ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 01/01/2023 ರಂದು 00:30 ಗಂಟೆ ಸುಮಾರಿಗೆ ಕರೆದುಕೊಂಡು ಹೋದಾಗ ಅಲ್ಲಿ ಆಶಾರಾಣಿ ಇವರು ಅಲ್ಲಿದ್ದ ವ್ಯಕ್ತಿಯನ್ನು ತೋರಿಸಿ ಇವನೆ ನಮ್ಮ ಏರಿಯಾದ ಮಲ್ಲಿಕಾರ್ಜುನ ಅಂತಾ ಇದ್ದು ಇವನೆ ನನಗೆ ಮತ್ತು ನನ್ನ ಗಂಡನಿಗೆ ಚಾಕು ತೋರಿಸಿ ಹೆದರಿಸುತ್ತಿದ್ದಾನೆ ಅಂತಾ ಹೇಳಿದಾಗ ಆಗ ನಾವು ಅವನಿಗೆ ಹತ್ತಿರದ ಪೊಲೀಸ ಠಾಣೆಗೆ ನಡೆಯಿರಿ ಅಂತಾ ಅಂದಾಗ ಆ ಮಲ್ಲಿಕಾರ್ಜುನ ಅನ್ನುವವನು ಚೀರಾಡುತ್ತಾ ಏ ರಂಡಿ ಮಕ್ಕಳೆ ಪೊಲೀಸರೆ ನಮ್ಮ ಏರಿಯಾಕ್ಕೆ ಬಂದು ನಮಗೆ ಪೊಲೀಸ ಠಾಣೆಗೆ ನಡೆಯಿರಿ ಅಂತಾ ಅನ್ನುತ್ತಿರಿ ಅಂದವರೆ ಮಲ್ಲಿಕಾರ್ಜುನ ಅನ್ನುವವನು ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿ ನಮಗೆ ತಡೆದು ನಿಲ್ಲಿಸಿ, ರಾಜಕುಮಾರ ಈತನಿಗೆ ಮಲ್ಲಿಕಾರ್ಜುನ ಈತನು ಕೈಯಿಂದ ಮೈ ಮೇಲೆ ಹೊಡೆದನು. ಮತ್ತು ಅರವಿಂದ ಅನ್ನುವವನು ರಾಜಕುಮಾರ ಈತನ ಸಮವಸ್ತ್ರದ ಕಾಲರ್ ಹಿಡಿದು ಎಳೆದಾಡುತ್ತಿದ್ದಾಗ ಕರ್ತವ್ಯಕ್ಕೆ ಅಡೆ ತಡೆಯನ್ನುಂಟು ಮಾಡಿದ  ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ಸಲ್ಲಿಸಿದ ವರದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 31/12/2022 ರಂದು ರಾತ್ರಿ 11:05 ಗಂಟೆಗೆ ಸಣ್ಣೂರ ಗ್ರಾಮದ ಸೊಮಸೇಖರ ತಂದೆ ಶಾತಪ್ಪಾ ತಳಕೇರಿ ಇವರು ಫೋನ ಮಾಡಿ ತಿಳಿಸಿದ್ದೇನಂದರೆ, ಸೇಡಂ ರೋಡಿಗೆ ಇರುವ ಸಣ್ಣೂರ ಗ್ರಾಮದಲ್ಲಿ ಕಟ್ಟಿರುವ ಭೀಮಾ ಕೋರೆಗಾಂವ್ ವಿಜಯೋತ್ಸವ-2023 ನೇದ್ದರ ಕರ್ನಾಟಕ ಭೀಮ ಸೇನೆ (ರಿ) ಪ್ಲಾಕ್ಸದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಇವರ ಭಾವಚಿತ್ರ ಪ್ಲಾಕ್ಸ್ಅನ್ನು ಆರೋಪಿತರು ದಿನಾಂಕ: 31/12/2022 ರಂದು ರಾತ್ರಿ 11:00 ಗಂಟೆಗೆ ಹರಿದು ಅವಮಾನಮಾಡಿ ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 


