ಅಭಿಪ್ರಾಯ / ಸಲಹೆಗಳು

ರೋಜಾ ಪೊಲೀಸ್‌ ಠಾಣೆ :- ನಿನ್ನೆ ದಿನಾಂಕ: 30.06.2022 ರಂದು ಬೆಳಿಗ್ಗೆ 11:00 ಗಂಟೆಯಿಂದ 17:30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಇಸ್ಲಾಮಾಬಾದ ಕಾಲೋನಿಯಲ್ಲಿರುವ ಫಿರ್ಯಾದಿದಾರರ ಮನೆ ಕೀಲಿ ಮುರಿದು 40 ಗ್ರಾಂ ಬಂಗಾರ & 20 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ನಗದು ಹಣ 18.000/- ರೂ ಹೀಗೆ ಒಟ್ಟು 2,32,500 ರೂ ಮನೆ ಕಳ್ಳತನ ಮಾಡಿದ ಬಗ್ಗೆ ದೂರು.  

 

 ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ ೧೫-೦೫-೨೦೨೨ ರಂದು ೧೨.೩೦ ಪಿಎಮ್ ಸುಮಾರಿಗೆ ಸದರಿ ಆರೋಪಿತರು ಕುಮಾರಿ ಸಾಖ್ಷಿ ತಂದೆ ಕಾಳು ಚವ್ಹಾಣ ಸಾ: ಕಾಳನೂರ ತಾಂಡಾ ಇವಳಿಗೆ ಆಕಾಶ ತಂದೆ ಸುಭಾಸ ಜಾಧವ ಈತನ ಜೊತೆ ಬಾಲ್ಯ ವಿವಾಹದ ಆದ ಬಗ್ಗೆ ಅಪರಾಧ ಇರುತ್ತದೆ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 01-07-2022  ರಂದು ಸರಕಾರಿ ತರ್ಪೇ ಫಿರ್ಯಾದಿಯಲ್ಲಿ ಪ್ರಭುರಾಜ ಪಿಸಿ ೨೨೫ ಇವರು ಪಿಸಿ ೪೦೨ ರವರು ಠಾಣೆಯಿಂದ ಕರೆ ಬಂದದ್ದರ ಅನ್ವಯವಾಗಿ ಮಹಾಗಾಂವದಿಂದ ಕಲಬುರಗಿ ನಗರದ ಕಡೆಗೆ ಹುಮನಾಬಾದ್ ರಿಂಗ್ ರೋಡ್ ನಲ್ಲಿ ಒಂದು ಅಶೋಕ್ ಲೈಲೆಂಡಿನಲ್ಲಿ ಹಸುಗಳನ್ನು ಸಾಗಿಸುತ್ತಿದ್ದಾರೆ ಎಂದು ತಿಳಿಸಿದ್ದರಿಂದ ವಾಹನ ಸಂಖ್ಯೆ ಕೆಎ ೩೨ ಡಿ ೪೭೮೦  ವಾಹನವನ್ನು ಹಿಡಿದು ವಿಚಾರಿಸಲಾಗಿ ಹಸುಗಳನ್ನು ಸಾಗಿಸಲು ಯಾವುದೇ ಕಾಗದ ಪತ್ರಗಳಿರುವುದಿಲ್ಲ.ಸದರಿಯವರ ವಿರುದ್ದ ದೂರು ದಾಖಲಿಸಿಕೊಂಡ ಬಗ್ಗೆ ವರದಿ

 

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ 01-07-2022 ರಂದು ಮದ್ಯಾಹ್ನ 1-15 ಗಂಟೆ ಸುಮಾರಿಗೆ ಶ್ರೀ ಅಹಮದಸಾ ತಂದೆ ಚಂದಾಸಾ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವನೆಂದರೆ ದಿನಾಂಕ 30-06-2022 ರಂದು ಕೆ.ಕೆ.ಆರ.ಟಿ.ಸಿ ಬಸ್ಸ ನಂಬರ ಕೆಎ-36/ಎಫ್-1124 ನೇದ್ದರ ಮೇಲೆ ನನಗೆ ಕಂಡೆಕ್ಟರ ಕರ್ತವ್ಯಕ್ಕೆ ಅಶೋಕ ಬಿಲ್ಲೆ ನಂಬರ-3455 ರವರಿಗೆ ಡ್ರೈವರ ಕರ್ತವ್ಯಕ್ಕೆ ವಿಜಯಪೂರ-ಹೈದ್ರಾಬಾದ ಟ್ರಿಪ ಕುರಿತು ನೇಮಿಸಿದ್ದರಿಂದ ನಾವಿಬ್ಬರೂ ಡಿಪೊದಿಂದ ವಿಜಯಪೂರ ಬಸ್ಸ ನಿಲ್ದಾಣಕ್ಕೆ ಹೋಗಿ ಬಸ್ಸಿನಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಸಿಂದಗಿ ಜೇವಗರ್ಿ ಮುಖಾಂತರವಾಗಿ ಬಸ್ಸ ಚಾಲಕ ಅಶೋಕ ಇವರು ಬಸ್ಸ ಚಲಾಯಿಸಿಕೊಂಡು ಹೋಗುತ್ತಿದ್ದರು ನಾನು ಕಂಡೆಕ್ಟರ ಕರ್ತವ್ಯದ ಮೇಲೆ ಇದ್ದೆನು. ಕಟ್ಟಿ ಸಂಗಾವಿ ಬ್ರಿಡ್ಜ ದಾಟಿದ ನಂತರ ಒಂದು ಲಾರಿ ಚಾಲಕನು ನಮ್ಮ ಬಸ್ಸಿನ ಮುಂದಿನಿಂದ ತನ್ನ ಲಾರಿಯನ್ನು ಅತಿವೇಗವಾಗಿ ಮತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದನ್ನು ನಾವು ಲಾರಿ ಹಿಂದಿನಿಂದ ಕಲಬುರಗಿ ಕಡೆಗೆ ಬರುವಾಗ ಕಲಬುರಗಿ ಜಿಲ್ಲೆಯ ಸರಡಗಿ ಸಿಮಾಂತರದ ಖಣಿ ಹತ್ತೀರ ರೋಡ ಮೇಲೆ ಒಬ್ಬ ಕಾರ ಚಾಲಕನು ನಮ್ಮ ಬಸ್ಸಿನ ಹಿಂದಿನಿಂದ ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಬಸ್ಸಿಗೆ ಸೈಡ ಹೊಡೆದು ಮುಂದೆ ಹೋದನು ನಮ್ಮ ಬಸ್ಸ ಚಾಲಕ ಅಶೋಕ ಇತನು ಕೂಡಾ ಬಸ್ಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದನ್ನು ಕಾರ ಚಾಲಕನು ಮುಂದುಗಡೆ ಹೋಗುತ್ತಿದ್ದ ಲಾರಿಯ ಹಿಂದುಗಡೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನ ಕಾರನ್ನು ಬಲ ರೋಡಿಗೆ ತಗೆದುಕೊಂಡು ನಿಲ್ಲಿಸಿದಾಗ ಬಸ್ಸ ಚಾಲಕನು ಕೂಡಾ ಅದೇ ಬಸ್ಸಿನ ಹಿಂದುಗಡೆ ಡಿಕ್ಕಿಪಡಿಸಿ ಅಪಘಾತ ಮಾಡಿ ಬಸ್ಸನ್ನು ರೋಡ ಪಕ್ಕಕ್ಕೆ ನಿಲ್ಲಿಸಿದಾಗ ನಾನು ಮತ್ತು ಬಸ್ಸ ಚಾಲಕ ಅಶೋಕ ಹಾಗೂ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಸ್ಸಿನಿಂದ ಇಳಿದು ಲಾರಿ ನಂಬರ ನೋಡಲು ಎನ್.ಎಲ್.-01/ಎಇ-8075 ಇದ್ದಿತ್ತು. ಕಾರ ನಂಬರ ನೋಡಲು ಎಮ್.ಹೆಚ್-20/ಬಿಸಿ-0202 ಇದ್ದಿತ್ತು. ಕಾರ ಚಾಲಕ ಬೇರೆ ವಾಹನದಲ್ಲಿ ಕುಳಿತು ಹೋದನು ಲಾರಿ ಚಾಲಕನು ತನ್ನ ಲಾರಿಯನ್ನು ಅಲ್ಲೇ ನಿಲ್ಲಿಸಿ ಹೋದನು. ಸದರಿ ಘಟನೆ ಜರುಗಿದಾಗ ರಾತ್ರಿ 1-45 ಎ.ಎಮ್ ಸಮಯವಾಗಿತ್ತು. ಸದರಿ ಘಟನೆಯಿಂದ ನನ್ನ ಟೊಂಕಿಗೆ ಗುಪ್ತಪೆಟ್ಟು ಆಗಿತ್ತು. ಬಸ್ಸ ಚಾಲಕನಿಗೆ ಹಾಗೂ ಬಸ್ಸನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳು ಆಗಿರುವದಿಲ್ಲ. ನಾನು ಬೆಳಿಗ್ಗೆ ಕಲಬುರಗಿ ಸಕರ್ಾರಿ ಆಸ್ಪತ್ರೆಗೆ ಹೋಗಿ ಉಪಚಾರ ಮಾಡಿಕೊಂಡು ನಮ್ಮ ಅಧಿಕಾರಿಗಳಿಗೆ ವಿಷಯ ತಿಳಿಸಿ ಪೊಲೀಸ ಠಾಣೆಗೆ ಬಂದಿರುತ್ತೆನೆ. ಲಾರಿ ಚಾಲಕ ಹಾಗೂ ಕಾರ ಚಾಲಕನ ಹೆಸರು ಗೋತ್ತಾಗಿರುವದಿಲ್ಲ ಆತನನ್ನು ನೊಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೇನೆ. ಕಾರಣ ಕಾರ ನಂಬರ ಎಮ್.ಹೆಚ್-20/ಬಿಸಿ-0202, ನೇದ್ದರ ಚಾಲಕ ಲಾರಿ ನಂಬರ ಎನ್.ಎಲ್-01/ಎ.ಇ-8075 ನೇದ್ದರ ಚಾಲಕ ಮೇಲೆ ಹಾಗೂ ನಮ್ಮ ಕೆ.ಕೆ.ಆರ.ಟಿ.ಸಿ ಬಸ್ಸ ನಂಬರ ಕೆಎ-36/ಎಫ್-1124 ನೇದ್ದರ ಚಾಲಕ ಅಶೋಕ ಇತನ ತಪ್ಪಿನಿಂದ ಸದರ ಘಟನೆ ಜರುಗಿದ್ದು ಮೂರು ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

ಇತ್ತೀಚಿನ ನವೀಕರಣ​ : 16-07-2022 06:16 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080