ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್‌ ಠಾಣೆ :-  ದಿನಾಂಕ 31-05-2022  ರಂದು ೦೪.೩೦ ಪಿ.ಎಂ ಕ್ಕೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತಮ್ಮದೊಂದು ಗಣಕೀಕೃತ ಮಾಡಿದ ದೂರು ಸಾರಾಂಶವೇನೆಂದರೆ,  ನಾನು ಹನುಮಾನ ತಂದೆ ಸೂರ್ಯಕಾಂತ  ಬಚ್ಚಾ ವ:೩೬ ವರ್ಷ ಉ:ಖಾಸಗಿ ಕೆಲಸ ಸಾ:ಮನೆ.ನಂ.೧೧-೧೮೧೪/೮ ಸಂಜೆವಾಣಿ ಪತ್ರಿಕೆ ಆಫೀಸ ಹತ್ತಿರ ವಿದ್ಯಾನಗರ ಕಲಬುರಗಿ ಆಗಿದ್ದು ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ, ನಾನು ಪಾರ್ವತಿ  ಏಜೇನ್ಸಿಯ ಮಾಲೀಕನಾಗಿದ್ದು, ಲೊಟ್ಟೋ ಕಂಪನಿಯ ಡಿಲರಶೀಪ್ ಪಡೆದುಕೊಂಡು ಕಂಪನಿಯ ಪ್ರೊಡಕ್ಟಗಳನ್ನು ಕಲಬುರಗಿ ನಗರದಲ್ಲಿ ರಿಟೇಲರ್ ಅಂಗಡಗಿಳಿಗೆ ಸರಬರಾಜು ಮಾಡಿಕೊಂಡಿರುತ್ತೇನೆ. ಹೀಗಿದ್ದು ದಿನಾಂಕ:೨೫/೦೫/೨೦೨೨ ರಂದು ೧೦.೦೫ ಗಂಟೆಗೆ ಕಲಬುರಗಿ ನಗರದ ಸೂಪರ ಮಾರ್ಕೇಟ ಕಿರಣ ಬಜಾರನ  ಕಬೀರ  ಟ್ರೇರ‍್ಸ ಅಂಗಡಿ ಎದುರುಗಡೆ ನನ್ನ ಮೋಟಾರ ಸೈಕಲ್ ನಂ. KA32EJ2870 ನೇದ್ದು ನಿಲ್ಲಿಸಿ ಸದರಿ ಅಂಗಡಿಯವರಿಗೆ  ಪ್ರೋಡಕ್ಟ್ ಮಾರಾಟ ಮಾಡಿದ ಹಣ ತೆಗೆದುಕೊಂಡು ಬರಲು ಅಂಗಡಿ ಒಳಗೆ ಹೋಗಿ ವಾಪಸ ೧೦.೧೫ ಗಂಟೆಗೆ ನಾನು ನಿಲ್ಲಿಸಿದ  ಮೋಟಾರ ಸೈಕಲ್ ಹತ್ತಿರ ಬಂದು ನೋಡಲಾಗಿ, ಮೋಟಾರ ಸೈಕಲ್ನ ಡಿಕ್ಕಿ ತೆರೆದಿದ್ದನ್ನು ನೋಡಿ ಬ್ಯಾಗನಲ್ಲಿಟ್ಟಿದ್ದ ನಾನು ಅಂಗಡಿಗಳಿಂದ ಕಲೆಕ್ಟ ಮಾಡಿದ ಹಣ ೫೨,೦೦೦/-ರೂ ಮತ್ತು ದಶರಥ ಇತನು ಅಂಗಡಿಗಳಿಂದ ಕಲೆಕ್ಟ್ ಮಾಡಿ ಕೊಟ್ಟಿದ ಹಣ ೪೪,೬೭೩/-ರೂ ಹಾಗೂ ಯಲ್ಲಪ್ಪ ಇತನು ಅಂಗಡಿಗಳಿಂದ ಕಲೆಕ್ಟ ಮಾಡಿ ಕೊಟ್ಟಿದ ಹಣ ೨೩,೦೦೦/-ರೂ ಹೀಗೆ ನಗದು ಹಣ ಒಟ್ಟು೧,೧೯,೬೭೩/-ರೂ ಮತ್ತು ೨ ಸ್ಯಾಮಸಂಗ್ ಕಂಪನಿಯ ಆರ್ಡರ್ ಪಂಚ ಮಾಡುವ ಮೋಬೈಲ್ಗಳು ಅ.