ಅಭಿಪ್ರಾಯ / ಸಲಹೆಗಳು

ಸುರಕ್ಷತೆಯ ಬಗ್ಗೆ ಉಪಯುಕ್ತ ಮಾಹಿತಿ

 

ಮನೆಯಲ್ಲಿ ಭದ್ರತೆ :

 

 • ನಿಮ್ಮ ಮನೆಯ ಬಾಗಿಲುಗಳನ್ನು ಲಾಕ್ ಮಾಡುವುದನ್ನು ಮರೆಯಬೇಡಿ.

 • ಹೆಚ್ಚುವರಿ ಭದ್ರತೆಗಾಗಿ ನಿಮ್ಮ ಮನೆಯ ಮುಂದಿನ ಮತ್ತು ಹಿಂದಿನ ಬಾಗಿಲುಗಳಿಗೆ ಕಬ್ಬಿಣದ ಸರಳುಗಳುಳ್ಳ ಗೇಟ್ ಗಳನ್ನು ಅಳವಡಿಸಿಕೊಳ್ಳಿ.

 • ಮನೆಯ ಹಿತ್ತಲಿನಲ್ಲಿ ಕೆಲಸ ಮಾಡುವಾಗ ಮನೆಯ ಮುಂಭಾಗದ ಬಾಗಿಲನ್ನು ಮುಚ್ಚಿ ಲಾಕ್ ಮಾಡುವುದನ್ನು ಮರೆಯಬೇಡಿ.

 • ಅಪರಿಚಿತ ವ್ಯಕ್ತಿಗಳಾಗಿದ್ದಲ್ಲಿ ಅವರು ಯಾವುದೇ ಕಾರಣ ಹೇಳಿದರೂ ಅವರಿಗೆ ಮೆನಯ ಬಾಗಿಲನ್ನು ತೆರೆಯಬೇಡಿ.

 • ಮನೆಯ ಬಾಗಿಲಿನಲ್ಲಿ ಸಣ್ಣ ರಂದ್ರ ಮತ್ತು ಸೇಫ್ಟಿ ಚೈನ್ ಅನ್ನು ಅಳವಡಿಸುವುದರಿಂದ ಅಪರಿಚಿತರನ್ನು ಮನೆಯ ಹೊರಗಿನಿಂದಲೆ ಗುರುತಿಸಲು ಸಹಾಯವಾಗುತ್ತದೆ.

 • ನಿಮಗೆ ಅನುಮಾನವಿದ್ದಲ್ಲಿ ಸುರಕ್ಷಿತವಾಗಿರುವಂತೆ ವರ್ತಿಸಿ ಹಾಗು ಅಪರಿಚತರನ್ನು ಮನೆಯೊಳಗೆ  ಬಿಡಬೇಡಿ.

 • ಮನೆಯ ಮುಂದೆ ಪ್ರಕಾಶಮಾನವಾದ ದೀಪಗಳನ್ನು ಅಳವಡಿಸುವುದರಿಂದ ಮನೆಗಳ್ಳರಾಗಿರಬಹುದಾದ ವ್ಯಕ್ತಿಗಳನ್ನು ಗುರುತಿಸಬಹುದು.

 • ನಿಮ್ಮ ಮನೆಯ ನಂಬರ್ ಅನ್ನು ಮನೆಯಮುಂದೆ ಸರಿಯಾಗಿ ಅಳವಡಿಸುವುದರಿಂದ ತುರ್ತು ಸಂದರ್ಭಗಳಲ್ಲಿ ವೈಧ್ಯಕೀಯ ಸಿಬ್ಬಂಧಿ, ಪೊಲೀಸ್ ಸಿಬ್ಬಂಧಿರವರಿಗೆ  ಸಹಾಯ ನೀಡಲು ಸಹಕಾರಿಯಾಗುತ್ತದೆ.

 • ನಿಮ್ಮ ಮನೆಯ ಕೀ ಗಳನ್ನು ಗಿಡಗಳ ಪಾಟ್  ಅಡಿಯಲ್ಲಿ, ಮ್ಯಾಟ್ ಅಡಿಯಲ್ಲಿ, ಪೋಸ್ಟ್ ಬಾಕ್ಸ್ ಗಳಲ್ಲಿ ಇಡುವುದನ್ನು ತಪ್ಪಿಸಿ. ನೀವು ಒಂಟಿಯಾಗಿದ್ದಲ್ಲಿ ನಿಮ್ಮ ಕುಟುಂಬದ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ಪ್ರತಿನಿತ್ಯ ಕರೆಮಾಡಲು ತಿಳಿಸಿ.

