ಅಭಿಪ್ರಾಯ / ಸಲಹೆಗಳು

 ರಾಘವೇಂದ್ರ ನಗರ  ಪೊಲೀಸ್ ಠಾಣೆ :-  ದಿನಾಂಕಃ 01-04-2022 ರಂದು ೦೧.೦೦ ಎಎಮ್ಕ್ಕೆ ಶ್ರೀ ಝಾಕೀರ ಹುಸೇನ ತಂದೆ ಮಹ್ಮದ ಹುಸೇನ ಫೂಲವಾಲೆ ವಯಃ ೪೫ ವರ್ಷ ಜಾಃ ಮುಸ್ಲಿಂ ಉಃ ಹೊವಿನ ವ್ಯಾಪಾರ ಸಾಃಸಮತಾ ಕಾಲೋನಿ ಕಲಬುರಗಿ ರವರು ಕನ್ನಡದಲ್ಲಿ ಬರೆದು ದೂರು ಹಾಜರಪಡಿಸಿದರ ಸಾರಾಂಶವೆನೆಂದರೆ ನನಗೆ ಒಬ್ಬ ಗಂಡು ಮಗ ಹಾಗೂ ಮೂರು ಜನ ಹೆಣ್ಣು ಮಕ್ಕಳಿದ್ದು ನನ್ನ ಹಿರಿಯ ಮಗನಾದ ಸೋಹೆಲ್ ಮತ್ತು ನಾನು ಕೂಡಿಕೊಂಡು ಸುಪರ ಮಾರ್ಕೆಟದಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ಇರುತ್ತೇವೆ. ಪ್ರತಿದಿನ ನಾವು ಹೂವಿನ ವ್ಯಾಪಾರ ಮಾಡಿಕೊಂಡು ರಾತ್ರಿ ೮-೦೦ ಗಂಟೆ ಸುಮಾರಿಗೆ ಮನೆಗೆ ಬರುತ್ತೇವೆ.  ಹೀಗೆ ಇರುವಾಗ ದಿನಾಂಕ:೩೧.೦೩.೨೦೨೨ ರಂದು ಪ್ರತಿದಿನದಂತೆ ರಾತ್ರಿ ೮-೦೦ ಗಂಟೆಗೆ ನಮ್ಮ ಹೂವಿನ ಅಂಗಡಿ ಬಂದ ಮಾಡಿಕೊಂಡು ಮನೆಗೆ ಬಂದಿದ್ದು ಇರುತ್ತದೆ. ನಂತರ ನನ್ನ ಮಗ ಸೋಹೆಲ್ ಈತನು ಹೊರಗಡೆ ಹೋಗಿ ಬರುತ್ತೇನೆ ಅಂತಾ ಮನೆಯಿಂದ ಹೇಳಿ ಹೋದನು. ನಂತರ ರಾತ್ರಿ ೧೧-೦೦ ಗಂಟೆ ಸುಮಾರಿಗೆ ಶ್ರೀ ಶೇಖ ರಿಜ್ಬಾನ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ ಮೌಲಾಲಿ ಕಟ್ಟಾ ಹತ್ತಿರ ಇರುವ ಮೂಸಾ ಹೋಟೆಲ್ ಒಳಗೆ ಮುಝಮಿಲ್ಲ್ ಮತ್ತು ಜುನೆದ ಹಾಗೂ ಸಂಗಡ ೩-೪ ಜನರು ಕೂಡಿಕೊಂಡು ನಿಮ್ಮ ಮಗನಾದ ಸೋಹೆಲ್ ಈತನಿಗೆ ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳಿಂದ ಹೊಡೆದು ಭಾರಿ ರಕ್ತಗಾಯಪಡಿಸಿರುತ್ತಾರೆ. ಆದ್ದರಿಂದ ಸೋಹೆಲ್ ಈತನಿಗೆ ಯುನೈಟೇಡ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಅಂತಾ ತಿಳಿಸಿದ ಮೇರೆಗೆ ನಾವೂ ಸಹ ಗಾಭರಿಗೊಂಡು ನಾನು ಮತ್ತು ನನ್ನ ಜೊತೆಯಲ್ಲಿ ಅಣ್ಣ ತಮ್ಮಂದಿರು