ಅಭಿಪ್ರಾಯ / ಸಲಹೆಗಳು

ಆಶೋಕ ನಗ ರ ಠಾಣೆ: ದಿನಾಂಕ: 07.08.2021 ರಂದು 08:15 ಪಿ.ಎಂ. ಕ್ಕೆ ಫಿರ್ಯಾದಿ ವಿಠ್ಠಲ್ ತಂದೆ ಅಂಬಾರಾಯ ಹಿರಗೊಂಡಿ ವಯ: 33 ವರ್ಷ ಜಾ: ಲಿಂಗಾಯತ ಉ: ಖಾಸಗಿ ಕೆಲಸ ಸಾ|| ಭೈರಾಮಡಗಿ ಹಾ|| ವ|| ಶಾಂತಿ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ. ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ 2014 ನೇ ಸಾಲಿನಲ್ಲಿ ಒಂದು ಬಜಾಜ ಪ್ಲಾಟಿನಿಯಮ ಮೋಟಾರ ಸೈಕಲ್ ನಂ ಕೆ.ಎ-32 ಇಎಫ್-4991 ಕಪ್ಪು ಬಣ್ಣದ್ದು  ಚೆಸ್ಸಿ ನಂ MD2A18AZ6EWM12776 ಇಂಜಿನ್ ನಂ DZZWEM63651 ಅ|| ಕಿ|| 18,000/-  ರೂಪಾಯಿ ನೇದ್ದು ಖರೀದಿಸಿದ್ದು ಇರುತ್ತದೆ. ಹೀಗಿದ್ದು ದಿನಾಂಕ:.08.07.2021 ರಂದು ರಾತ್ರಿ 11:00 ಗಂಟೆ ಸುಮಾರಿಗೆ ನಾನು ನನ್ನ ಮೋಟರ್ ಸೈಕಲನ್ನು ಶಾಂತಿ ನಗರ ಬಡಾವಣೆಯಲ್ಲಿರುವ ನಮ್ಮ ಮನೆಯ ಮುಂದೆ ನಿಲ್ಲಿಸಿದ್ದು ಮರು ದಿವಸ ದಿನಾಂಕ: 09.07.2021 ರಂದು ಬೆಳಿಗ್ಗೆ 06:00 ಗಂಟೆಗೆ ಎದ್ದು ನೊಡಲಾಗಿ ನಮ್ಮ ಮೋಟರ್ ಸೈಕಲ್ ಇದ್ದಿರುವುದಿಲ್ಲ. ನಾನು ಕಲಬುರಗಿ ನಗರದಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ನನ್ನ ವಾಹನ ನನಗೆ ಸಿಕ್ಕಿರುವುದಿಲ್ಲ. ಇಲ್ಲಿಯ ವರೆಗೆ ನನ್ನ ವಾಹನ ಹುಡುಕಾಡಿ ಈ ವಿಷಯದ ಬಗ್ಗೆ  ಮನೆಯಲ್ಲಿ  ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಳುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ. ಅಂತ ಇತ್ಯಾದಿ ಇದ್ದ ಫಿರ್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ .

ಸಂಚಾರಿ-೦೨ ಪೊಲೀಸ ಠಾಣೆ :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ,  ಇಂದು ದಿನಾಂಕ ೦೮/೦೮/೨೦೨೧ ರಂದು ಮಧ್ಯರಾತ್ರಿ ೦೦:೧೦ ಎ.ಎಮ್ ಕ್ಕೆ ಕ್ಯೂಪಿ ಆಸ್ಪತ್ರೆ ಕಲಬುರಗಿಯಿಂದ ಮಾಹಿತಿ ತಿಳಿಸಿದ್ದೆನೆಂದರೆ, ಮಹಮ್ಮದ ಜಾವೀದ, ರುಕ್ಸಾನಾ ಬೇಗಂ, ರುಕ್ಕಯಬೇಗಂ, ಮಹಮ್ಮದ ಅಜರ ಅಹ್ಮದ, ಮಹಮ್ಮದ ಶಫಿ ಹಾಗು ಶೇಖ ಮಹಮ್ಮದ ಎಂಬುವರ ಆರ್.ಟಿ.ಎ ಎಮ್.ಎಲ್.ಸಿ ಗಳು ಮತ್ತು ಸುರಯಬೇಗಂ ತಂದೆ ಮಹಮ್ಮದ ಜಾವೀದ ಲಾರಿವಾಲೆ ಎಂಬುವರ ಬ್ರಾಟ್ ಡೆತ್ ಆರ್.ಟಿ.ಎ ಎಮ್.ಎಲ್.ಸಿ ವಸೂಲಾಗಿರುತ್ತದೆ ಎಂದು ತಿಳಿಸಿದ್ದಕ್ಕೆ ಕೂಡಲೆ ನಾನು ಕ್ಯೂಪಿ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳುಗಳ ಆರ್.ಟಿ.ಎ ಎಮ್.ಎಲ.ಸಿ ಮತ್ತು ಡೆತ ಎಮ್.ಎಲ್.