ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್ ಠಾಣೆ :-  ದಿನಾಂಕ 01-06-2022 ರಂದು ೧೨.೧೫ ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತಮ್ಮದೊಂದು ಗಣಕೀಕೃತ ಮಾಡಿದ ದೂರು ಸಲ್ಲಿಸಿದ ಸಾರಾಂಶವೇನೆಂದರೆ, ನಾನು ಪ್ರವೀಣ @ ಪಾಯಲ್ ತಂದೆ ಹಿರಾಲಾಲ ವ:೨೮ರವರ್ಷ ಉ:ಕೂಲಿಕೆಲಸ ಜ್ಯಾ:ಕಬ್ಬಲಿಗೇರ ಸಾ:ಹುಮನಾಬಾದ ಹಾ.ವ:ಆಶ್ರಯ ಕಾಲೋನಿ ಫಿಲ್ಟರ್ ಬೆಡ್ ಕಲಬುರಗಿ ಆಗಿದ್ದು, ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದೇನೆ. ನನ್ನ ವೈಯಕ್ತಿಕ ಕೆಲಸ ನಿಮಿತ್ಯ ಓಡಾಡಲು ೨೦೧೫ನೇ ಸಾಲಿನಲ್ಲಿ ನನ್ನ ಹೆಸರಿನಲ್ಲಿ ಹೊಂಡಾ ಡಿಯೋ KA05JR6112 ನೇದ್ದು ಖರೀದಿಸಿರುತ್ತೇನೆ. ಹೀಗಿದ್ದು ದಿನಾಂಕ: ೩೧/೦೫/೨೦೨೨ ರಂದು ಹುಮನಬಾದ ರಿಂಗ್ ರೋಡನ ಆಳಂದ ಚೆಕ್ಕ ಪೋಸ್ಟ್ ಕಡೆಗೆ ಹೋಗುವ ಮುಖ್ಯ ರಸ್ತೆ ಬದಿಯಲ್ಲಿರುವ ಚೈನೀಸ ಹೊಟೇಲ್ ಪಕ್ಕದಲ್ಲಿ ರಾತ್ರಿ ೦೯:೦೦ ಗಂಟೆಗೆ ನನ್ನ ಮೋಟಾರ ಸೈಕಲ್ ನಿಲ್ಲಿಸಿ ಚೈನೀಸ ಹೊಟೇಲ್ ನಲ್ಲಿ ಊಟ ಮಾಡಲಿಕ್ಕೆ ಹೋಗಿದ್ದು ಊಟ ಮಾಡಿ ಮತ್ತು ರೋಡಿನ ಆಚೆ ಇರುವ ಅಂಗಡಿಗೆ ಹೋಗಿ ಮರಳಿ ೦೯.೩೦ ಗಂಟೆಗೆ ನಾನು ನನ್ನ ಮೋಟಾರ ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ನನ್ನ ಹೊಂಡಾ ಡಿಯೋ KA05JR6112  ಕಾಣಿಸಲಿಲ್ಲ. ನಂತರ ಈ ವಿಷಯವನ್ನು ನನ್ನ ಗೆಳತಿಯಾದ ಯಲ್ಲಮ್ಮ ಇವರಿಗೆ ಫೋನ ಮಾಡಿ ತಿಳಿಸಿದರಿಂದ ಅವಳು ಸ್ಥಳಕ್ಕೆ ಬಂದ ನಂತರ  ಇಬ್ಬರೂ ಕೂಡಿಕೊಂಡು ಮೋಟಾರ ಸೈಕಲ್ ನಿಲ್ಲಿಸಿದ ಸ್ಥಳದ ಸುತ್ತಮುತ್ತಲು, ಕೆಕೆ ನಗರ , ಫಿಲ್ಟರ್ ಬೆಡ್, ಸಂಜು ನಗರ,ಆಳಂದ ಚಕ್ಕಪೋಸ್ಟ್, ಶಹಾಬಜಾರ ಮತ್ತು ಗಂಜ ಏರಿಯಾ ಗಳಲ್ಲಿ ಹುಡುಕಾಡಿದರೂ ನನ್ನ ಮೋಟಾರ ಸೈಕಲ ಸಿಕ್ಕಿರುವುದಿಲ್ಲ. ನಿನ್ನೆ ದಿನಾಂಕ:೩೧/೦೫/೨೦೨೨ ರಂದು ರಾತ್ರಿ ೧೨.೦೦ ಗಂಟೆಯವರೆಗೆ ನನ್ನ  ಮೋಟಾರ ಸೈಕಲ್ ಹುಡಕಾಡಿ ರಾತ್ರಿಯಾಗಿರುವುದರಿಂದ ಇಂದು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ.ಕಳ್ಳತನವಾದ ನನ್ನ ಮೋಟಾರ ಸೈಕಲ ವಿವರ ಈ ಕೆಳಗಿನಂತೆ ಇರುತ್ತದೆ.೦೧.ಮೋಟಾರಸೈಕಲಮಾದರಿ&ನಂಬರ: HONDA DIO SCV110FF,KA05JR6112. ೦೨. ಇಂಜನ್ ನಂಬರ: JF39E7113540503. ಚೆಸ್ಸಿನಂಬರ ME4JF397LF7039844 ೦೪. ಮಾಡಲ್:   11/201505 .