ಕೂಡಿಕೊಂಡು ಯುನೈಟೇಡ್ ಆಸ್ಪತ್ರೆಗೆ ಹೋಗುವಸಷ್ಟರಲ್ಲಿಯೇ ರಸ್ತೆಯ ಮಧ್ಯೆ ನನ್ನ ಮಗ ಸೋಹೆಲ್ ಈತನು ಮೃತಪಟ್ಟಿರುತ್ತಾನೆ. ನನ್ನ ಮಗನ ಜೊತೆಯಲ್ಲಿರುವ ಮಹಿಬೂಬ ಅವರಿಗೆ ವಿಚಾರಿಸಿದಾಗ ಆತನು ಹೇಳಿದ್ದೇನೆಂದರೆ ನಾನು ಮತ್ತು ಸೋಹೇಲ ಇಬ್ಬರೂ ಕೂಡಿಕೊಂಡು ಮೌಲಾಲಿ ಕಟ್ಟಾ ಹತ್ತಿರದ ಮೂಸಾ ಹೋಟೆಲನಲ್ಲಿ ಕುಳಿತುಕೊಂಡು ತಹಾರಿ ತಿನ್ನುತ್ತಿರುವಾಗ ಮುಝಮಿಲ್ಲ್ ಮತ್ತು ಜುನೆದ ಹಾಗೂ ಸಂಗಡ ೩-೪ ಜನರು ಕೂಡಿಕೊಂಡು ಯಾವುದೋ ಹಳೆಯ ದ್ವೇಷದಿಂದ ಕೈಯಲ್ಲಿ ಹರಿತವಾದ ಆಯುಧಗಳನ್ನು ಹಿಡಿದುಕೊಂಡು ಬಂದು ಸೋಹೆಲ್ ಈತನ ತಲೆಗೆ, ಬೆನ್ನಿಗೆ, ಎಧೆಗೆ, ಪಕ್ಕೆಲುಬು ಹಾಗೂ ಇನ್ನಿತರ ಕಡೆಗೆ ಮಾರಕಾಸ್ತ್ರಗಳಿಂದ ಹೊಡೆದು ಭಾರಿ ರಕ್ತಗಾಯಪಡಿಸಿ ಕೊಲೆ ಮಾಡಿರುತ್ತಾರೆ ಅಂತಾ ತಿಳಿಸಿರುತ್ತಾರೆ.       ದಿನಾಂಕ:೩೧.೦೩.೨೦೨೨ ರಂದು ರಾತ್ರಿ ೧೧-೦೦ ಗಂಟೆ ಸುಮಾರಿಗೆ ಮೌಲಾಲಿ ಕಟ್ಟಾ ಹತ್ತಿರದ ಮೂಸಾ ಹೋಟೆಲನೊಳಗೆ ನನ್ನ ಮಗನಾದ ಸೋಹೇಲ ಈತನಿಗೆ ಮುಝಮಿಲ್ಲ್ ಮತ್ತು ಜುನೆದ ಹಾಗೂ ಸಂಗಡ ೩-೪ ಜನರು ಕೂಡಿಕೊಂಡು ಹಳೆ ದ್ವೇಷದಿಂದ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಓಡಿ ಹೋದವರ ವಿರುಧ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ. ಅಂತ ಇತ್ಯಾದಿಯಾಗಿ ದೂರು  ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಚೌಕ ಪೊಲೀಸ ಠಾಣೆ:-   ದಿನಾಂಕ:01-04-2022 ರಂದು ೫.೦೦ ಗಂಟೆಗೆ ಶ್ರೀ ಹುಸೇನಬಾಷಾ ಎ.ಎಸ್.ಐ ಚೌಕ ಪೊಲೀಸ ಠಾಣೆ ರವರು ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ಒಂದು ಫಿರ್ಯಾದಿ ವರದಿ ಮತ್ತು ಜಪ್ತಿ ಪಂಚನಾಮೆ ಹಾಗೂ ಒಂದು ಮೋಟರ ಸೈಕಲ ಆರೋಪಿತನೊಂದಿಗೆ ಠಾಣೆಗೆ ಹಾಜರಾಗಿ ವರದಿ ಹಾಜರ ಪಡಿಸಿದ್ದು ಸದರಿ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ ನಾನು ಹುಸೇನಬಾಷಾ ಎ.