ಚೌಕ ಪೊಲೀಸ್‌ ಠಾಣೆ :- ದಿನಾಂಕ: 08/05/2022 ರಂದು ನಮ್ಮ ಮನೆಯ ಎರಿಯಾದ & ನನ್ನ ಪರಿಚಯವರಾದ ರಘು @ ರಘುವಿರ ತಂದೆ ಭವಾನಿ ಕಲಕೇರಿ ಇತನಿಗೆ ಅಮರಸಿಂಗ್ ತಿವಾರಿ, ವಿಶಾಲ್, ಗಣೇಶ @ ಗಣಪತಿ, ಹಣಮಂತ, ಆರ್.ಜೆ.ಕಿರಣ & ಸುನೀಲರವರು ಮಾರಕಾಸ್ತ್ರಗಳಿಂದ ಹೋಡೆದು ಕೊಲೆ ಮಾಡಿದ್ದು ಇರುತ್ತದೆ. ಸದರಿ ಘಟನೆಯನ್ನು ನಾನು  ಕಣ್ಣಾರೆ ನೋಡಿದ್ದು, ಆ ಪ್ರಕರಣದ ಪ್ರತ್ಯಕ್ಷ ಸಾಕ್ಷಿದಾರನಾಗಿರುತ್ತೆನೆ. ಆ ಕೊಲೆ ಪ್ರಕರಣವನ್ನು ಚೌಕ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 64/2022 ಎಸ್ಪಿಎಲ್ ಕೇಸ್ ನಂ :66/2022 ಇದ್ದು ಗುಲಬರ್ಗಾ 2ನೇ ಹೆಚ್ಚುವರಿ & ವಿಶೇಷ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣಾ ಹಂತದಲ್ಲಿ ಇರುತ್ತದೆ. ಸದರಿ ಪ್ರಕರಣದಲ್ಲಿ ನಾನು ಸಾಕ್ಷಿ ಕ್ರಮ ಸಂ:17 ಇದ್ದು, ನ್ಯಾಯಾಲದಲ್ಲಿ ಸಾಕ್ಷಿ ಹೇಳವಂತೆ ಮಾನ್ಯ ನ್ಯಾಯಾಲಯವು ನನಗೆ ಸಮನ್ಸ್ ನಿಡೀದ್ದು ಇರುತ್ತದೆ. ನನಗೆ ಸಮನ್ಸ್ ಜಾರಿಯಾದಾಗಿನಿಂದ ಈ ಕೊಲೆ ಪ್ರಕರಣದ ಆರೋಪಿತರ ಸ್ನೇಹಿತರಾದ 1) ಟೈಗರ್ ಅಂಬರೇಶ, 2) ಈಶ್ವರ @ ಈಶ್ಯಾ, 3)ಆಕಾಶ @ ಆಕ್ಯಾ 4) ಗಂಗ್ಯಾ ಚೆಕ್ ಪೋಸ್ಟ್  ಗೋಕುಲ ನಗರ ಜಿ.ಡಿ.ಎ ಕಾಲೋನಿ ನಿವಾಸಿಗಳಾಗಿರುತ್ತಾರೆ, ಈ ಕೊಲೆ ಪ್ರಕರಣದ ಜಾಮೀನಿನ ಮೇಲೆ ಹೊರಗಡೆ ಇರುವ ಆರೋಪಿತನಾದ ಕಿರಣ @ ಆರ್ಜೆ ಕಿರಣ ಇವರೆಲ್ಲರೂ ರಘು ಕೊಲೆ ಪ್ರಕರಣದಲ್ಲಿ ಬಾಬ್ಯಾ  ನಮ್ಮ ವಿರುದ್ಧ ಕೋರ್ಟನಲ್ಲಿ ಸಾಕ್ಷಿ ಹೇಳಿದರೆ, ಅವನಿಗೆ ಜೀವ ಸಹಿತ ಬಿಡುವುದಿಲ್ಲಾ. ಬಾಬ್ಯಾಗೆ ರಘು ಆದ ಪರಿಸ್ಥಿತಿ ಆಗುತ್ತದೆ. ಮತ್ತು ನಮ್ಮ ವಿರುದ್ಧ ಸುಳ್ಳು ಸಾಕ್ಷಿ ಹೇಳಬೇಕು ಅವನಿಗೆ ಹೋಗಿ ಹೇಳು ಅಂತಾ ಹೇಳಿರುತ್ತಾರೆ. ಈ ವಿಷಯ ನನಗೆ ಪರಿಚಯದ ನಮ್ಮ ಮನೆ ಹತ್ತಿರ ವಾಸವಾಗಿರುವ ಸೂರಜ @ ಸುಜ್ಯಾ ತಂದೆ ದೇವಿಂದ್ರಪ್ಪ  ಹಲಗುಂಟಿ ಇತನಿಂದ ವಿಷಯ ಕೇಳಿ ಗೊತ್ತಾಗಿರುತ್ತದೆ. ಅಲ್ಲದೇ ಇಂದು ನ್ಯಾಯಾಲಯದಲ್ಲಿ ರಘುನ ಕೊಲೆ ಪ್ರಕರಣದಲ್ಲಿ ನನ್ನ ಸಾಕ್ಷಿ ವಿಚಾರಣೆ ಇದ್ದು, ದಿನಾಂಕ: 30/12/2022 ರಂದು ರಾತ್ರಿ ನಾನು ಮನೆಯಲ್ಲಿ ಇದ್ದಾಗ ಅಂದಾಜು ರಾತ್ರಿ 11:30 ರಿಂದ 11:45 ಗಂಟೆಯ ಸಮಯದಲ್ಲಿ ಮನೆಯ ಹೊರಗಡೆ ಬೈಕಗಳ ಹಾರ್ನ ಶಬ್ಧ ಮಾಡುತ್ತಾ ಮತ್ತು ಜೋರಾಗಿ ಎಕ್ಸಿಲೇಟರ್ ಮಾಡುತ್ತಾ, ಎರಡು-ಮೂರು ಬಾರಿ ಬೈಕಗಳು ಓಡಾಡಿದ್ದು, ಅಲ್ಲದೇ ಮನೆ ಮೇಲೆ ಕಲ್ಲು  ಎಸೆದಿರುತ್ತಾರೆ. ನಾನು ಮರೆಯಾಗಿ ನಿಂತು ಲೈಟಿನ ಬೆಳಕಿನಲ್ಲಿ ನೊಡಲಾಗಿ, ಅವರು ಸೂರಜನ ಎದುರುಗಡೆ ನನಗೆ ಬೆದರಿಕೆ ಹಾಕಿದ  ಟೈಗರ್ ಅಂಬರೇಶ, ಈಶ್ವರ @ ಈಶ್ಯಾ, ಆಕಾಶ @ ಆಕ್ಯಾ  ಗಂಗ್ಯಾ ಚೆಕ್ ಪೋಸ್ಟ ಇವರುಗಳೇ ಇದ್ದು ನಾನು ಇಂದು ನ್ಯಾಯಾಲಯದಲ್ಲಿ ಬಂದು ಸಾಕ್ಷಿ ಹೇಳಬಾರದೆಂದು ಭಯ ಹುಟ್ಟಿಸುವ ಸಲುವಾಗಿ ಈ ಮೇಲಿನಂತೆ ಮಾಡಿದ್ದಾರೆ. ನಾನು  ನನ್ನ ಸ್ನೇಹಿತರು ಮತ್ತು ನನ್ನ ಕುಟುಂಬ ಸದಸ್ಯರೊಂದಿಗೆ ಇಂದು ನ್ಯಾಯಾಲಯಕ್ಕೆ ಬಂದು ನಾನು ನೋಡಿದ ಘಟನೆ ಕುರಿತು ಸಾಕ್ಷಿ ಹೇಳಿರುತ್ತೆನೆ. ಮತ್ತು ಈ ಮೇಲೆ ಹೇಳಿದ ಜನರು ನನಗೆ ಜೀವ ಭಯ ಹಾಕಿದ ಬಗ್ಗೆ  ಮತ್ತು ನಿನ್ನೆ ನಡೆದ ಘಟನೆ ಕುರಿತು ಮಾನ್ಯ ನ್ಯಾಯಾಲಯದಲ್ಲಿ ಹೇಳಿರುತ್ತೆನೆ.  ಈ ಬಗ್ಗೆ ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ಠಾಣೆಗೆ ಬಂದು ದೂರು ಕೊಡುತ್ತಿದ್ದು, ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ಕಾರಣ ನಾನು ಪ್ರತ್ಯಕ್ಷ ಸಾಕ್ಷಿದಾರನಾಗಿದ್ದು, ನನಗೆ ಸಾಕ್ಷಿ ಹೇಳದಂತೆ  ಜೀವ ಭಯ ಹಾಕುತ್ತಿರುವ ಈ ಮೇಲಿನವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು  ನನಗೆ ಸೂಕ್ತ ರಕ್ಷಣೆ ನೀಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೆನೆ ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ:31-12-2022 ರಂದು ಮದ್ಯಾಹ್ನ ನಾನು ವಿಶ್ವವಿದ್ಯಾಲಯದಲ್ಲಿ ಬರುವ ನಮ್ಮ ಕೆ.ಪಿ.ಟಿ.ಸಿ.ಎಲ್ ಕಾರ್ಯಾಲಯದಲ್ಲಿ ಕರ್ತವ್ಯದ ಮೇಲೆ ಇರುವಾಗ ನಮ್ಮ ಕೆ.ಪಿ.ಟಿ.ಸಿ.ಎಲ್ ಮೆಕ್ಯಾನಿಕ್ ಸಿಬ್ಬಂದಿಯವರಾದ ಧನಶೆಟ್ಟಿ ಇವರು ನನಗೆ ಫೋನ್ ಮಾಡಿ ನಾನು ಮತ್ತು ಮೆಕ್ಯಾನಿಕ್ ಧನಶೆಟ್ಟಿ ಇಬ್ಬರು ಇಸ್ಲಾಂಬಾದ್ ಕಾಲೋನಿಯಲ್ಲಿ ಬರುವ ನಮ್ಮ ಕೆ.ಪಿ.ಟಿ.ಸಿ.ಎಲ್ ವಿದ್ಯತ್ ಸರಬರಾಜು ಆಗುತ್ತಿರುವ ಬಗ್ಗೆ ತಪಾಸಣೆ ಮಾಡುತ್ತ ಇರುವಾಗ ಒಬ್ಬ ಎಂ.ಎ.ಎಂ ಶಾಲೆಯ ಬಸ್ ಚಾಲಕನು ನೆಗರು ಗಂಜ್ ಹೌಸಿಂಗ್ ಬೋರ್ಡ ಕಾಲೋನಿ ಕಡೆಯಿಂದ ಕೆ.ಸಿ.ಟಿ ಕಾಲೇಜ್ ರಿಂಗ್ ರೋಡ್ ಕಡೆಗೆ ಹೋಗುವ ಕುರಿತು ತನ್ನ ಶಾಲಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಇಸ್ಲಾಂಬಾದ್ ಕಾಲೋನಿ ರೋಡ್ ಹತ್ತಿರ ಬರುವ ನಮ್ಮ ಕೆ.ಪಿ.ಟಿ.ಸಿ.ಎಲ್ 111ಎ-ಟೈಪ್ ಗೋಪುರಕ್ಕೆ ತನ್ನ ಬಸ್ಸಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ಮೇನ್ ಎಂಗಲ್ ಮತ್ತು ಗೋಪುರದ ಅಡ್ಡ ಪಟ್ಟಿಗಳು ಡ್ಯಾಮೇಜ್ ಆಗಿರುತ್ತವೆ. ಅಪಘಾತ ಪಡಿಸಿದ ಬಸ್ ನಂಬರ ನೋಡಲು ಎಂ.ಎ.ಎಂ ಶಾಲೆಯ ಬಸ್ ಇದ್ದು ಅದರ ನಂಬರ ಕೆ.