 

 

ರಸ್ತೆಯಲ್ಲಿ ಚಲಿಸುವಲ್ಲಿ ಸುರಕ್ಷತಾ ಅಂಶಗಳು :

 

 • ನೀವು ಮನೆಯಿಂದ ಹೊರಗೆ ಹೋಗುವಾಗ ನಿಮ್ಮ ಅಮ್ಯೂಲ್ಯವಾದ ವಸ್ತುಗಳನ್ನು ಮನೆಯಲ್ಲೇ ಬಿಡಿ.

 • ಅವಶ್ಯಕತೆಗಿಂತ ಹೆಚ್ಚಿನ ಹಣವನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬೇಡಿ.

 • ಅಜ್ಞಾತ  ಅಥವಾ ಕತ್ತಲಿನ ಪ್ರದೇಶಗಳಲ್ಲಿ ಒಂಟಿಯಾಗಿ ನಡೆದಾಡಬೇಡಿ.

 • ನಿಮ್ಮ ಬ್ಯಾಗ್ ಅನ್ನು ನಿಮ್ಮ ಶರೀರಕ್ಕೆ ಹತ್ತಿರವಾಗಿ ಇಟ್ಟುಕೊಳ್ಳಿ.

 • ಚಿಲ್ಲರೆ ಹಣವನ್ನು ಪರ್ಸ್ ಅಥವಾ ವಾಲ್ಲೆಟ್ ನಲ್ಲಿ ಇಟ್ಟುಕೊಳ್ಳಿ. ನಿಮ್ಮ ಕ್ರೆಡಿಟ್ ಕಾರ್ಡ್, ನೋಟುಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ಟ್ರೌಷರ್ ನ ಹಿಂಭಾಗದ ಪ್ಯಾಕೆಟ್ ನಲ್ಲಿ ಇಡಬೇಡಿ. ಅವುಗಳನ್ನು ನಿಮ್ಮ ಪ್ಯಾಕೆಟ್ ನ ಒಳಭಾಗದಲ್ಲಿ ಇಡಿ

 • ಒಂದು ವೇಳೆ ನೀವು ರಸ್ತೆಯಲ್ಲಿ ದರೋಡೆಗೆ ಒಳಗಾದಲ್ಲಿ, ಆತಂಕಕ್ಕೆ ಈಡಾಗದೆ ತಾಳ್ಮೆಯಿಂದಿರಿ. ನೀವು ಅವರೊಂದಿಗೆ ಹೊಡೆದಾಟದಲ್ಲಿ ಪಾಲ್ಗೊಂಡಲ್ಲಿ ನಿಮಗೆ ಗಾಯಗಳಾಗಬಹುದು. ನಡೆಯುತ್ತಿರುವ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಇದರಿಂದ ನೀವು ಪೊಲೀಸ್ ಇಲಾಖೆಗೆ ಗರಿಷ್ಠ ಮಾಹಿತಿಯನ್ನು ನೀಡಬಹುದಾಗಿರುತ್ತದೆ.

 

 

ಸಾರ್ವ ಜನಿಕ ಸಂಚಾರಿ ವ್ಯವಸ್ಥೆಗೆ ಸಂಬಂಧಿಸಿದಂತೆ ಸುರಕ್ಷತಾ ಅಂಶಗಳು :

 

 • ನಿರ್ಜನ ನಿಲ್ದಾಣಗಳನ್ನು ಬಳಸದೇ, ಹೆಚ್ಚು ಬೆಳಕಿರುವ ನಿಲ್ದಾಣಗಳನ್ನು ಬಳಸಿ

 • ಈಗಾಗಲೇ ನಿಲ್ದಾಣಗಳಲ್ಲಿ ಕಾಯುತ್ತಿರುವ ಪ್ರಯಾಣಿಕರಿಗೆ ಹತ್ತಿರದಲ್ಲಿ ನಿಂತುಕೊಳ್ಳಿ

 • ಬಸ್ ಅಥವಾ ಟ್ರೈನ್ ಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಜಾಗೃತರಾಗಿರಿ ಹಾಗೂ ಅವಶ್ಯಕತೆ ಕಂಡುಬಂದಲ್ಲಿ ಎಚ್ಚರಿಕೆ ಗಂಟೆಯನ್ನು ಬಳಸಿರಿ

 •  ಸಾರಿಗೆಯು ಒಂದು ವೇಳೆ ಭಾಗಶ: ಖಾಲಿಯಾಗಿದ್ದಲ್ಲಿ ಆದಷ್ಟು ಚಾಲಕರ ಸಮೀಪ ಇರುವ ಆಸನದಲ್ಲಿ ಕುಳಿತುಕೊಳ್ಳಿ.