ಕಿ ೧೬,೦೦೦/-ನೇದ್ದವುಗಳು ಹಾಗೂ ಕ್ರೆಡಿಟ್ ಬಿಲ್ಲಗಳು ನೋಡಿದ್ದು ಎಲ್ಲಿಯೂ ಸಿಗದಿದೇ ಇರುವುದರಿಂದ  ಈ ವಿಷಯವನ್ನು ದಶರಥ ಇತನಿಗೆ ಫೋನ ಮಾಡಿ ತಿಳಿಸಿದ್ದರಿಂದ ಸದರಿಯವನು ಸ್ಥಳಕ್ಕೆ ಬಂದು ನಾವಿಬ್ಬರೂ ಕೂಡಿಕೊಂಡು ಸದರಿ ಸ್ಥಳದ ಸುತ್ತು ಮುತ್ತ ಸೂಪರ ಮಾರ್ಕೇಟ , ಮುಸ್ಲಿಂ ಚೌಕ, ಗೋಲಾ ಚೌಕ , ಹಾಗರಗಾ ರೋಡ ಮತ್ತು ಚುನ್ನಾ ಭಟ್ಟಿ ಮತ್ತು ಕಲಬುರಗಿ ನಗರದ ಇತರೆ ಕಡೆ ಹುಡಕಾಡಿದರೂ ಸಿಕ್ಕಿರುವುದಿಲ್ಲ. ಕಂಪನಿಯವರೊಂದಿಗೆ ವಿಚಾರಣೆ ಮಾಡಿ ಇಂದು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನನ್ನ ಮೋಟಾರ ಸೈಕಲ್ ನ ಡಿಕ್ಕಿಯಲ್ಲಿಟ್ಟಿದ್ದ ನಗದು ಹಣ ಒಟ್ಟು ೧,೧೯,೬೭೩/-ರೂ ಮತ್ತು ೨ ಸ್ಯಾಮಸಂಗ್ ಕಂಪನಿಯ ಆರ್ಡರ್  ಪಂಚ ಮಾಡುವ ಮೋಬೈಲ್ಗಳು ಹಾಗೂ ಕ್ರೇಡಿಟ್ ಬಿಲ್ಲಗಳನ್ನು ಕಳ್ಳತನ ಮಾಡಿ ಕೊಂಡು ಹೋದ ಕಳ್ಳರ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಿ ಕಳ್ಳತನವಾದ ೨ ಮೊಬೈಲ್, ನಗದು ಹಣವನ್ನು  ಮತ್ತು ಕ್ರೇಡಿಟ್ ಬಿಲ್ಲಗಳನ್ನು ಪತ್ತೆ ಹಚ್ಚಿ ಮರಳಿ ನನಗೆ ಕೊಡಲು ತಮ್ಮಲ್ಲಿ ವಿನಂತಿ ಅಂತ ಕೊಟ್ಟ ಫಿರ್ಯಾದಿ ಅರ್ಜಿಯ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 ವಿಶ್ವವಿದ್ಯಾಲಯ ಪೊಲೀಸ ಠಾಣೆ :-  ದಿನಾಂಕ 31-05-2022 ರಂದು ೧೨:೪೫ ಪಿ.ಎಮ್ ಕ್ಕೆ ಫಿರ್ಯಾಧಿ ಡಾ|| ಚಿದಾನಂದ ತಂದೆ ಮೋನಪ್ಪ ಸುತಾರ ವ|| ೫೭ ವರ್ಷ ಉ|| ಪ್ರೊಪೇಸರ ಜಾ|| ವಿಶ್ವಕರ್ಮ ಸಾ|| ಪ್ಲಾಟ ನಂ ೮೪.