ಎಸ್.ಐ ಚೌಕ ಪೊಲೀಸ ಠಾಣೆ ಕಲಬುರಗಿ ನಗರ ಸರ್ಕಾರಿ ತರ್ಪೇಯಾಗಿ ಫಿರ್ಯಾದಿ ವರದಿ ಸಲ್ಲಿಸುವುದೇನೆಂದರೆ ಠಾಣಾ ಸರಹದ್ದಿನಲ್ಲಿ ಸ್ವತ್ತಿನ ಅಪರಾಧಗಳು ಘಟಿಸುತ್ತಿರುವುದರಿಂದ ಅದನ್ನು ತಡೆಯುವ ಕುರಿತು ಮಾನ್ಯ ಪಿ.ಐ ಸಾಹೇಬರು ನನಗೆ ಅಪರಾಧ ವಿಭಾಗದ ಸಿಬ್ಬಂದಿಯವರನ್ನು ಕರೆದುಕೊಂಡು ಠಾಣಾ ಸರಹದ್ದಿನಲ್ಲಿ ವಿಶೇಷ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುವಂತೆ ನನಗೆ ಆದೇಶದಂತೆ ಮಾಡಿದ್ದರಿಂದ ನಾನು ಪಿ.ಐ ಸಾಹೇಬರ ಆದೇಶದಂತೆ ಇಂದು ದಿನಾಂಕ:೦೧.೦೪.೨೦೨೨ ರಂದು ಮಧ್ಯಾಹ್ನ ೨.೦೦ ಪಿಎಂದಿಂದ ಠಾಣಾ ಸರಹದ್ದಿನಲ್ಲಿ ನಾನು ಜೊತೆಯಲ್ಲಿ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯಾದ ನಾಗೇಂದ್ರ ಪಿ.ಸಿ೭೯ ರವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಾ ಮಧ್ಯಾಹ್ನ ೩.೦೦ ಗಂಟೆಗೆ ಶಹಾಬಜಾರ ಆಶ್ರಯ ಕಾಲೋನಿ ಹತ್ತಿರ ಬಂದಾಗ ಅಲ್ಲಿ ಒಬ್ಬ ವ್ಯಕ್ತಿ ಒಂದು ಹಿರೋ ಹೊಂಡಾ ಸಿಡಿ ಡೌನ ಕಪ್ಪು ಬಣ್ಣದ ಮೋಟರ ಸೈಕಲ್ ಮೇಲೆ ಹೋಗುವಾಗ ಸದರಿ ಮೋಟಾರ ಸೈಕಲ್ನ ನಂಬರ ಪ್ಲೇಟ್ ಇಲ್ಲದನ್ನು ಕಂಡು ನಮಗೆ ಅವನ ಮೇಲೆ ಸಂಶಯ ಬಂದಿದ್ದರಿಂದ ಸದರಿ ಮೋಟರ ಸೈಕಲ ಸವಾರನಿಗೆ ಹಿಡಿದು ನಿಲ್ಲಿಸಿ ಸದರಿ ವಾಹನದ ದಾಖಲಾತಿಗಳನ್ನು ಆತನಿಗೆ ಕೇಳಿದಾಗ ಅವನು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇಲ್ಲ ಅಂತ ಹೇಳಿದನು. ಇದು ನಮ್ಮ ಸಹೋದರನ ಮೋಟರ ಸೈಕಲ್ ಇರುತ್ತದೆ ಅಂತ ಹಾರೈಕೆ ಉತ್ತರ ನೀಡಿದನು. ನಂತರ ನಾವು ಆತನ ಮೇಲೆ ಸಂಶಯ ಬಂದಿದ್ದರಿಂದ ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಆತನು ತನ್ನ ಹೆಸರು ಯುನೂಸ ತಂದೆ ಖಾಸೀಮಸಾಬ ಮುಲ್ಲಾವಾಲೆ ವ:೩೨ವರ್ಷ ಉ:ಗೌಂಡಿ ಕೆಲಸ ಜಾ:ಮುಸ್ಲಿಂ ಸಾ:ಮಡಕಿ ಗ್ರಾಮ ತಾ:ಕಮಲಾಪೂರ ಜಿ:ಕಲಬುರಗಿ ಹಾ.