ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ ಠಾಣೆ :-  ದಿನಾಂಕ 01-03-2022 ರಂದು ೧೨.೪೫ ಪಿ.ಎಮ ಕ್ಕೆ ಫರ‍್ಯಾಧಿದಾರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದುಕೊಟ್ಟ ದೂರನ್ನು ಹಾಜರು ಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ನಾನು ಶ್ರೀಮತಿ. ಅನ್ನಪರ‍್ಣ ಗಂಡ ಮನೋಹರ ರೆಡ್ಡಿ @ ಆಲಗೋಡ ಅಂತಾ ನಾವು ಸುಮಾರು ೬ ತಿಂಗಳಿಂದ  ಈ ಮನೆಯಲ್ಲಿ ಇದ್ದು ನಾನು ಎಸ.ಆರ ಎನ್ ಮೆಹತಾ ಸ್ಕೂಲ ದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ.    ದಿನಾಂಕ  25-02-2022  ರಂದು ಶುಕ್ರವಾರ ೫ ಪಿ.ಎಮ ಕ್ಕೆ ಮನ್ನಾಖೇಳಿ ತಾಲೂಕಿನ ವಚಕನಳ್ಳಿಗೆ ನಮ್ಮ ಯಜಮಾನರು ನಿಧನ ಹೊಂದಿದ್ದರಿಂದ ) ಕಾರಣ ಅವರ ದಿನ ಕಾರ್ಯಕ್ಕೆ  ನಾವೆಲ್ಲರೂ ಮನೆ ಬೀಗ ಹಾಕಿ ಹೋಗಿದ್ದು ಇರುತ್ತದೆ. ಇಂದು ದಿನಾಂಕ ೦೧/೦೩/೨೦೨೨ ರಂದು ಬೆಳಗಿನ ಜಾವ ೪.೦೦ ಗಂಟೆ ಶ್ರೀ ಶಿವಯೋಗಿ ಬಿ ಮಠಪತಿ ಇವರು ನಮ್ಮ ಮನೆಯ ಪಕ್ಕದಲ್ಲಿದ್ದು ಇವರು ನಮಗೆ ದೂರವಾಣಿ ಮುಖಾಂತರ ನಿಮ್ಮ ಮನೆ ಕಳ್ಳತನ ಆಗಿರುತ್ತದೆ . ಅಂತಾ ಹೇಳಿದ ಮೇಲೆ ನಾವು ಸುಮಾರು ೬-೩೦ ಎ.ಎಮ ಗಂಟೆಗೆ ಬಂದು ನೋಡಿದಾಗ ಕಳ್ಳತನ ಆಗಿದ್ದು ನಿಜ ಇರುತ್ತದೆ. ನಾನು ನನ್ನ ಮನೆಯ ಅಲಮಾರಿಯನ್ನು ನೋಡಲಾಗಿ ಅದರಲ್ಲಿ ೨.೫೦ ಲಕ್ಷ ರೂ ಹಾಗೂ ಅಂದಾಜು ೬೦ ಗ್ರಾಮ ಬಂಗಾರದ ೧೫ ಗ್ರಾಮ ಬಂಗಾರದ ೨ ಚೈನ್ ಗಳು , ಹಾಗೂ ೧೦ ಗ್ರಾಮ ೩ ಮಕ್ಕಳ ಚೈನಗಳು , ಬೆಳ್ಳಿಯ ಎರಡು ಸಮೇ ಗಳು, ಅಕಿ. ೫೦೦೦/- ರೂ ಆಗಿದ್ದು ಅಲ್ಲದೇ ಮನೆಯಲ್ಲಿರುವ ಸಾಮಾನುಗಳು ಚೆಲ್ಲಾಪಿಲ್ಲಿ ಮಾಡಿದ್ದು ಯಾರೋ ಕಳ್ಳರು ನಮ್ಮ ಮನೆಯಲ್ಲಿ ಯಾರು ಇಲ್ಲದೇ ಇದ್ದಾಗ ಮನೆಯ ಬಾಗಿಲು ಒಡೆದು ನಗದು ೨,೫೦ ಲಕ್ಷ ಹಣ ಹಾಗೂ ೬೦ ಗ್ರಾಮ ಬಂಗಾರ (ಅಂದಾಜ ೩ ಲಕ್ಷ ) ಮತ್ತು ಲ್ಯಾಪಟಾಪ್ ಡೆಲ್ ಅಕಿ ೫೦೦೦೦/- , ಬೆಳ್ಳಿ ಸಾಮಾನುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಲಿಖಿತ ದೂರು ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 03-03-2022 03:01 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080