೮೫. ಸರ್ವೆ ನಂ ೨೬/೧/೧, ಗುರು ರಾಘವೇಂದ್ರ ಕಾಲೋನಿ ಶಹಾಬಾದ ರೋಡ ಕಲಬುರಗಿ. ಠಾಣೆಗೆ ಹಾಜರಾಗಿ ದೂರು ಅರ್ಜಿ ಸಲ್ಲಿಸಿದೆನಂದರೆ ನಮ್ಮ ಮನೆಯಲ್ಲಿ ನಾನು ನನ್ನ ಹೆಂಡತಿ ಸುವರ್ಣ ಮಗ ರೋಹನ ಎಲ್ಲರು  ವಾಸವಾಗಿರುತ್ತೆವೆ.  ದಿನಾಂಕ ೨೪-೦೫-೨೦೨೨ ರಂದು ನನ್ನ ಮಗ ರೋಹನ ಈತನು ಮುಂಬೈಗೆ ಹೋಗಿದ್ದು, ಮತ್ತು ನನ್ನ ಹೆಂಡತಿ ಸುವರ್ಣ ಇವರು ಧಾರವಾಡದಲ್ಲಿ ಪಿ.ಯು ಉತ್ತರ ಪತ್ರಿಕೆ ಮೌಲ್ಯ ಮಾಪನ ಕುರಿತು ಹೋಗಿರುತ್ತಾರೆ. ನಾನು ಒಬ್ಬನೆ ಮನೆಯಲ್ಲಿ ಇದ್ದು, ದಿನಾಲು ನನ್ನ ಕರ್ತವ್ಯಕ್ಕೆ ಹೋಗಿ ಬರುವುದು ಮಾಡುತ್ತಿದ್ದೆನು. ದಿನಾಂಕ ೨೮-೦೫-೨೦೨೨ ರಂದು ರಾತ್ರಿ ೮:೦೦ ಗಂಟೆಗೆ ನಮ್ಮ ಮನೆಗೆ ಬೀಗ ಹಾಕಿಕೊಂಡು ನಾನು ಧಾರವಾಡಗೆ ಹೋಗಿರುತ್ತೆನೆ ದಿನಾಂಕ ೨೯-೦೫-೨೦೨೨ ರಂದು ಬೆಳಿಗ್ಗೆ ೬:೦೦ ಗಂಟೆ ನಮ್ಮ ಪಕ್ಕದ ಮನೆಯವರಾದ ಶಂಕರ ಪೊಲೀಸ ಪಾಟೀಲ ಇವರು ನಮಗೆ ಪೋನ ಮಾಡಿ ತಿಳಿಸಿದೆನೆಂದರೆ ನಾನು ಬೆಳಿಗ್ಗೆ ೬:೦೦ ಗಂಟೆಗೆ ನಿಮ್ಮ ಮನೆ ಕಡೆ ನೋಡಲು ಮನೆ ಕೊಂಡಿ ಮುರದಿದ್ದು ಮನೆ ಕಳುವು ಆದಂತೆ ಕಂಡುಬಂದಿರುತ್ತದೆ. ಅಂತ ಪೋನ್ ಮಾಡಿ ತಿಳಿಸಿದರು. ಆಗ ನಾನು ನಮ್ಮ ಸಂಭಂದಿಕರಾದ ಗಣಪತಿ ತಂದೆ ಚಿದಾನಂಪ್ಪ ಪೊದ್ದಾರ ಇವರಿಗೆ ಪೋನ್ ಮಾಡಿ ತಿಳಿಸಿದೆನು. ನಂತರ ಅವರು ನಮ್ಮ ಮನೆಗೆ ಬಂದು, ಮನೆ ನೋಡಿ ನಿಮ್ಮ ಮನೆ ಕಳುವು ಆದಂತೆ ಕಂಡು ಬಂದಿದ್ದು, ನಾನು ಮನೆಗೆ ಮುಖ್ಯದ್ವಾರದ ಒಳಗಿನ ಕೊಂಡಿ ಹಾಕಿ ಹಿಂದಿನ ಬಾಗಿಲ ಕೀಲಿ ಹಾಕಿರುತ್ತೆನೆ ನೀವು ಬರಬೇಕು ಅಂತ ಹೇಳಿದ್ದರಿಂದ ನಾನು ದಿನಾಂಕ ೨೯-೦೫-೨೦೨೨ ರಂದು ಬೆಳಿಗ್ಗೆ ೯:೦೦ ಗಂಟೆಗೆ ಧಾರವಾಡದಿಂದ ನಮ್ಮ ಮನೆಗೆ ಬಂದಿರುತ್ತೆನೆ. ನಂತರ ನಮ್ಮ ಸಂಭಂದಿಕರಾದ ಗಣಪತಿ ಇವರಿಗೆ ಕರೆಯಿಸಿದಾಗ ಅವರು ಸಹ ಬಂದಿದ್ದು,  ನಾವು ಮನೆಯ ಬಾಗಿಲು  ತಗೆದು ಒಳಗೆ ಹೋಗಿ ನೋಡಲು ಸಾಮಾನುಗಳೆಲ್ಲಾ ಚೆಲ್ಲಾ ಪಿಲ್ಲಿ ಆಗಿದ್ದು, ನಾವು ಬೆಡ ರೂಮ ಒಳಗೆ ಹೋಗಿ ನೋಡಲು ಗೋಡೆ ಅಲಮರಾ ಕೊಂಡಿ ಮುರಿದ್ದು, ಒಳಗೆ ನೊಡಲು ಅಲ್ಲಮಾರಾ ದಲ್ಲಿಟ್ಟಿದ್ದ ಬಂಗಾರದ ಆಭರಣಗಳಾದ ೧) ೨೦ ಗ್ರಾಂ ಬಂಗಾರ ಒಂದು ಬಳೆ ಅ,ಕಿ. ೮೦,೦೦೦/-ರೂ ೨) ೨೦ ಗ್ರಾಂ ಬಂಗಾರ ಒಂದು ಬಳೆ ಅ,ಕಿ. ೮೦,೦೦೦/-ರೂ  ೩) ೨೦ ಗ್ರಾಂ ಬಂಗಾರ ಒಂದು ಬಳೆ ಅ,ಕಿ. ೮೦,೦೦೦/-ರೂ  ೪) ೨೦ ಗ್ರಾಂ ಬಂಗಾರ ಒಂದು ಬಳೆ ಅ,ಕಿ. ೮೦,೦೦೦/-ರೂ  ೫) ೪೦ ಗ್ರಾಂ ಬಂಗಾರದ ಲಕ್ಷ್ಮಿ ಪೆಂಡೆಂಟ  ಸರ ಅ.ಕಿ. ೧,೬೦,೦೦೦/-ರೂ ೬) ೧೦ ಗ್ರಾಂ ಬಂಗಾರದ ಸುತ್ತುಂಗುರ ಅ.ಕಿ.೪೦,೦೦೦/- ರೂ ೭) ೨೦ ಗ್ರಾಂ ಬಂಗಾರದ ಮಾಟ್ಲಿ ಬಂಡೋಲಿ ಅ.ಕಿ. ೮೦,೦೦೦/- ರೂ ೮) ೧೦ ಗ್ರಾಂ ಬಂಗಾರದ ಮಂಗಳ ಸೂತ್ರ ಅ.ಕಿ. ೪೦,೦೦೦/- ರೂ ಹಿಗೆ ಒಟ್ಟು ೧೬೦ ಗ್ರಾಂ ಬಂಗಾರದ ಆಭರಣಗಳು ಒಟ್ಟು ಅ.ಕಿ. ೬,೪೦,೦೦೦/- ರೂ ಮೌಲ್ಯದ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಮನೆಯಲ್ಲಿ ವಿಚಾರ ಮಾಡಿ ಇಂದು ತಡಮಾಡಿ ಠಾಣೆಗೆ ಹಾಜರಾಗಿ ದೂರು ನೀಡುತ್ತಿದ್ದು, ಕಾರಣ ಈ ಮೇಲಿನ ಬಂಗಾರ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ಕಳ್ಳರನ್ನು ಪತ್ತೆ ಮಾಡಿ ಕಳುವಾದ ನಮ್ಮ ಬಂಗಾರದ ಆಭರಣಗಳು ಪತ್ತೆ ಮಾಡಿಕೊಂಡಬೆಕೆಂದು ಮಾನ್ಯವರಲ್ಲಿ ವಿನಂತಿ. ಅಂತ ಇತ್ಯಾದಿ ಕೊಟ್ಟ ದೂರು ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 01-06-2022 01:52 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080