ವ:ದರ್ಬಾರ ಹೋಟೆಲ್ ಹಿಂದುಗಡೆ ಅಣ್ಣಾ ಗ್ಯಾರೇಜ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ನಂತರ ಆತನ ವಶದಲ್ಲಿದ ಹಿರೋ ಹೊಂಡಾ ಸಿಡಿ ಡೌನ ಕಪ್ಪು ಬಣ್ಣದ ಮೋಟರ ಸೈಕಲದ ಇಂಜಿನ್ ಮತ್ತು ಚಸ್ಸಿ ನಂಬರ ಪರಿಶೀಲನೆ ಮಾಡಿ ನೋಡಲಾಗಿ ಅದರ ಚಸ್ಸಿ ನಂ. 04F27F37548 ಇಂಜನ್ ನಂ. 04F27E36791 ಅ.ಕಿ.೨೫೦೦೦/-ರೂ ಇರುತ್ತದೆ. ಸದರಿಯವನು ಎಲ್ಲಿಯಾದರದೀ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಬಂದಿರಬಹುದೆಂದು ಮನಗಂಡು ಸದರಿ ಮೋಟರ ಸೈಕಲನ್ನು ಇಬ್ಬರು ಪಂಚರಾದ ೧) ಶ್ರೀ ಇಲಿಯಾಸ ತಂದೆ ಅಬ್ದುಲ ಸತ್ತಾರ ವ:೪೩ ವರ್ಷ ಉ:ಕಾರ್ಪೇಂಟರ ಜಾ::ಮುಸ್ಲಿಂ ಸಾ:ರಂಗೀನ ಮಜೀದ ಮೋಮಿನಪೂರ ಕಲಬುರಗಿ ೨) ಶ್ರೀ ಶೇಖ ಅಜರಹುಸೇನ ತಂದೆ ಅಬ್ದುಲ ಅಲೀಮ ಇನಾಮದಾರ ವ:೩೫ ವರ್ಷ ಉ:ಎಲೆಕ್ಟ್ರೀಶಿಯನ ಸಾ:ಮುಸ್ಲಿಂ ಚೌಕ ಪಲ್ಲಾ ಗಲ್ಲಿ ಕಲಬರುಗಿ ರವರಿಗೆ ಸಿಬ್ಬಂದಿರವರ ಸಹಾಯದಿಂದ ಸ್ಥಳಕ್ಕೆ ಕರೆಯಿಸಿ ಸದರಿ ಮೋಟರ ಸೈಕಲ್ನ್ನು ಮಧ್ಯಾಹ್ನ ೩.೩೦ ಪಿಎಂದಿಂದ ೪.೩೦ ಪಿಎಂದವರೆಗೆ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಮೂಲಕ ಮೋಟರ ಸೈಕಲನ್ನು ಜಪ್ತಿಪಡಿಸಿಕೊಂಡು ಸದರಿ ಮೋಟರ ಸೈಕಲನ್ನು ಮತ್ತು ಆರೋಪಿತನಿಗೆ ಸಾಯಂಕಾಲ ೫.೦೦ ಗಂಟೆಗೆ ಠಾಣೆಗೆ ತಂದು ಮುಂದಿನ ಕಾನೂನು ಕ್ರಮಕ್ಕಾಗಿ ತಮ್ಮ ಮುಂದೆ ಹಾಜರ ಪಡಿಸಿ ವರದಿ ನೀಡಿರುತ್ತೇನೆ  ಅಂತಾ ಕೊಟ್ಟ ಫರ‍್ಯಾದಿ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಇತ್ತೀಚಿನ ನವೀಕರಣ​ : 08-04-2022 02:02 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080