ಸಾಗರ ನೆಲೋಗಿ ವಯ|| 26 ವರ್ಷ ಜಾ|| ಮಾದಿಗ ಉ|| ಕೂಲಿಕೆಲಸ ಸಾ|| 13ನೇ ಕ್ರಾಸ್ ತಾರಫೈಲ್ ಕಲಬುರಗಿ ಅಂತಾ ತಿಳಿಸಿದ್ದು ಸಿಂಧಿ ಮಾರಾಟ ಮಾಡುತ್ತಿರುವ ಬಗ್ಗೆ ವಿಚಾರಿಸಲು ಯಾವುದೆ ಕಾಗದ ಪತ್ರಗಳು ಇಲ್ಲದೆ ಅನದಿಕೃತವಾಗಿ ಲೈಸೆನ್ಸ ಇಲ್ಲದೇ ಮಾರಾಟ ಮಾಡುತ್ತಿದ್ದೆವೆ ಅಂತಾ ಹೇಳಿ ಒಪ್ಪಿಕೊಂಡಿದ್ದು ಇರುತ್ತವೆ. ಸದರಿ ಬಕೇಟನಲ್ಲಿರುವ ಸಿಂಧಿಯನ್ನು ತಜ್ಞರ ಪರೀಕ್ಷೆ ಕುರಿತು ಕಳುಹಿಸಲು ಪ್ರತ್ಯೇಕವಾಗಿ 8 ಪ್ಲಾಸ್ಟೀಕ್ ಬಾಟಲಗಳಲ್ಲಿ ಹಾಕಿದ್ದು ಪ್ರತಿಯೊಂದು ಬಾಟಲನ್ ಅ:ಕಿ: 30/- ರೂ.ರಂತೆ ಒಟ್ಟು 240/- ರೂ.ಗಳು ಮಾರಾಟ ಮಾಡಿದ ಸಂಗ್ರಹವಾದ ಹಣ 800/- ರೂ.ಗಳು ಅದರಂತೆ ಕೃತ್ಯಕ್ಕೆ ಬಳಕೆ ಮಾಡಿದ ಒಂದು ನೀಲಿ ಬಣ್ಣದ ಪ್ಲಾಸ್ಟೀಕ್ ಬಕೇಟ ಅ:ಕಿ: 10/- ರೂಪಾಯಿ, ಒಂದು ನೀಲಿ ಬಣ್ಣದ ಪ್ಲಾಸ್ಟೀಕ್ ಮಗ್ಗ, 3 ಪ್ಲಾಸ್ಟೀಕ್ ಗೀಲಾಸಗಳು ಹಾಗೂ ಒಂದು ಪ್ಲಾಸ್ಟೀಕ ಡಬ್ಬಿಯಲ್ಲಿ ಸಿ,ಎಸ್ ಪೌಡರ ಅಂತಹ ಬಿಳಿ ಪೌಡರ ದೋರಕಿರುತ್ತವೆ. ಅವುಗಳನ್ನು ಬಿಳಿ ಬಟ್ಟೆಯ ಚೀಲಗಳಲ್ಲಿ ಹಾಕಿ ಬಾಯಿ ಮುಚ್ಚಿ ಹೊಲೆದು ಅರಗಿನಿಂದ “ಎಸ್” ಎಂಬ ಮುದ್ರೆಯನ್ನು ಪಂಚರ ಸಮಕ್ಷಮ ಹಾಕಿ ಶಿಲ್ ಮಾಡಿದ್ದು ಇರುತ್ತದೆ. ಸಿಂಧಿಯನ್ನು ಎಲ್ಲಿಂದ ತೆಗೆದುಕೊಂಡು ಬರುವುದಾಗಿ ವಿಚಾರಿಸಲು ಆಂದ್ರಪ್ರದೇಶದ ಇಂದಾಪೂರದ ಕೃಷ್ಣಪ್ಪಾ ಗೌಡ ಎನ್ನುವವನ ಹತ್ತಿರ ತೆಗೆದುಕೊಂಡು ಬಂದು ಮಾರಾಟ ಮಾಡುವುದಾಗಿ ತಿಳಿಸಿರುತ್ತಾರೆ. ಈ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ: 01.09.2022 ರಂದು ಮದ್ಯಾಹ್ನ 3.30 ಗಂಟೆಯಿಂದ 4.30 ಗಂಟೆಯವರೆಗೆ ಪಂಚರ ಸಮಕ್ಷಮ ಕೈಕೊಂಡು ಆರೋಪಿ ,ಜಪ್ತಿ ಪಂಚನಾಮೆ ಮತ್ತು ಮುದ್ದೆ ಮಾಲು ಸಮೇತ ಠಾಣೆಗೆ 5.00 ಪಿ.