ಸಿಗಳನ್ನು ಪಡೆದುಕೊಂಡು ಗಾಯಾಳುದಾರರನ್ನು ಕಂಡು ವಿಚಾರಿಸಿದ್ದು, ಇವರಲ್ಲಿ ಮಹಮ್ಮದ ಜಾವೀದ ತಂದೆ ಇಬ್ರಾಹಿಂದ ಲಾರಿವಾಲೆ ಸಾಃ ಸೇಡಂ ಇವರು ಒಂದು ಹೇಳಿಕೆ ನೀಡಿದ್ದೆನೆಂದರೆ, ನಿನ್ನೆ ದಿನಾಂಕ ೦೭/೦೮/೨೦೨೧ ರಂದು ತಾನು ಮತ್ತು ತನ್ನ ಹೆಂಡತಿ ರುಕ್ಸಾನಾಬೇಗಂ ರವರು ಕೂಡಿ ಇಂದು ದಿನಾಂಕ ೦೮/೦೮/೨೦೨೧ ರಂದು ಐತಾರ ಅಮಾವಾಸೆ ಇರುವುದರಿಂದ ಆಳಂದದ ಲಾಡ್ಲೆ ಮಶಾಕ ರ‍್ಗಾಕ್ಕೆ ರ‍್ಶನಕ್ಕೆ ಹೋಗಬೇಕೆಂದು ತಾನು, ತನ್ನ ಹೆಂಡತಿ ರುಕ್ಸಾನಾಬೇಗಂ ಹಾಗು ೭ ರ‍್ಷದ ರುಕ್ಕಯ ಬೇಗಂ, ೪ ರ‍್ಷದ ಸುರಯಬೇಗಂ ರವರು ಕೂಡಿ ಸೇಡಂದಿಂದ ಕಲಬುರಗಿಗೆ ಬಂದು ಕಲಬುರಗಿಯಲ್ಲಿ ರ‍್ಯಾದಿಯ ಅಕ್ಕನ ಮಗ ಮಹಮ್ಮದ ಅಜರ ಅಹ್ಮದ ಹಾಗು ಆತನ ಮಾವ ಮಹಮ್ಮದ ಶಫಿ ರವರೆಲ್ಲರೂ ಕೂಡಿಕೊಂಡು ಆಳಂದ ರ‍್ಗಾಕ್ಕೆ ಹೋಗುವ ಕುರಿತು ತಮ್ಮ ಪರಿಚಯದ ಅಟೋ ನಂ. ಕೆಎ ೩೯-೧೦೯೩ ನೇದ್ದರ ಚಾಲಕ ಶೇಖ ಮಹಮ್ಮದ ತಂದೆ ರಾಜಾಸಾಬ ಮುಲ್ಲಾವಾಲೆ ಈತನೊಂದಿಗೆ ಎಲ್ಲರೂ ಕೂಡಿಕೊಂಡು ನಿನ್ನೆ ದಿನಾಂಕ ೦೭/೦೮/೨೦೨೧ ರಂದು ರಾತ್ರಿ ೮:೦೦ ಗಂಟೆ ಸುಮಾರಿಗೆ ಕಲಬುರಗಿಯಿಂದ ಬಿಟ್ಟು ರಾತ್ರಿ ೮:೩೦ ಗಂಟೆ ಆಗಿರಬಹುದು  ಆಳಂದ ರೋಡಿನ ಕೆರೆಭೋಸಗಾ ಕ್ರಾಸಿನ ಸಮೀಪ ಹೋಗುತ್ತಿದ್ದಾಗ ಅದೆ ವೇಳೆಗೆ ಎದುರುಗಡೆ ರೋಡಿನಿಂದ ಒಂದು ಐಚರ ಮಿನಿ ಲಾರಿ ನಂ. ಎಮ್.ಹೆಚ್ ೧೬ ಸಿಸಿ ೪೩೮೧ ನೇದ್ದರ ಚಾಲಕನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೆ ಅಟೋದ ರೋಡಿನ ಕಡೆಗೆ ಬಂದು ಅಟೋಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಟೋ ಮತ್ತು ಅಪಘಾತ ಪಡಿಸಿದ ಐಚರ ವಾಹನ ರೋಡಿನ ಎಡಭಾಗದ ತಗ್ಗಿನಲ್ಲಿ ಬಿದ್ದಿದ್ದರಿಂದ ಎಲ್ಲರಿಗೆ ರಕ್ತಗಾಯಗಳಾಗಿದ್ದು, ಹಾಗು ಫರ‍್ಯಾದಿಯ ಬಲಗಾಲಿನ ತೊಡೆಯ ಭಾಗ ಮುರಿದಿದ್ದು ಹಾಗು ರುಕ್ಕಿಯಾ ಬೇಗಂ ಮಗುವಿಗೆ ಭಾರಿ ಪ್ರಮಾಣದ ಗಾಯವಾಗಿದ್ದು, ಉಳಿದವರಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ಐಚರ ಮಿನಿ ಲಾರಿಯ ಚಾಲಕನು ಘಟನೆಯನ್ನು ಕಂಡು ಅಲ್ಲಿಂದ ಓಡಿ ಹೋಗಿರುತ್ತಾನೆ. ಎಲ್ಲರೂ ಕೂಡಿಕೊಂಡು ಉಪಚಾರ ಕುರಿತು ಕಲಬುರಗಿಯ ಕ್ಯೂಪಿ ಆಸ್ಪತ್ರೆಯ ಹತ್ತೀರ ಬರುವಾಗ ಸುರಯಾಬೇಗಂ ೪ ರ‍್ಷದ ಮಗು ಭಾರಿಗಾಯದ ಬಾಧೆಯಿಂದ ಆಸ್ಪತ್ರೆ ಹತ್ತೀರ ರಾತ್ರಿ ೯:೩೦ ಗಂಟೆ ಸುಮಾರಿಗೆ ಮೃತ ಪಟ್ಟಿದ್ದು ಈ ಘಟನೆಗೆ ಸಂಬಂಧಪಟ್ಟಂತೆ ಐಚರ ಲಾರಿಯ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಹೇಳಿಕೆ ಫರ‍್ಯಾದಿ ನಿಡಿದರ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 12-08-2021 12:55 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080