ಬಣ್ಣ:   BLACK ೦೬.ಬೆಲೆ:   ೨೧,೫೪೯/- ರೂ.  ಕಾರಣ ಮಾನ್ಯರವರು ಹೊಂಡಾ ಡಿಯೋ KA05JR6112 ನೇದ್ದು ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡ ಹೋದ ಅಪರಿಚಿತ ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನುಕ್ರಮ ಜರುಗಿಸಿ ನನ್ನ ಮೋಟಾರ ಸೈಕಲ್ ದೊರಕಿಸಿ ಕೊಡಬೇಕೆಂದು ತಮ್ಮಲ್ಲಿ ವಿನಂತಿ ಅಂತ ಕೊಟ್ಟ ಫಿರ್ಯಾದಿ ಅರ್ಜಿ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಸಂಚಾರಿ ಪೊಲೀಸ್ ಠಾಣೆ-೦೧ :- ದಿನಾಂಕ 01-06-2022 ರಂದು ಸಾಯಂಕಾಲ ೭-೧೫ ಗಂಟೆಗೆ ಆಳಂದ ತಾಲ್ಲೂಕಿನ ರುದ್ರವಾಡಿ ಗ್ರಾಮದಲ್ಲಿ ಹಾವನೂರ ಗ್ರಾಮದ ಶಿವಶಣಪ್ಪಾ ಇವರ ಮಗಳ ಮದುವೆ ಕಾರ್ಯಕ್ರಮಕ್ಕೆ ಖಾಸಗಿ ಎಮ್.ಆರ. ಬಸ್ಸ ನಂಬರ ಕೆಎ-೩೨/ಎ-೯೯೧೦ ನೇದ್ದರಲ್ಲಿ ಸಂತೋಷ, ಶಿವಪ್ಪಾ, ಸಿದ್ದಮ್ಮಾ, ದೇವಕಿ, ಸಂಗಮ್ಮಾ, ಜಗದೇವಿ, ಬಸವರಾಜ, ರೇಖಾ, ಗೀರೆಮ್ಮಾ, ವೈಶಾಲಿ, ಗುಂಡಪ್ಪಾ, ಮಹಾದೇವಿ, ಶಿವಾ, ರಂಜೀತಾ, ಲಕ್ಷ್ಮಿಬಾಯಿ, ಕಸ್ತೂರಬಾಯಿ, ರೂಪಾ, ರೊಹೀತ ಹಾಗೂ ಇತರರು ಕುಳಿತು ಹೋಗಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸ ರುದ್ರವಾಡಿ ಗ್ರಾಮದಿಂದ ಹಾವನೂರ ಗ್ರಾಮಕ್ಕೆ ಕಲಬುರಗಿ ಮುಖಾಂತರವಾಗಿ ಹೊಗುವಾಗ ಬಸ್ಸ ಚಾಲಕನು ಬಸ್ಸನ್ನು ಅತಿವೆಗವಾಗಿ ಮತ್ತು ಅಲಕ್ಷತನದಿಂದ ರೋಡ ಎಡ ಬಲ ತಿರುಗಿಸುತ್ತಾ ಹೋಗಿ ಕಣ್ಣಿ ಸಿಮಾಂತರದಲ್ಲಿ ಬರುವ ಬಸವನ ತಾಂಡಾದ ಹತ್ತೀರ ಬರುವ ಸೇವಾಲಾಲ ಗುಡಿ ಹತ್ತೀರ ರೋಡ ಮೇಲೆ ಒಮ್ಮಲೆ ಬಸ್ಸನ್ನು ರೋಡ ಎಡಕ್ಕೆ ತಿರುಗಿಸಿ ರೋಡ ತೆಗ್ಗಿನಲ್ಲಿ ಬಸ್ಸನ್ನು ಪಲ್ಟಿ ಮಾಡಿ ಅಪಘಾತ ಮಾಡಿ ಶಿವಪ್ಪಾ ಹಾಗೂ ಸಿದ್ದಮ್ಮಾ ರವರಿಗೆ ಭಾರಿಗಾಯ ಹಾಗೂ ಮೇಲೆ ತೊರಿಸಿದವರಿಗೂ ಗಾಯಗೊಳಿಸಿ ತನ್ನ ಬಸ್ಸ ಅಲ್ಲೆ ಬಿಟ್ಟು ಓಡಿ ಹೋಗಿದ್ದು ಶಿವಪ್ಪಾ ಇತನು ಭಾರಿಗಾಯದಿಂದ ಅಪಘಾತ ಸ್ಥಳದಲ್ಲಿ ಮರತಪಟ್ಟಿದ್ದು ಸಿದ್ದಮ್ಮಾ ಇವಳಿಗೆ ಉಪಚಾರ ಕುರಿತು ಆಸ್ಪತ್ರೆಗೆ ತರುವಾಗ ದಾರಿ ಮದ್ಯ ಮೃತಪಟ್ಟಿದ್ದು ಇರುತ್ತದೆ. 

 

ಇತ್ತೀಚಿನ ನವೀಕರಣ​ : 17-06-2022 11:28 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080