ಎ-32/ಡಿ-5436 ಇರುತ್ತದೆ ಅದರ ಚಾಲಕ ಬಸ್ ಸ್ವಲ್ಪ ನಿಲ್ಲಿಸಿದಂತೆ ಮಾಡಿ ಬಸ್ ಸಮೇತ ಓಡಿ ಹೋಗಿರುತ್ತಾನೆ. ಸದರಿ ಘಟನೆ ಜರುಗಿದಾಗ ಮದ್ಯಾಹ್ನ 2:00 ಗಂಟೆ ಸಮಯವಾಗಿತ್ತು ಬಸ್ ಚಾಲಕನ ಹೆಸರು ಗೋತ್ತಾಗಿರುವುದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದ್ದಲ್ಲಿ ಗುರ್ತಿಸುತ್ತೆವೆ ಅಂತ ತಿಳಿಸಿದ್ದರಿಂದ ನಾನು ಘಟನೆ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿಸಲಾಗಿ ಶಾಲಾ ಬಸ್ ಚಾಲಕ ಭಾರಿ ವೆಚ್ಚದ ಪ್ರಮಾಣದಲ್ಲಿ ವಿದ್ಯತ್ ಗೋಪುರ ಡ್ಯಾಮೇಜ್ ಮಾಡಿದ್ದು ಕಂಡು ಬಂದಿದ್ದರಿಂದ ನಮ್ಮ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಅವರ ಆದೇಶದಂತೆ ಠಾಣೆಗೆ ಬರಲು ತಡವಾಗಿರುತ್ತದೆ. ಶಾಲಾ ಬಸ್ ನಂಬರ ಕೆಎ-32/ಡಿ-5436 ನೇದ್ದರ ಚಾಲಕ ತನ್ನ ಬಸ್ ಅನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಇಸ್ಲಾಂಬಾದ್ ಕಾಲೋನಿಯಲ್ಲಿ ಬರುವ ಕೆ.ಪಿ.ಟಿ.ಸಿ.ಎಲ್ ವಿದ್ಯತ್ ಗೋಪುರ 111 ಎ-ಟೈಪ್ ಪೂರ್ವ ಭಾಗದಲ್ಲಿ ಡಿಕ್ಕಿಪಡಿಸಿ ಅಪಘಾತ ಮಾಡಿ ಡ್ಯಾಮೇಜ್ ಮಾಡಿ ತನ್ನ ಬಸ್ ಸಮೇತ ಓಡಿಹೋಗಿದ್ದು ಶಾಲಾ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 01/01/2023 ರಂದು ಮದ್ಯಾಹ್ನ 12:30 ಗಂಟೆಗೆ ಶ್ರೀ. ಮಾಣೀಕ ತಂದೆ ಅಶೋಕ ರಾಠೋಡ ವಯಃ 32 ವರ್ಷ ಜಾತಿಃ ಲಂಬಾಣಿ ಉಃ ಕೂಲಿ ಕೆಲಸ ಮುಕ್ಕಾಃ ಕ್ಷತ್ರುನಾಯಕ ತಾಂಡಾ ನವನಿಹಾಳ ತಾಃ ಕಮಲಾಪೂರ ಜಿಲ್ಲಾಃ ಕಲಬುರಗಿ ಇವರು ನೀಡಿರುತ್ತಾರೆಂಬ ಫಿರ್ಯಾಧಿ ಅರ್ಜಿಯನ್ನು ವಿನೋದ ತಂದೆ ಬಳಿರಾಮ ರಾಠೋಡ ಇವರು ಠಾಣೆಗೆ ಹಾಜರಾಗಿ ಸಲ್ಲಿಸಿದ್ದು ಸಾರಂಶವೆನೆಂದರೆ, ಮೊನ್ನೆ ದಿನಾಂಕ 30/12/2022 ರಂದು ನಾನು, ನಮ್ಮ ದೊಡ್ಡಪ್ಪನ ಟ್ರ್ಯಾಕ್ಟರ ನಂ. ಕೆಎ 32 ಟಿ.ಬಿ 6668 ಮತ್ತು ಟ್ರ್ಯಾಲಿಯನ್ನು ತೆಗೆದುಕೊಂಡು ಇದರ ಚಾಲಕ ಮೋಹನ ತಂದೆ ಸುಭಾಶ ರಾಠೋಡ ಈತನೊಂದಿಗೆ ನಮ್ಮ ತಾಂಡಾದಿಂದ ಕಲಬುರಗಿಗೆ ಟ್ರ್ಯಾಕ್ಟರ ರಿಪೇರಿಗೆ ಬಂದು ರಿಪೇರಿ ಮಾಡಿಕೊಂಡು ಮರಳಿ ತಾಂಡಾಕ್ಕೆ ಹೋಗುವಾಗ ರಾತ್ರಿಯಾಗಿದ್ದು, ರಾತ್ರಿ 9:30 ಗಂಟೆ ಆಗಿರಬಹುದು ಅವರಾದ ದಾಟಿ ಸ್ವಲ್ಪ ಅಂತರದಲ್ಲಿ ಹೊಸ ಪೆಟ್ರೋಲ ಪಂಪದ ಮುಂದೆ ಹೋಗುತ್ತಿರುವಾಗ ಅದೆ ವೇಳೆಗೆ ನಮ್ಮ ಹಿಂದಿನ ರೋಡಿನಿಂದ ಒಂದು ಕಿಯಾ ಕಾರ ನಂ. ಕೆಎ 39 ಎಮ್ 7676 ನೇದ್ದರ ಚಾಲಕನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಟ್ರ್ಯಾಕ್ಟರದ ಬಲಭಾಗದ ಹಿಂದಿನ ಸೈಡಿಗೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರದ ಹಿಂದಿನ ಭಾಗ ಹಾಗು ಕಾರಿನ ಮುಂದಿನ ಭಾಗ ಜಖಂಗೊಂಡಿದ್ದು, ನನಗೆ ಹಣೆಗೆ ರಕ್ತಗಾಯವಾಗಿ ಎರಡು ಹಲ್ಲು ಬಿದ್ದಿದ್ದು, ಅಲ್ಲಲ್ಲಿ ಗಾಯಗಳಾಗಿದ್ದು, ಕಾರಿನ ಚಾಲಕ ಮತ್ತು ಆತನ ಬದಿಯಲ್ಲಿ ಇರುವ ಇನ್ನೊಬ್ಬನಿಗೆ ಅಲ್ಲಲ್ಲಿ ರಕ್ತಗಾಯಗಳಾಗಿದ್ದು ಮತ್ತು ಗುಪ್ತಗಾಯಗಳಾಗಿದ್ದು, ಅವರ ಹೆಸರು ವಿಚಾರಿಸಲು ಕಾರು ನಡೆಸುವನ ಹೆಸರು ಶ್ರೀಕಾಂತ ತಂದೆ ಬಸವರಾಜ ಪಾಟೀಲ ಮತ್ತು ಸೈಡಿಗೆ ಕುಳಿತವನು ಶ್ರೀನಾಥ ತಂದೆ ಪಂಡೀತರಾವ ಅಂತಾ ಗೊತ್ತಾಯಿತು. ಮುಂದೆ ಮೋಹನ ರಾಠೋಡ ಈತನು ನನಗೆ ಮತ್ತು ಅವರಿಬ್ಬರಿಗೆ ಒಂದು ಯಾವುದೊ ಖಾಸಗಿ ಅಂಬುಲೇನ್ಸದಲ್ಲಿ ಹಾಕಿಕೊಂಡು ನನಗೆ ಕಲಬುರಗಿ ಸರಕಾರಿ ಆಸ್ಪತ್ರೆಗೆ ಮತ್ತು ಅವರಿಗೆ ಪಿಜಿ ಶಹಾ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಈ ಘಟನೆಯಿಂದ ನಮ್ಮ ಟ್ರ್ಯಾಕ್ಟರ ಮತ್ತು ಇಂಜೀನಭಾಗ ಹಾಗು ಕಾರಿನ ಭಾಗ ಜಖಂಗೊಂಡಿದ್ದು ಅಲ್ಲದೆ ಮೋಹನಿಗೆ ಹೊರತು ಪಡಿಸಿ ಎಲ್ಲರಿಗು ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು, ಈ ವಿಷಯದಲ್ಲಿ ಕಾರ ಚಾಲಕ ಶ್ರೀಕಾಂತ ಪಾಟೀಲ ಈತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ನಾನು ಹುಶಾರ ಆದ ನಂತರ ಕೇಸು ಮಾಡುವ ಬಗ್ಗೆ ತಿಳಿದುಕೊಂಡು ಇಂದು ಈ ಫಿರ್ಯಾದಿಯನ್ನು ಕಳುಹಿಸಿಕೊಟ್ಟಿರುತ್ತೆನೆ, ಎಂದು ಕೊಟ್ಟ ಅರ್ಜಿಯ  ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 01/01/2023 ರಂದು ಸಾಯಂಕಾಲ 7:40 ಗಂಟೆಗೆ ಮಣ್ಣೂರ ಆಸ್ಪತ್ರೆ ಕಲಬುರಗಿಯಿಂದ ಅಬುಸುಫಿಯಾನ ತಂದೆ ಅಬ್ದುಲ್ಲಾ ಈತನ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಮಣ್ಣೂರ ಆಸ್ಪತ್ರೆಗೆ ಭೇಟಿ ನೀಡಿ ಎಮ್.ಎಲ್.ಸಿ ಪತ್ರ ವಸೂಲ ಮಾಡಿಕೊಂಡು ಗಾಯಾಳುವಿಗೆ ನೋಡಲು ಆತನು ಮಾತನಾಡುವ ಸ್ಧಿತಿಯಲ್ಲಿ ಇರಲಿಲ್ಲಾ ಅಲ್ಲಿಯೇ ಇದ್ದ ಆತನ ಅಣ್ಣನಾದ ಮಹಮ್ಮದ ಶಕೀಲ ತಂದೆ ಅಬ್ದುಲ್ಲಾ ಬೆಸಗಿ ಈತನಿಗೆ ವಿಚಾರಿಸಿ 8:00 ಪಿ.ಎಮ್ ದಿಂದ 9:00 ಪಿ.ಎಮ್ ದ ವರೆಗೆ ಹೇಳಿಕೆ ಪಡೆದುಕೊಂಡಿದ್ದು ಹೇಳಿಕೆ ಸಾರಂಶವೆನೆಂದರೆ, ಇಂದು ದಿನಾಂಕ 01/01/2023 ರಂದು ಸಾಯಂಕಾಲ 6:30 ಗಂಟೆ ಸುಮಾರಿಗೆ ಫಿರ್ಯಾದಿ ತಮ್ಮನಾದ ಅಬುಸುಫಿಯಾನ ಈತನು ಅವರ ಮನೆಯಿಂದ ಕಿರಾಣಾ ಅಂಗಡಿ ಕಡೆಗೆ ಹೋಗುವ ಕುರಿತು ರಸ್ತೆ ಬದಿಯಿಂದ ನಡೆದುಕೊಂಡು ಹೋಗುವಾಗ ಇತ್ತೆಹಾದ ಕಾಲೋನಿ ಹತ್ತೀರದ ಹುಸೇನಿ ಕಾಲೋನಿಯ 1ನೇ ಕ್ರಾಸ ಹತ್ತೀರ ಮೋಟರ ಸೈಕಲ ನಂ. ಕೆಎ-32 ಇ.ಎಮ್-9913 ನೇದ್ದರ ಸವಾರ ಮಹಮ್ಮದ ಅಸದುಲ್ಲಾ ಈತನು ಎಮ್.ಎ.ಎಮ್ ಗಾರ್ಡನ ಕಡೆಯಿಂದ ಮಹಮ್ಮದ ರಫೀಕ ಚೌಕ ಕಡೆಗೆ ಹೋಗುವ ಕುರಿತು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಅಬುಸುಫಿಯಾನ ಈತನಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ರಸ್ತೆಯ ಮೇಲೆ ಬಿಳಿಸಿ ಭಾರಿಗಾಯಗೊಳಿಸಿದ್ದು, ಕಾರಣ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-01-2023 01:16 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080