 • ನೀವು ಇಳಿಯಬೇಕಾದ ಸ್ಥಳ ತಲುಪಿದಲ್ಲಿ, ನಿಮ್ಮ ಜೊತೆ ಬೇರೆಯಾರಾದರು  ಇಳಿದಿರುವ ಬಗ್ಗೆ ಗಮನಿಸಿ.

 • ಒಂದು ವೇಳೆ ನಿಮ್ಮನ್ನು ಯಾರಾದರು ಹಿಂಬಾಲಿಸಿದ್ದಲ್ಲಿ ಹತ್ತಿರದಲ್ಲಿರುವ ಮನೆ/ಬಲ್ಡಿಂಗ್ ಬಳಿ ಹೋಗಿ ಸಹಾಯವನ್ನು ಯಾಚಿಸಿ.

 

 

ಕಾರ್ ಗೆ ಸಂಬಂಧಿಸಿದಂತೆ ಸುರಕ್ಷತಾ ಅಂಶಗಳು :

 

 • ನಿಮ್ಮ ಕಾರ್ ಸುಸ್ಥಿತಿಯಲ್ಲಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಲ್ಲಿ ಇಲ್ಲಾವಾದಲ್ಲಿ ನಿಮ್ಮ ಕಾರ್ ಕೆಟ್ಟು ನಿಂತು,  ನೀವು ಖಾಲಿ ರಸ್ತೆಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು.

 • ನಿಮ್ಮ ಅಮೂಲ್ಯ ವಸ್ತುಗಳನ್ನು ಅಥವಾ ಪ್ಯಾಕೇಜ್ ಗಳನ್ನು ಕಾರ್ ನ ಸೀಟ್ ಮೇಲೆ ಎಲ್ಲರಿಗೂ ಗೋಚರಿಸುವ ಹಾಗೆ ಇಡಬೇಡಿ. ಅವುಗಳನ್ನು ಸೀಟ್ ನ ಕೆಳಭಾಗದಲ್ಲಿ ಇರಿಸಿ.

 • ವಾಹನವು ಚಲಿಸುತ್ತಿರುವಾಗ ವಾಹನದ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಡಿ.

 • ನಿಮ್ಮ ವಾಹನವನ್ನು ರಾತ್ರಿ ವೇಳೆಯಲ್ಲಿ ಹೆಚ್ಚು ಬೆಳಕಿರುವ ಸ್ಥಳದಲ್ಲಿ ನಿಲ್ಲಿಸಿ.

 • ದಾರಿಹೋಕರನ್ನು ನಿಮ್ಮ ವಾಹನದಲ್ಲಿ ಹತ್ತಿಸಿಕೊಳ್ಳಬೇಡಿ.

 • ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಿಮ್ಮ ವಾಹನದ ಹತ್ತಿರ ಬರುವ ಅಪರಿಚಿತರ ಬಗ್ಗೆ ಜಾಗೃತೆವಹಿಸಿ.

 • ಒಂದು ವೇಳೆ ನಿಮ್ಮ ವಾಹನವನ್ನು ಬೇರಾವುದೋ ವಾಹನ ಹಿಂಬಾಲಿಸುತ್ತಿರುವುದು ಖಾತರಿಯಾದಲ್ಲಿ ನಿಮ್ಮ ವಾಹನವನ್ನು ಹತ್ತಿರದ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ.

 • ಒಂದು ವೇಳೆ ನೀವು ಬೆದರಿಕೆಗೆ ಒಳಪಟ್ಟಲ್ಲಿ ನಿರಂತರವಾಗಿ ನಿಮ್ಮ ವಾಹನದ ಹಾರ್ನ್ ನಿಂದ ಶಬ್ದ ಮಾಡಿ.