ಎಂ ಕ್ಕೆ ತಂದು ಸದರಿಯವರ ಮೇಲೆ ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 01-09-2022  ರಂದು ಫಿರ್ಯಾದಿದಾರರು ನೀಡಿದ ಫಿರ್ಯಾದಿಯೇನೆಂದರೆ ಸದರಿ ಆರೋಪಿತರು ಪಂಚಾಯತಿಯ ಬಿಲ್ ಕಲೆಕ್ಟರ್ ಮತ್ತು ಪಂಪ್ ಆಪರೇಟರ್ ಆಗಿದ್ದು ಅವರು ನನಗೆ ದಿನಾಂಕಃ-೨೧/೦೮/೨೦೨೨ ರಂದು ವಿದ್ಯತ್ ಬಲ್ಬ ಹಾಕುವುದೆ ಬಾ ಎಂದು ಕರೆದುಕೊಂಡು ಹೋಗಿ ನಾವು ೪ ಗಂಟೆಯವರೆಗೆ ಕರೆಂಟು ತೆಗೆಯಲು ಹೇಳಿದ್ದೇವೆ ಕರೆಂಟು ಬರುವುದಿಲ್ಲಾ ಬಾ ಎಂದು ಕರೆದುಕೊಂಡು ಹೋಗಿ ಕಂಬ ಹತ್ತಿಸಿದ್ದು ನಾನು ವೈರ್‌ನ್ನು ಹಿಡಿದಾಗ ನನಗೆ ಕರೆಂಟು ಬಡೆದು ನಾನು ಕೆಳಗೆ ಬಿದ್ದಿದ್ದು ನಾನು ಭಾರಿ ಗಾಯವಾಗಿದ್ದು ಸದರಿ ಆರೋಪಿತರು ನನಗೆ ಆಸ್ಪತ್ರೆಗೆ ಸೇರಿಸಿ ನಾವು ನಿನ್ನ ವೆಚ್ಚ ಭರಿಸುತ್ತೇವೆ ಎಂದು ಹೇಳಿ ಪೊಲೀಸ್ ಕಂಪಲೆಂಟ್ ಕೊಡಬೇಡ ಎಂದಿದ್ದರು ಮತ್ತು ಇಂದು ವೆಚ್ಚ ಹೆಚ್ಚಾಗಿ ಬಂದಿದ್ದರಿಂದ ನಾವು ವೆಚ್ಚ ಭರಿಸಲು ಆಗುವುದಿಲ್ಲ ನೀನು ಬೇಕಾದರೆ ಕಂಪಲೆಂಟ್‌ಕೊಡು ಎಂದು ಹೇಳಿದ್ದು ನಾನು ಅವರ ವಿರುದ್ದ ಪ್ರಕರಣ ದಾಖಲು ಮಾಡಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಚೌಕ ಪೊಲೀಸ್‌ ಠಾಣೆ :-  ದಿನಾಂಕ:01.09.2022 ರಂದು ಸಮಯ ಸಾಯಂಕಾಲ 4.30 ಗಂಟೆಯ ಸುಮಾರಿಗೆ ಪೊಲೀಸ್ ಇಲಾಖೆ ಪಿ.ಎಸ್.ಐ ರವರಾದ ಶ್ರೀ ಗೌಸ ಮೋಹಿನೊದ್ದೀನ ಇವರಿಂದ ಬಂದ ಖಚಿತ ಬಾತ್ಮಿ ಮೇರೆಗೆ ಕಲಬುರಗಿ ನಗರದ ಜಿಡಿಎ ಶಹಾಬಜಾರದಿಂದ ಎಪಿಎಂಸಿ ಹಿಂದಿನ ಗೇಟ ಕಡೆಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕ ಪಡಿತರ ಅಡಿಯಲ್ಲಿ ಸರಬರಾಜು ಮಾಡುವ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ನಂತರ ಮಾನ್ಯ ಉಪನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಲಬುರಗಿ ರವರ ಅನುಮತಿ ಮೇರೆಗೆ ನಾನು ಮತ್ತು ಶ್ರೀ ಯಲ್ಲಾಲಿಂಗ ಆಹಾರ ನಿರೀಕ್ಷಕರು ಪಡಿತರ ಪ್ರದೇಶ ಮತ್ತು ಶ್ರೀ ಅಮರೇಶ ಆಹಾರ ನಿರೀಕ್ಷಕರು ಶಹಾಬಾದ-ವಾಡಿ ಹಾಗೂ ಪಿ.