ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್ ಠಾಣೆ :-  ಇಂದು ದಿನಾಂಕ: ೦೧.೦೧.೨೦೨೨ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಶ್ರೀ ಸೈಯ್ಯದ ಜಾಫರ ತಂದೆ ಗೌಸ ಜಮಾದಾರ ವ:೧೯ವರ್ಷ ಉ:ವಿದ್ಯಾರ್ಥಿ ಜಾತಿ:ಮುಸ್ಲಿಂ ಸಾ:ಮೂಡಬೂಲ ತಾ:ಶಹಾಪೂರ ಜಿ:ಯಾದಗೀರ ಹಾ:ವಾ:ನಯಿಮ ಮಜೀದ ಹತ್ತಿರ ಮಹಿಬೂಬ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ  ಫಿರ್ಯಾದಿಯ ಅರ್ಜಿಯನ್ನು ಸಲ್ಲಿಸಿದ್ದು ಸದರಿ ಫಿರ್ಯಾದಿಯ ಅರ್ಜಿಯ  ಸಾರಾಂಶ  ಈ ಕೆಳಗಿನಂತಿರುತ್ತದೆ. ತಮಗೆ ಈ ಮೂಲಕ ದೂರು ಕೊಡುವದೆನೆಂದೆರೆ, ನಾವು ಕಲಬುರಗಿ ನಗರದ ಮಹಿಬೂಬ ನಗರದಲ್ಲಿರುವ ನಮ್ಮ ಅಜ್ಜಿಯ ಮನೆಯ ಹತ್ತಿರವೇ ಸುಮಾರು ೪-೫ ತಿಂಗಳಿಂದ ಬಾಡಿಗೆಯಿಂದ ವಾಸವಾಗಿರುತ್ತೇವೆ. ಗೌಸ ಜಮಾದಾರ ತಂದೆ ಸೈಯ್ಯದ ಖಾಜಾಮೈನೊದ್ದೀನ ಜಮಾದಾರ ವ:೪೨ ವರ್ಷ ಇವರು ನಮ್ಮ ತಂದೆ ಇದ್ದು ಅವರಿಗೆ ದೇಹದ ಎಡಭಾಗಕ್ಕೆ ಲಕವಾ ಹೊಡೆದಿದ್ದರಿಂದ ಅವರು ಮನೆಯಲ್ಲಿಯೇ ಇರುತ್ತಾರೆ. ನಮ್ಮ ತಂದೆಯವರು ಅಂಗವಿಕಲ ಇರುವುದರಿಂದ ಮನೆಯಿಂದ ಯಾವಾಗಲಾದರೂ ಹೊರಗಡೆ ಹೋದರೂ ರಾತ್ರಿ ೧೦.೦೦ ಗಂಟೆಯ ಒಳಗಡೆ ಮನೆಗೆ ವಾಪಸ್ಸ್ ಬರುತ್ತಿದ್ದರು. ನಿನ್ನೆ ದಿನಾಂಕ:೩೧.೧೨.೨೦೨೧ ರಂದು ಮಧ್ಯಾಹ್ನ ೩.೦೦ ಗಂಟೆ ಸುಮಾರಿಗೆ ನಮ್ಮ ತಂದೆಯವರು ಮನೆಯಿಂದ ಹೊರಗಡೆ ಹೋದವರು ರಾತ್ರಿ ೧೦.೦೦ ಗಂಟೆಯಾದರೂ ಮನೆಗೆ ಬರದೇ ಇದ್ದರಿಂದ ನಾವು  ನಮ್ಮ ತಂದೆಯವರಿಗೆ ಎಲ್ಲಾ ಕಡೆ ಹುಡುಕಾಡಿದರೂ ಸಹ ಅವರು ಸಿಗಲಿಲ್ಲಾ. ಇಂದು ದಿನಾಂಕ:೦೧.೦೧.೨೦೨೨ ರಂದು ಬೆಳಿಗ್ಗೆ ೮.೦೦ ಗಂಟೆ ಸುಮಾರಿಗೆ ನಾವು ಮನೆಯಲ್ಲಿದ್ದಾಗ ಮುಸ್ಲಿಂ ಸಂಘದ ಹತ್ತಿರ ಒಬ್ಬ ವ್ಯಕ್ತಿಯ ಕೊಲೆಯಾಗಿದೆ ಅಂತಾ ಮಹಿಬೂಬ ನಗರದ ಜೆ.ಎನ ಟೇಲರ ಅಂಗಡಿಯ ಹತ್ತಿರ ಜನರೂ ಮಾತಾಡುತ್ತಿದ್ದಾರೆ ಅಂತಾ ವಿಷಯ ಗೊತ್ತಾಗಿ ನಾನು ಮತ್ತು ನಮ್ಮ ಸೋದರಮಾವ ಇಲಿಯಾಸ ಅಹ್ಮದ ತಂದೆ ಅಬ್ದುಲ ರಹೆಮಾನ ಇಬ್ಬರೂ ಮುಸ್ಲಿಂ ಸಂಘ ಪಕ್ಕದಲ್ಲಿರುವ, ಚನ್ನವೀರ ನಗರ ಬಡಾವಣೆಯ ಛಪ್ಪರಬಂಧಿ ಇವರಿಗೆ ಸಂಬಂಧಿಸಿದ ಖುಲ್ಲಾ ಜಾಗೆಯಲ್ಲಿ ಹೋಗಿ ನೋಡಲಾಗಿ  ಮೃತ ದೇಹ ಸ್ಥಳದಲ್ಲಿ ಇರಲಿಲ್ಲಾ. ಸ್ಥಳದಲ್ಲಿದ ಗಾಡವಾಗಿ ರಕ್ತ ಬಿದಿದ್ದು ಮತ್ತು ಒಂದು ದೊಡ್ಡಕಲ್ಲಿಗೆ ರಕ್ತ ಹತ್ತಿದ್ದು ಕಂಡುಬಂದಿದ್ದು ಅದರ ಪಕ್ಕದಲ್ಲಿ ಇನ್ನೊಂದು ಪರಸಿಕಲ್ಲಿಗೆ ರಕ್ತ ಅಲ್ಲಲ್ಲಿ ಹತ್ತಿದ್ದು ಮತ್ತು ಇನ್ನೊಂದು ಸಣ್ಣ ಹಿಡಿಗಾತ್ರ ಕಲ್ಲಿಗೆ ಕೂಡಾ ರಕ್ತ ಹತ್ತಿದ್ದು ಕಂಡುಬಂದಿದ್ದು ಮೃತ ದೇಹದ ಬಗ್ಗೆ ವಿಚಾರಿಸಲಾಗಿ ಮೃತ ದೇಹವನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಾಗಾರ ಕೋಣೆಗೆ ಸಾಗಿಸಿದ ಬಗ್ಗೆ ಮಾಹಿತಿ ಗೊತ್ತಾಗಿ ನಾವು ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಾಗಾರ ಕೋಣೆಗೆ ಹೋಗಿ ಶವಾಗಾರ ಕೋಣೆಯಲ್ಲಿದ್ದ ಮೃತ ದೇಹವನ್ನು ನೋಡಲಾಗಿ ಈ ಮೃತ ದೇಹವು ನಮ್ಮ ತಂದೆ ಗೌಸ ಜಮಾದಾರ ಇವರೆ ಇರುತ್ತದೆ ಎಂದು ನೋಡಿ ಗುರುತಿಸಿದೇನು. ನಮ್ಮ ತಂದೆಯ ಮೃತ ದೇಹವನ್ನು ನೋಡಲಾಗಿ ಅವರ ಎಡಭಾಗದ ಹಣೆ ಮೇಲೆ, ತಲೆಯ ಮೇಲೆ, ತಲೆ ಹಿಂಭಾಗದಲ್ಲಿ ಎರಡು ಕಡೆಗಳಲ್ಲಿ ಹೊಡೆದ ಭಾರಿ ರಕ್ತಗಾಯಗಳಾಗಿದ್ದು, ಎಡಗಣ್ಣಿಗೆ ಕಂದು ಗಟ್ಟಿದ ಗುಪ್ತಗಾಯವಾಗಿ ಕಣ್ಣು ಬಾವು ಬಂದಿರುತ್ತದೆ. ನಮ್ಮ ತಂದೆಯವರಿಗೆ ಯಾರೋ ಅಪರಿಚಿತರು ಯಾವುದೋ ಕಾರಣಕ್ಕಾಗಿ ಮತ್ತು ಯಾವುದೋ ದುರುದ್ದೇಶದಿಂದ ಘಟನೆ ಸ್ಥಳದಲ್ಲಿ ಬಿದ್ದ ರಕ್ತ  ಹತ್ತಿದ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ ಎಂದು ಕಂಡು ಬರುತ್ತದೆ. ನಮ್ಮ ತಂದೆಯವರ ಕೊಲೆಯು ದಿನಾಂಕ:೩೧.೧೨.೨೦೨೧ ರಂದು ಮಧ್ಯಾಹ್ನ ೩.೦೦ ಗಂಟೆಯಿಂದ ದಿನಾಂಕ:೦೧.೦೧.೨೦೨೨  ರಂದು ಬೆಳಗಿನ ೭.೦೦ ಗಂಟೆ ಅವಧಿಯಲ್ಲಿ ನಡೆದಿರುತ್ತದೆ. ಕಾರಣ ನಮ್ಮ ತಂದೆ ಗೌಸ ಜಮಾದಾರ ಇವರಿಗೆ ಕೊಲೆ ಮಾಡಿದ ಯಾರೋ ಅಪರಿಚಿತ ಜನರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಅಂತಾ ಕೊಟ್ಟ ರ‍್ಯಾದಿ ರ‍್ಜಿಯ ಸಾರಾಂಶದ ಮೇಲಿಂದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ .

ಇತ್ತೀಚಿನ ನವೀಕರಣ​ : 03-01-2022 11:38 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080