 

 

ಸಾಮಗ್ರಿಗಳನ್ನು ಖರೀದಿಸುವ ಸಂಬಂಧ ಸುರಕ್ಷತಾ ಅಂಶಗಳು :

 

 • ಸಾಮಾಗ್ರಿಗಳನ್ನು ಖರೀದಿಸುವಲ್ಲಿ ನಿಮ್ಮ ಪರ್ಸ್ ಅಥವಾ ಹ್ಯಾಂಡ್ ಬ್ಯಾಗ್ ಅನ್ನು ಸಾಮಗ್ರಿ ಸಾಗಿಸುವ ಟ್ರಾಲಿಯಲ್ಲಿ ಇಡಬೇಡಿ.

 • ನಿಮ್ಮ ಪರ್ಸ್ ಅಥವಾ ಹ್ಯಾಂಡ್ ಬ್ಯಾಗ್ ಅನ್ನು ಕೌಂಟರ್ ಬಳಿ ಇಡಬೇಡಿ. ಒಂದು ವೇಳೆ ಇಟ್ಟಲ್ಲಿ ಕ್ಷಣಮಾತ್ರಕ್ಕೂ ಅವುಗಳಿಂದ ದೂರ ಸರಿಯಬೇಡಿ.

 • ಶಾಪಿಂಗ್ ಮಾಲ್ ಗಳಲ್ಲಿ ಜೇಬು ಕಳ್ಳರು, ಬ್ಯಾಗ್ ಕಿತ್ತುಕೊಂಡು ಹೋಗುವವರ ಬಗ್ಗೆ ಎಚ್ಚರವಿರಲಿ.

 • ನಿಮ್ಮ ವಾಲ್ಲೆಟ್ ಅಥವಾ ಪರ್ಸ್ ಅನ್ನು ಎಲ್ಲರಿಗೂ ಕಾಣುವ ಹಾಗೆ ಇಡಬೇಡಿ. ಮತ್ತು ಅವುಗಳನ್ನು ನಿಮ್ಮ ಬಟ್ಟೆಯ ಹಿಂದಿನ ಪಾಕೆಟ್ ಗಳಲ್ಲಿ ಇಡಬೇಡಿ.

 

ಸಾಮಾನ್ಯ ಸುರಕ್ಷತೆ ಅಂಶಗಳು :

 

 • ವೃದ್ದರು ಪೆನ್ಷನ್ ಪಡೆಯುವ ಬಗ್ಗೆ ಅಪರಾಧಿಗಳಿಗೆ ತಿಳಿದಿರುವ ಸಾದ್ಯತೆ ಇದ್ದು, ಆದ್ದರಿಂದ ಪೆನ್ಷನ್ ಹಣವನ್ನು ಖಾತೆಗೆ ಜಮಾಯಿಸುವಂತೆ ಅಥವಾ ನೇರವಾಗಿ ಸಂದಾಯವಾಗುವಂತೆ ಕ್ರಮಕೈಗೊಳ್ಳುವುದು.

 • ನೀವು ಅಪಾಯದಲ್ಲಿದ್ದಾಗ ಸಹಾಯ ಕೋರುವುದು ಮತ್ತು ಸಹಾಯ ದೊರೆಯುವವರೆಗೆ ಕಾಯುವುದು.

 • ತುರ್ತು ಸಂಪರ್ಕಗಳಾದ ಪೊಲೀಸ್, ಅಗ್ನಿಶಾಮಕ, ಆಂಬುಲೆನ್ಸ್, ಡಾಕ್ಟರ್, ಹತ್ತಿರದ ಸಂಬಂಧಿಗಳು, ನೆರೆಹೊರೆಯವರ ದೂರವಾಣಿ ಸಂಖ್ಯೆಗಳನ್ನು ನಿಮ್ಮ ಹತ್ತಿರದಲ್ಲಿ ಇಟ್ಟುಕೊಳ್ಳುವುದು. ಒಂದು ವೇಳೆ ತುರ್ತು ಪರಿಸ್ಥಿತಿ ಎದುರಾದಲ್ಲಿ ತಕ್ಷಣ ತುರ್ತು ಸಂಪರ್ಕಗಳನ್ನು ಉಪಯೋಗಿಸುವುದು.

 

ಇತ್ತೀಚಿನ ನವೀಕರಣ​ : 13-10-2020 04:14 PM ಅನುಮೋದಕರು: COPKBC


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080