ಎಸ್.ಐ ರವರಾದ ಶ್ರೀ ಗೌಸ ಮೋಹಿನೊದ್ದೀನ ಹಾಗೂ ಇಬ್ಬರೂ ಪಂಚರೊಂದಿಗೆ ಕಲಬುರಗಿ ನಗರದ ಜಿಡಿಎ ಶಹಾಬಜಾರದಿಂದ ಎಪಿಎಂಸಿ ಹಿಂದಿನ ಗೇಟ ಕಡೆಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕ ಪಡಿತರ ಅಡಿಯಲ್ಲಿ ಸರಬರಾಜು ಮಾಡುವ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಸಾಗಾಣಿಕೆ ಮಾಡುತ್ತಿರುವ ವಾಹನ ನಂ.ಕೆಎ 32 ಡಿ 9780 ವಾಹನವನ್ನು ತಡೆದು ನಿಲ್ಲಿಸಿ ಪಂಚರ ಸಮಕ್ಷಮದಲ್ಲಿ ಸದರಿ ವಾಹನವನ್ನು ಪರಿಶೀಲಿಸಿದಾಗ ಸದರಿ ವಾಹನದಲ್ಲಿ ಅಂದಾಜು 50 ಕೆ.ಜಿ ತೂಕವುಳ್ಳ ಸುಮಾರು 30 ಪ್ಲಾಸ್ಟೀಕ ಚೀಲಗಳಲ್ಲಿ ಪಡಿತರ ಅಕ್ಕಿ ಹಾಗೂ ಸರಕಾರದ ಇತರೆ ಯೋಜನೆಯಡಿಯಲ್ಲಿ ಬಿಡುಗಡೆಯಾದ ಅಕ್ಕಿ ಇರುವುದು ಕಂಡು ಬಂದಿರುತ್ತದೆ. ಸದರಿ ವಾಹನದ ಚಾಲಕನಿಗೆ ವಿಚಾರಿಸಲಾಗಿ ಆತನ ಹೆಸರು ಶೇಖ ನಜೀರಅಹ್ಮದ ತಂದೆ ಶೇಖ ಅಬ್ದುಲ ಸತ್ತಾರ ಅಂತಾ ತಿಳಿಸಿದ್ದು ಇರುತ್ತದೆ. ಸದರಿ ವಾಹನದ ಚಾಲಕನಿಗೆ ಸಾಗಾಣಿಕೆ ಮಾಡುತ್ತಿದ್ದ ಪಡಿತರ ಅಕ್ಕಿ ಹಾಗೂ ಅಕ್ಕಿ ಹಾಗೂ ಸರಕಾರದ ಇತರೆ ಯೋಜನೆಯಡಿಯಲ್ಲಿ ಬಿಡುಗಡೆಯಾದ ಅಕ್ಕಿಯ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಯಾವುದೇ ದಾಖಲಾತಿಗಳನ್ನು ಸಲ್ಲಿಸಿರುವುದಿಲ್ಲಾ.  ಹಾಗೂ ಸದರಿ ಅಕ್ಕಿಯ ಮಾಲೀಕ ಶರಣು ಅವರಾದ ಎಂದು ತಿಳಿಸಿರುತ್ತಾನೆ. ಸದರಿ ವಾಹನವನ್ನು ಮತ್ತು ವಾಹನದಲ್ಲಿದ್ದ ಪಡಿತರ ಅಕ್ಕಿ ಹಾಗೂ ಅಕ್ಕಿ ಹಾಗೂ ಸರಕಾರದ ಇತರೆ ಯೋಜನೆಯಡಿಯಲ್ಲಿ ಬಿಡುಗಡೆಯಾದ ಅಕ್ಕಿಯನ್ನು ಪಂಚರ ಸಮಕ್ಷಮದಲ್ಲಿ ಆಹಾರ ಇಲಾಖೆಯ ತಾಬೆಗೆ ಪಡೆಯಲಾಯಿತು. ಇದರ ಬಗ್ಗೆ ಪಂಚನಾಮೆ ಕೂಡಾ ಮಾಡಲಾಗಿರುತ್ತದೆ.   ನಂತರ ಜಪ್ತಿಪಡಿಸಿಕೊಂಡ ವಾಹನ ನಂ.ಕೆಎ32 ಡಿ 9780 ನೇದ್ದು ಹಾಗೂ ಸದರಿ ವಾಹನದಲ್ಲಿದ್ದ ಪಡಿತರ ಅಕ್ಕಿ ಹಾಗೂ ಅಕ್ಕಿ ಹಾಗೂ ಸರಕಾರದ ಇತರೆ ಯೋಜನೆಯಡಿಯಲ್ಲಿ ಬಿಡುಗಡೆಯಾದ ಅಕ್ಕಿಯನ್ನು ಸುರಕ್ಷತಾ ಹಿತದೃಷ್ಟಿಯಿಂದ ಹಾಗೂ ಹಾಳಾಗಿ ಅನುಪಯುಕ್ತವಾಗುವ ಉದ್ದೇಶದಿಂದ ಕಲಬುರಗಿ ಪಡಿತರ ಪ್ರದೇಶದ ಕೆ.ಎಫ.ಸಿ.ಎಸ.ಸಿ ಗೋದಾಮಿನಲ್ಲಿ ಅನಲೋಡ ಮಾಡಲಾಯಿತು. ಸದರಿ ವಾಹನವನ್ನು ತಮ್ಮ ತಾಬೆಗೆ ವಹಿಸಲಾಗಿರುತ್ತದೆ. ದಾಸ್ತಾನಿಕರಿಸಿರುವ ಬಿಲ್ಲುಗಳ ವಿವರ ಈ ಕೆಳಗಿನಂತಿವೆ. ದಾಖಲಾತಿ ಗುರುತು ಎಸ್.ಆರ್ 769 ದಿನಾಂಕ:01.09.2022 ರಲ್ಲಿ 14.50 ಕ್ವಿಂಟಲ್ ಅಕ್ಕಿ ದಾಸ್ತಾನಿಕರಿಸಿದ ಪಡೆದಿರುವ ಬಿಲ್ಲು ಲಗತ್ತಿಸಿದೆ. ದಾಸ್ತಾನುಕರಿಸಿದ ಅಕ್ಕಿಯ ಮಾರುಕಟ್ಟೆಯ ಬೆಲೆ ಅಂದಾಜು ಕಿಮ್ಮತ್ತು ರೂ.36250/- ಆಗಿರುತ್ತದೆ. ಜಪ್ತಿ ಪಡಿಸಿಕೊಂಡ ವಾಹನ ನಂ.ಕೆಎ32 ಡಿ 9780 ಅದರ ಅಂದಾಜು ಕಿಮ್ಮತ್ತು 3,00,000/-ರೂ ಹೀಗೆ ಒಟ್ಟು 3,36,250/-ರೂ ಆಗಿರುತ್ತದೆ.ಈ ಹಿನ್ನಲೆಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಹಾಗೂ ಸರ್ಕಾರದ ಇತರೆ ಯೋಜನೆಗಳಿಗೆ ಬಿಡುಗಡೆಯಾದ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಪತ್ತೆಯಾದ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955 ರ 3 ಮತ್ತು 7 ರ ಅಡಿಯಲ್ಲಿ ಅಕ್ರಮವಾಗಿ ಪಡಿತರ ಧಾನ್ಯಗಳನ್ನು ಸಾಗಾಣಿಕೆ ಮಾಡುತ್ತಿದ್ದ  ಚಾಲಕನಾದ ಶೇಖ ನಜೀರಅಹ್ಮದ ತಂದೆ ಶೇಖ ಅಬ್ದುಲ ಸತ್ತಾರ ಹಾಗೂ ಸದರಿ ವಾಹನ ನಂ. ಕೆಎ32 ಡಿ 9780 ನೇದ್ದರ ಮಾಲೀಕ ಮತ್ತು ಸದರಿ ಪಡಿತರ ಅಕ್ಕಿಯ ಮಾಲೀಕನಾದ ಶರಣು ಅವರಾದ ಈ ಮೂರು ಜನರ ವಿರುದ್ದ ಪ್ರಕರಣ ದಾಖಲಿಸಲು ವಿನಂತಿಸುತ್ತೇನೆ ಅಂತಾ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ..

ಇತ್ತೀಚಿನ ನವೀಕರಣ​ : 06-09-2022 06:23 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080